ಕೈಕಂಬ: ಬಡ ಮಹಿಳೆಯೊಬ್ಬರು ಸಾಲಸೂಲ ಮಾಡಿ ಮನೆ ನಿರ್ಮಾಣಕ್ಕೆ ಕೈ ಹಾಕಿದ ಸಂದರ್ಭದಲ್ಲೇ ಆಕೆಯ ಜೀವನದಲ್ಲಿ ವಿಧಿ ಆಟವಾಡಿದೆ !. ಸುಮಾರು ೬ ತಿಂಗಳ ಹಿಂದೆ, ಗಂಜಿಮಠ ಪಂಚಾಯತ್ ವ್ಯಾಪ್ತಿಯ ಗಾಂಧಿನಗರದ ಮನೆಯಲ್ಲಿ ಚಾಹ ಸಿದ್ಧಪಡಿಸುತ್ತಿದ್ದಾಗ ಆಕಸ್ಮಿಕವಾಗಿ ಸ್ಟವ್ ಸಿಡಿದು, ಇಂದಿರಾ ಆಚಾರ್ಯರ ಮೈ-ಕೈಗೆ ಬೆಂಕಿ ಹತ್ತಿಕೊಂಡಿತ್ತು. ಬಳಿಕ ಸುಮಾರು ಎರಡು ತಿಂಗಳು ಮಂಗಳೂರು ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಸದ್ಯ ಅತ್ಯಂತ ಚಿಂತಾಜನಕ ದೇಹಪ್ರಕೃತಿಯೊಂದಿಗೆ ಜೀವನ ಸಾಗಿಸುತ್ತಿರುವ ಇವರ ಹೊಸ ಮನೆ ಕನಸಿಗೆ ಸಂಘ-ಸಂಸ್ಥೆಯವರು, ಸ್ಥಳೀಯ ಜನಪ್ರತಿನಿಧಿಗಳು, ಸಮಾಜ ಸೇವಕರು, ತಾನು ಕೆಲಸ ಮಾಡುತ್ತಿದ್ದ ಭಾರತ್ ಚಿಕನ್ ಕಂಪೆನಿ ಮಾಲಕರು ನೆರವಿನ ಹಸ್ತ ಚಾಚಿದ್ದಾರೆ.gur-may-9-sunil nerau-2

ಇಂದಿರಾ, ಜಗದೀಶ ಆಚಾರ್ಯ ದಂಪತಿ ಮನೆಗೆ ಮೇ. ೮ರಂದು ಭಾನುವಾರ ಭೇಟಿ ನೀಡಿದ ತಾಲೂಕು ಪಂಚಾಯತ್‌ನ ಮಾಜಿ ಸದಸ್ಯ ಸುನಿಲ್ ಪೂಜಾರಿ ತನ್ನ ಕುಟುಂಬದ(ಪತ್ನಿ, ತಾ.ಪಂ ಮಾಜಿ ಸದಸ್ಯೆ ಪವಿತ್ರಾ ಎಸ್ ಮತ್ತು ಮಕ್ಕಳಾದ ನಿಶಿತ್, ನಿಖಿತ್) ಪರವಾಗಿ ೫೦,೦೦೦ ರೂ ಆರ್ಥಿಕ ನೆರವು ನೀಡಿದ್ದಾರೆ. ಈ ಸಂದರ್ಭದಲ್ಲಿ ಸಮಾಜಸೇವಕರಾದ ಜಯಂತ ಶೆಟ್ಟಿಗಾರ, ಸಂಜೀವ ಪೂಜಾರಿ ಹಾಗೂ ವಿದ್ಯುತ್ ಗುತ್ತಿಗೆದಾರ ಪ್ರವೀಣ್ ಪೂಜಾರಿ ನಾರ್ಲ ಉಪಸ್ಥಿತರಿದ್ದರು.gur-may-9-sunil nerau-1

ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬಾತ ೮ನೇ ಹಾಗೂ ಇನ್ನೊಬ್ಬ ೪ನೇ ತರಗತಿಯಲ್ಲಿ ಓದುತ್ತಿದ್ದಾನೆ. ಪ್ರಸಕ್ತ, ಈ ಕುಟುಂಬದ ದಯನೀಯ ಸ್ಥಿತಿ ಗಮನಿಸಿದ ಮಾಜಿ ಶಾಸಕ ಡಾ. ಬಿ. ಎ. ಮೊಯಿದಿನ್ ಬಾವಾ ಅವರು ಮನೆಗೆ ಭೇಟಿ ನೀಡಿ, ಮಕ್ಕಳ ಶಿಕ್ಷಣ ಹಾಗೂ ಮನೆ ನಿರ್ಮಾಣಕ್ಕೆ ನೆರವಾಗಿದ್ದಾರೆ. ಜಿಪಂ ಮಾಜಿ ಸದಸ್ಯ ಕೃಷ್ಣ ಅಮೀನ್, ವಿಶ್ವಕರ್ಮ ಸಮಾಜದವರ ಸಹಿತ ಹಲವರು ಈಗಾಗಲೇ ಈ ಕುಟುಂಬದ ಕಷ್ಟಕ್ಕೆ ನೆರವಾಗಿದ್ದಾರೆ.gur-may-9-indira-jagadish-2

ಇಂದಿರಾ ಅವರ ಗಂಟಲು, ಹೊಟ್ಟೆ ಭಾಗ ಹಾಗೂ ಕೈ ಸುಟ್ಟು ಹೋಗಿದ್ದು, ಸದ್ಯ ಅವರ ಕೈಯೊಂದು ಮೇಲೆತ್ತದಂತಾಗಿದೆ. ಗಂಡ ಜಗದೀಶ ಆಚಾರ್ಯರು ಬೇರೆಯವರಿಂದ ಕೆಲಸ ಪಡೆದು ಬೆಳ್ಳಿ ಕುಸುರಿ ಕೆಲಸ ಮಾಡುತ್ತಿದ್ದಾರೆ. ವಿಧಿಯಾಟದಿಂದ ಸಂಪೂರ್ಣ ನೊಂದಿರುವ ಇಂದಿರಾ ಅವರ ಚಿಕಿತ್ಸೆಗೆ, ಮಕ್ಕಳ ಶಿಕ್ಷಣಕ್ಕೆ ಹಾಗೂ ತಾತ್ಕಾಲಿಕ ಕಾರ್ಮಿಕನಾಗಿ ಮನೆಗೆ ಆಧಾರವಾಗಿರುವ ಜಗದೀಶರ ಕುಟುಂಬಕ್ಕೆ ಸಾರ್ವಜನಿಕರ ಸಹಕಾರ ಅವಶ್ಯವಾಗಿದೆ.gur-may-9-indira-jagadish-1ನೆರವಾಗುವವರು ಸಂಪರ್ಕಿಸಿ : ಇಂದಿರಾ, ಕೆನರಾ ಬ್ಯಾಂಕ್(ಬಡಗುಳಿಪಾಡಿ, ಗಂಜಿಮಠ) ಖಾತೆ ಸಂಖ್ಯೆ :೦೨೭೬೨೨೫೦೦೦೫೬೮೬, ಐಎಫ್‌ಎಸ್‌ಸಿ ಕೋಡ್ : ಸಿಎನ್‌ಆರ್‌ಬಿ೦೦೧೦೨೭೬, ಎಂಐಸಿಆರ್ ಕೋಡ್ : ೫೭೫೦೧೫೧೩೨.

By Suddi9

Leave a Reply

Your email address will not be published. Required fields are marked *