ಬಂಟ್ವಾಳ: ಸುವರ್ಣನಾಡು ಹಿಂದೂ ಜಾಗರಣ ವೇದಿಕೆ ಘಟಕ ವತಿಯಿಂದ ಸುವರ್ಣನಾಡು ಭಜನಾ ಮಂಡಳಿ ಮಕ್ಕಳಿಗೆ ಉಚಿತ ಲೇಖನ ಪುಸ್ತಕ ವಿತರಣೆ ಜೂ.04ರಂದು ಶನಿವಾರ ನಡೆಯಿತು. ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣ ಗೌಡ, ಬಾಲಕೃಷ್ಣ ಪೂಜಾರಿ, ಪ್ರಧಾನ ಅರ್ಚಕ ರಘುರಾಮ್ ಭಟ್, ಸುರೇಶ್ ಪೂಜಾರಿ, ಘಟಕ ಅಧ್ಯಕ್ಷ ವಿಶ್ವನಾಥ ಎಂ.ಕೆ., ದೀಕ್ಷಾ ಸುವರ್ಣನಾಡು ಮತ್ತಿತರರು ಇದ್ದರು.
