ನೆತ್ತರಕೆರೆ :ನವೋದಯ ಮಿತ್ರ ಕಲಾ ವೃಂದ (ರಿ)ಮತ್ತು ನೇತ್ರಾವತಿ ಮಾತೃ ಮಂಡಳಿ. 35ನೇ ವಾರ್ಷಿಕೋತ್ಸವದ ಸಂಭ್ರಮದ ಸಮಾರಂಭ.
ಕೈಕಂಬ : ನವೋದಯ ಮಿತ್ರ ಕಲಾ ವೃಂದ (ರಿ)ಮತ್ತು ನೇತ್ರಾವತಿ ಮಾತೃ ಮಂಡಳಿ ಇದರ 35ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಮೇ.07ರಂದು ಶನಿವಾರ ನೆತ್ತರಕೆರೆ ಶಾಲಾ ಮೈದಾನದಲ್ಲಿ ನಡೆಯಿತು.
ಅಂದು ಬೆಳಿಗ್ಗೆ 9ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಮಧ್ಯಾಹ್ನ 12ಕ್ಕೆ ಮಹಾಪೂಜೆಯ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ 6.30ಯಿಂದ ಬಾಲಗೋಕುಲದ ಪುಟಾಣಿಗಳಿಂದ “ನೃತ್ಯ ಸಿಂಚನ” ಮತ್ತು ನೇತ್ರಾವತಿ ಮಾತೃ ಮಂಡಳಿಯ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ರಾತ್ರಿ 8ಗಂಟೆಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ಇದರ ಅಧ್ಯಕ್ಷರಾದ ನ್ಯಾಯವಾದಿ ಅರುಣ್ ರೋಶನ್ ಡಿಸೋಜ ಅಧ್ಯಕ್ಷತೆಯನ್ನು ವಹಿಸಿದ್ದರು.ಮುಖ್ಯ ಅತಿಥಿಯಾಗಿ ಕಿತ್ತೂರ್ ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ, ನ್ಯಾಯವಾದಿ ಶೈಲಜಾ ರಾಜೇಶ್ ಆಗಮಿಸಿದ್ದರು, ವೇದಿಕೆಯಲ್ಲಿ ಸಂಘ ದ ಗೌರವಧ್ಯಕ್ಷ ಪಿ ಸುಬ್ರಮಣ್ಯ ರಾವ್,ಅಧ್ಯಕ್ಷ ಬಿ ಸುರೇಶ ಭಂಡಾರಿ ಅರ್ಬಿ,ಸಂಚಾಲಕ ದಾಮೋದರ ನೆತ್ತರಕೆರೆ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಕೆ,ಮಾತೃ ಮಂಡಳಿಯ ಅಧ್ಯಕ್ಷೆ ವಸಂತಿ ರಾಮಚಂದ್ರ,ಸಂಚಾಲಕಿ ಲಲಿತ ಸುಂದರ್ ವೇದಿಯಲ್ಲಿದ್ದರು.ಈ ಸಂದರ್ಭದಲ್ಲಿ ಪ್ರಮುಖರಾದ ಜ್ಯೋತಿಂದ್ರ ಶೆಟ್ಟಿ ಮುಂಡಾಜೆಗುತ್ತು,ಸದಾಶಿವ ಡಿ ತುಂಬೆ, ಜೀವನ್ ಪಿಂಟೋ, ನವೀನಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಧರ್ ಹೆಚ್ ಪ್ರಾರ್ಥಿಸಿ,ಪ್ರಶಾಂತ್ ಕೆ ಸ್ವಾಗತಿಸಿದರು. ಕಾರ್ಯದರ್ಶಿ ಲೋಕೇಶ್ ಎನ್ ವರದಿ ವಾಚಿಸಿದರು. ಸಂತೋಷ್ ಕುಲಾಲ್ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಹಿರಿಯ ನಾಟಿ ವೈದ್ಯೆ ಮೀನಾಕ್ಷಿ ನಾರಾಯಣ ಆಚಾರ್ಯ ಬಿಸಿ ರೋಡ್ ಇವರನ್ನು ಸನ್ಮಾನಿಸಲಾಯಿತು ಮತ್ತು ಜೂಡೋ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಗೆದ್ದ ಗಿತೇಶ್ ನೆತ್ತರಕೆರೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಸಂತೋಷ್ ಕುಲಾಲ್ ನೆತ್ತರಕೆರೆ ಇವರನ್ನು ಅಭಿನಂದಿಸಲಾಯಿತು.
ಸಭಾ ಕಾರ್ಯಕ್ರಮ ದ ಬಳಿಕ ಸಂಘದ ಸದಸ್ಯರು ಹಾಗೂ ಅತಿಥಿ ಕಲಾವಿದರ ಅಭಿನಯದ “ಉಡಲೇ ಮೋಕೆದ ಕಡಲ್” ಎಂಬ ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.