ಬಂಟ್ವಾಳ: ತಾಲ್ಲೂಕಿನ ಬ್ರಹ್ಮರಕೂಟ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆಸಿಐ ಘಟಕ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ‘ಜೆಸಿಐ ಉದ್ಯಾನವನ ಗೋ ಗ್ರೀನ್’ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು.
ಇಲ್ಲಿನ ಬ್ರಹ್ಮರಕೂಟ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆಸಿಐ ಘಟಕ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ‘ಜೆಸಿಐ ಉದ್ಯಾನವನ ಗೋ ಗ್ರೀನ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು. ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಸಂರಕ್ಷಣೆಗೆ ಒತ್ತು ನೀಡಲು ಇಂತಹ ಜನಪರ ಮತ್ತು ಸಾಮಾಜಿಕ ಕಾಳಜಿ ಕಾರ್ಯಕ್ರಮ ಪೂರಕವಾಗಲಿದೆ ಎಂದರು.
ಜೆಸಿಐ ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಮುಖ್ಯ ಶಿಕ್ಷಕಿ ಫ್ಲೋರಿನ್ ರೆಬೆಲ್ಲೋ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧ ದಯಾನಂದ ಶುಭ ಹಾರೈಸಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಉಚಿತ ಲೇಖನಿ ಪುಸ್ತಕ ವಿತರಿಸಲಾಯಿತು. ಪ್ರಮುಖರಾದ ಚಿತ್ತರಂಜನ್ ಶೆಟ್ಟಿ ಬೊಮಡಾಲ, ಜೀತ್ ಮಿಲನ್ ರೋಚ್, ಉಮೇಶ್ ಆರ್.ಮೂಲ್ಯ, ರವೀನಾ ಕುಲಾಲ್, ಶಿವಪ್ರಸಾದ್ ಕನಪಾಡಿ, ವೆಂಕಟೇಶ್ ಕೃಷ್ಣಾಪುರ, ಮನೋಜ್ ಕನಪಾಡಿ, ರವಿ ಜೈನ್, ಮಧುಸೂದನ್ ಶೆಣೈ ಮತ್ತಿತರರು ಇದ್ದರು.
