ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದಲ್ಲಿ ಸೇಸಪ್ಪ ಕೋಟ್ಯಾನ್ ಅವರಿಗೆ ಸನ್ಮಾನ
ಬಂಟ್ವಾಳ: ಬಿ.ಸಿ.ರೋಡು ಪೋಲೀಸ್ ಲೈನ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪಚ್ಚಿನಡ್ಕ ಸೇಸಪ್ಪ ಕೋಟ್ಯಾನ್ ಅವರ 50 ನೇ ಶುಭಯಾನ ಕಾರ್ಯಕ್ರಮದ ಅಂಗವಾಗಿ ಅವರಿಗೆ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಇಂದು ಜೂನ್ 5 ರಂದು ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಆನಂದ, ಕಾರ್ಯದರ್ಶಿ ಜಗನ್ನಾಥ ಶೆಟ್ಟಿ , ಸಮಿತಿ ಸದಸ್ಯರು ಹಾಗೂ ಅನ್ನಪೂರ್ಣೇಶ್ವರಿ ಮಾತೃ ಸಂಘದ ಅಧ್ಯಕ್ಷ ರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.