ಬಂಟ್ವಾಳ: ಬಿರುವೆರ್ ಸೇವಾ ಟ್ರಸ್ಟ್ ನರಿಕೊಂಬು, ಕರ್ನಾಟಕ ಕಟ್ಟಡ ಮತ್ತು ನಿರ್ಮಾಣ ಕಲ್ಯಾಣ ಮಂಡಳಿ ಇದರ ಆಶ್ರಯದಲ್ಲಿ ಹಿಂದ್ ಲ್ಯಾಬ್ಸ್ ಮಂಗಳೂರು ಇದರ ಸಹಯೋಗದೊಂದಿಗೆ ನೋಂದಾಯಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕಿಟ್ ವಿತರಣೆ ಕಾರ್ಯಕ್ರಮ ನರಿಕೊಂಬು ದ.ಕ. ಜಿ.ಪ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ.22ರಂದು ಭಾನುವಾರ ನಡೆಯಿತು.WhatsApp Image 2022-06-04 at 9.21.15 PM

ಕಾರ್ಯಕ್ರಮವನ್ನು ಅಧ್ಯಕ್ಷ ದಿನೇಶ್ ಭಾಗಿರಥಿ ಕೋಡಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಘಿ ಭಾಗವಹಿಸಿದ್ದ ಸಂಸ್ಥೆಯ ಗೌರವ ಸಲಹೆಗಾರ ಪುರುಷೋತ್ತಮ ಸಾಲ್ಯಾನ್ ಮಾತನಾಡಿ ಬಿರುವೆರ್ ಸೇವಾ ಟ್ರಸ್ಟ್ ಮೂಲಕ ಹಲವಾರು ಜನಪರ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು ಗ್ರಾಮದ ಮಾದರಿ ಸಂಸ್ಥೆಯಾಗಿ ಮೂಡಿ ಬರುತ್ತಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ಉಚಿತ ಆರೋಗ್ಯ ತಪಾಸಣ ಶಿಬಿರ ಹಾಗೂ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎಲ್ಲರೂ ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.

ಗೌರವಾಧ್ಯಕ್ಷರಾದ ಶ್ರೀಧರ ಮೇಸ್ತ್ರಿ, ಕೃಷ್ಣಪ್ಪ ಪೂಜಾರಿ ನಾಟಿ, ಪ್ರಧಾನ ಕಾರ್ಯದರ್ಶಿ ಸಂಜೀವ ನಾಟಿ, ಉಪಾಧ್ಯಕ್ಷ ಪ್ರಮೋದ್ ಕೇದಿಗೆ, ಜೊತೆ ಕಾರ್ಯದರ್ಶಿ ಸತೀಶ್ ನಾಟಿ, ಕೋಶಾಧಿಕಾರಿ ಸದಾಶಿವ ನಾಟಿ, ಸಂಘಟನಾ ಕಾರ್ಯದರ್ಶಿ ಮನೋಜ್ ಪೂಜಾರಿ ನಿರ್ಮಲ್, ಟ್ರಸ್ಟಿಗಳಾದ ಸೀತಾರಾಮ ಬೋಳಂತೂರು, ನಾರಾಯಣ ದರ್ಕಸ್, ರಾಜೇಶ್ ಬೋಳಂತೂರು, ಯೋಗೀಶ್ ಅಮೀನ್ ನಾಟಿ, ಲೆಕ್ಕಪರಿಶೋಧಕ ಕಿಶೋರ್ ಕಲ್ಯಾಣ್ ಅಗ್ರಹಾರ, ಪ್ರಮುಖರಾದ ಮಾಧವ ಕರ್ಬೆಟ್ಟು, ವಾರ್ಡ್ ಸಂಚಾಲಕರಾದ ಭಾರತಿ ನಾಯಿಲ, ಮಹೇಶ್ ರಾಯಸ, ಲೋಕೇಶ್, ಮೋಹನ್ ಕಲ್ಯಾರ್ ಪ್ರಮುಖರಾದ ವಾಮನ ಕರ್ಬೇಟ್ಟು, ರಮೇಶ್ ಪೂಜಾರಿ ನಾಟಿ, ಸತೀಶ್ ಸಜಂಕ್‌ಪಳಿಕೆ, ಲೋಕನಾಥ ಭಾಗಿರತಿಕೋಡಿ, ಹಿಂದ್ ಲ್ಯಾಬ್ ಸಂಯೋಜಕ ಉಮೇಶ್, ಎನಪೋಯ ಆಸ್ಪತ್ರೆಯ ವೈದ್ಯ ಡಾ. ಸೂರಜ್ ಉಪಸ್ಥಿತರಿದ್ದರು. ಶಿಬಿರದಲ್ಲಿ ಕಣು, ಕಿವಿ, ಗಂಟಲು, ಬಿ.ಪಿ., ಶುಗರ್, ಮೂತ್ರ ಪರೀಕ್ಷೆ, ರಕ್ತ ಪರೀಕ್ಷೆ ಮತ್ತಿತರ ಆರೋಗ್ಯ ತಪಾಸಣೆ ಮಾಡಲಾಯಿತು. ಪ್ರತಿರಕ್ಷಣಾ ಕಿಟ್ ವಿತರಿಸಲಾಯಿತು.

By suddi9

Leave a Reply

Your email address will not be published. Required fields are marked *