ಪಾಣೆಮಂಗಳೂರು: ಸುಟ್ಟು ಕರಕಲಾದ ಬೇಕರಿ , ಅಪಾರ ನಷ್ಟ
ಬಂಟ್ವಾಳ : ತಾಲ್ಲೂಕಿನ ಪಾಣೆಮಂಗಳೂರು ಅಯ್ಯಂಗಾರ್ ಬೇಕರಿ ಸಂಪೂರ್ನ ಸುಟ್ಟು ಕರಕಲಾಗಿದೆ. ಪಾಣೆಮಂಗಳೂರು ಪೇಟೆಯಲ್ಲಿ ಕಳೆದ ಎರಡು ವರ್ಷಗಳಿಂದ ಬೇಳೂರು ನಿವಾಸಿ ಮಂಜುನಾಥ ನಾಯಕ್ ಎಂಬವರು ನಡೆಸುತ್ತಿರುವ ಅಯ್ಯಂಗಾರ್ ಬೇಕರಿ ಗುರುವಾರ ತಡರಾತ್ರಿ ಹಠಾತ್ ಬೆಂಕಿಗೆ ಆಹುತಿಯಾಗಿದೆ.
ಅಲ್ಲಿನ ಪೀಠೋಪಕರಣ ಸಹಿತ ವಿದ್ಯುತ್ ಉಪಕರಣ ಮತ್ತಿತರ ಸಾಮಾಗ್ರಿ ಸುಟ್ಟು ಕರಕಲಾಗಿ ಸುಮಾರು ರೂ ೧೦ ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಇದೇ ವೇಳೆ ನಗರ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಅಷ್ಟರಲ್ಲಿ ಎಲ್ಲವೂ ಸುಟ್ಟು ಕರಕಲಾಗಿದೆ ಎಂದು ದೂರಿಕೊಂಡಿದ್ದಾರೆ.