ಬಂಟ್ವಾಳ: ತಾಲ್ಲೂಕಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆನರಾ ರೊಬೆಕೊ ಅಸೆಟ್ ಮ್ಯಾನೇಜ್ ಮೆಂಟ್ ಸಂಸ್ಥೆ ವತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಸೋಮವಾರ ನಡೆಯಿತು.
ಇಲ್ಲಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆನರಾ ರೊಬೆಕೊ ಅಸೆಟ್ ಮ್ಯಾನೇಜ್ ಮೆಂಟ್ ಸಂಸ್ಥೆ ವತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಸೋಮವಾರ ನಡೆಯಿತು. ಸಂಸ್ಥೆಯ ವಲಯ ಮುಖ್ಯಸ್ಥ ಮುರಳೀಧರ ಜಿ.ಶೆಣೈ ಮತ್ತು ಹಳೆ ವಿದ್ಯಾರ್ಥಿ ರಾಜೇಶ ಅಂಚನ್ ಸಂಸ್ಥೆಯ ಧ್ಯೇಯೋದ್ದೇಶ ತಿಳಿಸಿದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಡೊಂಬಯ ಅರಳ, ಹರೀಶ ಆಚಾರ್ಯ ರಾಯಿ, ಇಂದಿರಾ ಶುಭ ಹಾರೈಸಿದರು. ಶಿಕ್ಷಕರಾದ ರಮೇಶ ಮಯ್ಯ, ಜನಾರ್ದನ ಮತ್ತಿತರರು ಇದ್ದರು.
ಇದೇ ವೇಳೆ ಗರಿಷ್ಟ ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಮುಖ್ಯಶಿಕ್ಷಕ ಸಿಪ್ರಿಯಾನ್ ಡಿಸೋಜ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಪ್ರವೀಣ ಕಾಮತ್ ವಂದಿಸಿದರು. ಶಿಕ್ಷಕಿ ಸೌಮ್ಯಾ ಎಚ್.ಕಾರ್ಯಕ್ರಮ ನಿರೂಪಿಸಿದರು.
