ಮುಂಬಯಿ : ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ೨೦೨೨-೨೦೨೫ಕ್ಕೆ ಸಾಲಿನ ಆಡಳಿತ ಸಮಿತಿಗೆ ಕೆಳದೆ ಭಾನುವಾರ ಚುನಾವಣೆ ನಡೆಸಲ್ಪಟ್ತಿದ್ದು ಸೋಮವಾರ ಪ್ರಕಟಿಸಲ್ಪಟ್ಟ ಚುನಾವಣಾ ಫಲಿತಾಂಶದಂತೆ ಡಾ|ಸಚ್ಚಿದಾನಂದ ರೈ ಬಣವು ಪೂರ್ಣಪ್ರಮಾಣದಲ್ಲಿ ಆಯ್ಕೆಯಾಗಿದೆ.3 Vithal Abura

ಸಿಎ| ಶಾಂತಾರಾಮ ಶೆಟ್ಟಿ ಸೇರಿದಂತೆ ೧೦ ಮಂದಿ ಸ್ಪರ್ಧಾ ಕಣದಲ್ಲಿದ್ದು ಡಾ| ಸಚ್ಚಿದಾನಂದ ರೈ, ಸುಮನಾ ಬಿ., ಡಾ| ಸತೀಶ್ ರಾವ್, ಪತ್ರಕರ್ತ ಪಿ.ಬಿ ಹರಿಪ್ರಸಾದ್ ರೈ, ಲ| ಮೋಹನ್ ಶೆಟ್ಟಿ ಕೆ., ಗುರುದತ್ ಎಂ.ನಾಯಕ್, ಪುಷ್ಫರಾಜ್ ಜೈನ್, ಪ್ರಾಂಶುಪಾಲ ವಿಠಲ್ ಅಬುರ ಮತ್ತು ಯತೀಶ್ ಬೈಕಂಪಾಡಿ ಚುನಾಯಿಸಲ್ಪಟ್ಟಿದ್ದಾರೆ.2 P B Harish Rai

ಮೂರು ವರ್ಷಗಳ ಅವಧಿಗೆ ೧೦ ಕೌನ್ಸಿಲ್ ಸದಸ್ಯರನ್ನು ಆಯ್ಕೆ ಮಾಡಲು ದ.ಕ ಜಿಲ್ಲಾ ಇಂಡಿಯನ್ ರೆಡ್ ಕ್ರಾಸ್ ಕಾರ್ಯಕಾರಿ ಸಮಿತಿ ೨೦೨೨-೨೫ರ ಚುನಾವಣೆ ನಡೆಸಲಾಗಿದ್ದು, ರೆಡ್‌ಕ್ರಾಸ್‌ನ ೨೮೦೦ ಒಟ್ಟು ಸದಸ್ಯರಲ್ಲಿ ಸುಮಾರು ೯೫೩ ಸದಸ್ಯರು ತಮ್ಮ ಮತವನ್ನು ಚಲಾಯಿಸಿದ್ದರು. ೧೦ ಕೌನ್ಸಿಲ್ ಸದಸ್ಯತ್ವಕ್ಕೆ ೧೭ ಸದಸ್ಯರು ಅಭ್ಯರ್ಥಿಗಳಾಗಿದ್ದರು.1 CA. Shantarama Shetty

೧೮೬೪ರ ಜಿನೀವಾ ಸಮಾವೇಶದ ಮೂಲಕ ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಆಂದೋಲನದ್ ಮೂಲಕ ಸ್ಥಾಪಿತ ರೆಡ್‌ಕ್ರಾಸ್ ಸ್ವದೇಶವನ್ನು ಗೌರವಿಸಲು ಸ್ವಿಸ್ ರಾಷ್ಟ್ರಧ್ವಜವನ್ನು ಹಿಮ್ಮೆಟ್ಟಿಸುವ ಮೂಲಕ ಚಳವಳಿಯ ಹೆಸರು ಮತ್ತು ಲಾಂಛನವನ್ನು ಪಡೆದಿತ್ತು. ಮಾನವೀಯತೆ, ನಿಷ್ಪಕ್ಷಪಾತ, ತಟಸ್ಥತೆ, ಸ್ವಾತಂತ್ರ್ಯ, ಸ್ವಯಂಸೇವಕ ಸೇವೆ, ಏಕತೆ ಮತ್ತು ಸಾರ್ವತ್ರಿಕತೆ ಈ ಏಳು ಮೂಲಭೂತ ತತ್ವಗಳೊಂದಿಗೆ ಈ ಸಂಸ್ಥೆಯ ಉದಯವಾಗಿತ್ತು.

೦೭,ಜೂನ್.೧೯೨೦ ರಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸ್ಥಾಪಿಸಲಾಗಿ ಐವತ್ತು ಸದಸ್ಯರನ್ನು ಔಪಚಾರಿಕವಾಗಿ ನಾಮನಿರ್ದೇಶನ ಮಾಡಲಾಯಿತು ಮತ್ತು ಅವರಲ್ಲಿ ಮೊದಲ ವ್ಯವಸ್ಥಾಪಕ ಮಂಡಳಿಯನ್ನು ಸರ್ ಮಾಲ್ಕಮ್ ಹೈಲಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯು ಇಂಟರ್ ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಮೂವ್‌ಮೆಂಟ್‌ನ ಸದಸ್ಯವಗಿದೆ. ಐಆರ್‌ಸಿಎಸ್ ಮತ್ತು ಫೆಡರೇಶನ್‌ನ ಭಾರತ ನಿಯೋಗದ ನಡುವಿನ ಸಂಬಂಧಗಳು ಬಲವಾಗಿದ್ದು ಭಾರತೀಯ ರೆಡ್ ಕ್ರಾಸ್ ಒಂದು ಸ್ವಯಂಸೇವಾ ಮಾನವೀಯ ಸಂಸ್ಥೆಯಾಗಿ ಶ್ರಮಿಸುತ್ತಿದೆ. ಭಾರತ ರಾಷ್ಟ್ರದ್ಯಂತ ೭೦೦ ಶಾಖೆಗಳ ಜಾಲ ಹೊಂದಿದ್ದು, ವಿಪತ್ತುಗಳು ಯಾ ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ ಒದಗಿಸುತ್ತದೆ ಮತ್ತು ದುರ್ಬಲ ಜನರು ಮತ್ತು ಸಮುದಾಯಗಳಿಗೆ ಆರೋಗ್ಯ ಮತ್ತು ಆರೈಕೆಯನ್ನು ಉತ್ತೇಜಿಸುವಲ್ಲಿ ಶ್ರಮಿಸುತ್ತಿದೆ.

ಭಾರತೀಯ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ:
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲೆಯ ಹೊಸ ವ್ಯವಸ್ಥಾಪಕ ಸಮಿತಿಯು ಸಮಾಜದಲ್ಲಿ ದೂರಗಾಮಿ ಫಲಿತಾಂಶಗಳನ್ನು ನೀಡುವ ಕ್ರಿಯಾತ್ಮಕ ಕಾರ್ಯಕ್ರಮಗಳೊಂದಿಗೆ ಸೇವಾ ನಿರತವಾಗಿದೆ. ಹೊಸ ಯೋಜನೆಗಳನ್ನು ಹಾಕುತ್ತಾ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಅಪತ್ಕಾಲದ ಘಟನೆಗಳನ್ನು ಎದುರಿಸಲು ಜನರಿಗೆ ತರಬೇತಿ ನೀಡುವುದು. ಶ್ರೀಸಾಮಾನ್ಯನ ಅಗತ್ಯಗಳನ್ನು ಪರಿಹರಿಸುವುದು ಇತ್ಯಾದಿ ವಿವಿಧ ಸಮುದಾಯ ಸೇವೆಗಳನ್ನು ನಡೆಸಿದೆ ಮತ್ತು ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಮುಖ ಮತ್ತು ಪ್ರಮುಖ ಪಾತ್ರವನ್ನು ವಹಿಸಿದೆ.

By suddi9

Leave a Reply

Your email address will not be published. Required fields are marked *