ಉರ್ವಾಸ್ಟೋರಿನಲ್ಲಿ ‘ಮತ್ಸ್ಯ ಸಂಪದ’ಕ್ಕೆ ಶಿಲಾನ್ಯಾಸ
ಕೈಕಂಬ : ಪೇಜಾವರ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಶುಕ್ರವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿಗಮ ಮಂಗಳೂರು ಇದರ ನೂತನ ಪ್ರಧಾನ ಕಚೇರಿ ಸಂಕೀರ್ಣ ‘ಮತ್ಸ್ಯ ಸಂಪದ’ ಶಿಲಾನ್ಯಾಸ ನಡೆಯಿತು.
ಉರ್ವಾಸ್ಟೋರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಸಹಿತ ಕರಾವಳಿಯ ಶಾಸಕರು, ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ, ಮೇಯರ್ ಪ್ರೇಮಾನಂದ ಶೆಟ್ಟಿ, ನಾಡೋಜ ಜಿ ಶಂಕರ್, ಜನಪ್ರತಿನಿಧಿಗಳು, ಗಣ್ಯರು, ಮೊಗವೀರ ಸಮಾಜದ ಹಿರಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.