ಹಳೆಯಂಗಡಿ: ಹಲೆಯಂಗಡಿ ಮನೆಯೊಂದರಲ್ಲಿ ಮತ್ತು ಮನೆಯಲ್ಲಿ ಆಕ್ರಮವಾಗಿ ಸಂಗ್ರಹಿಸಲಾಗಿದ್ದ ಅನ್ನದಾಸೋಹದ ಅಕ್ಕಿಯನ್ನು ಆಹಾರ ಇಲಾಖಾಧಿಕಾರಿಗಳು ಮತ್ತು ಕಂದಾಯಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಂಗಳೂರು ಆಹಾರ ಮತ್ತು ನಾಗರಿಕ ಇಲಾಖಾಧಿಕಾರಿಗಳು ಇಂದು ಹಳೆಯಂಗಡಿಯ ಮನೆಯೊಂದಕ್ಕೆ ಮತ್ತು ಅಂಗಡಿಗೆ ದಾಳಿ ನಡೆಸಿ ಸುಮಾರು ೫೫ ಕಿಂಟ್ವಾಲ್ ಅಕ್ಕಿಯನ್ನು ವಶ ಪಡಿಸಿಕೊಂಡಿದ್ದಾರೆ.
ರಾಜ್ಯಸರಕಾರದ ಮಹತ್ವಕಾಂಕ್ಷೆಯ ಯೋಜನೆ ಅನ್ನಬಾಗ್ಯದ ಅಕ್ಕಿ ವ್ಯಾಪಾರಿಗಳಿಗೆ ಈಗ ಸಖತ್ ಲಾಭ ಕೊಡುತಿದೆ, ಬೆಂಗಳೂರಿನ ಪುಡ್ ಕಂಟ್ರೋಲ್ ರೂಮ್ ಗೆ ಹಳೆಯಂಗಡಿ ಕೆಲ ನಿವಾಸಿಗಳು ಇಲ್ಲಿ ನಡೆಯುತಿರುವ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದರಿ ಆ ಮಾಹಿತಿಯನ್ನು ಆದರಿಸಿ ಇಂದು ಜಿಲ್ಲಾ ಆಹಾರ ಿಲಾಖೆ ಉಪನಿರ್ಧೇಶಕ ಶರಣಬಸಪ್ಪ ಆಹಾರ ಶಾಖೆಯ ಉಪ ತಹಶಲ್ದಾರ್ ಲಕ್ಷ್ಮೀನಾರಾಯಣ ರೆಡ್ಡಿ ಮಂಗಳೂರು ಆಹಾರ ಇಲಾಖಾ ಅಧಿಕಾರಿಗಳು ಹಳೆಯಂಗಡಿಯ ಮನೆಯೊಂದಕ್ಕೆ ದಾಳಿನಡೆಸಿದ್ದಾಗ ಅಲ್ಲಿ ೨೦ ಚಿಕ್ಕ ಚಿಕ್ಕ ಗೊಣಿ ಚೀಲಗಳಲ್ಲಿ ಸುಮಾರು ೩ ಕಿಂಟ್ವಾಲ್ ನಷ್ಟು ಅಕ್ಕಿಯು ಪತ್ತೆಯಾಗಿದ್ದು ಇಲ್ಲಿ ವಾಸಿಸುವ ಮಯ್ಯದ್ದಿ ಇಂದಿರಾನಗರ ಎಂಬುವವರು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ.
ಕಳೆಯಂಗಡಿ ಮಾರುಕಟ್ಟೆ ಮುಂದುಗಡೆ ಇರುವ ಬದ್ರುದ್ದೀನ್ ಅವರ ಬದ್ರೀಯಾ ಸ್ಟೊರ್ ಅಕ್ರಮ ಅಕ್ಕಿ ಇದೆ ಎಂದು ಮಾಹಿತಿ ಪಡೆದ ಅಧಿಕಾರಿಗಳು ಕೂಡಲೇ ದಾಳಿ ನಡೆಸಿದ್ದಾಗ ಅಂಗಡಿಯ ಮೇಲಿನ ಕೋಣೆಯಲ್ಲಿ ಗೋಣಿ ಚೀಲದಲ್ಲಿ ಸುಮಾರು ೫೦ ಕಿಂಟ್ವಾಲ್ ಅಕ್ಕಿ ಸಿಕ್ಕಿದ್ದು ಅದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ, ನ್ಯಾಯ ಬೆಲೆ ಅಂಗಡಿಯಿಂದ ಅಕ್ಕಿಯನ್ನು ತೆಗೆದುಕೊಂಡು ಗ್ರಾಹಕರು ನೇರವಾಗಿ ಬದ್ರುದ್ದೀನ್ ಅವರ ಅಂಗಡಿಗೆ ಅಕ್ಕಿಯನ್ನು ಮಾರುತ್ತಿದ್ದಾರೆ ಎಂದು ಅಂಗಡಿ ಮಾಲಕ ಬದ್ರುದ್ದೀನ್ ಒಪ್ಪಿ ಕೊಂಡಿದ್ದಾರೆ, ೧೦ ರೂಪಾಯಿ ಕೊಟ್ಟು ತೆಗೆದು ಕೊಂಡು ಬೇರೆಯವರಿಗೆ ಮಾರುತ್ತಿದ್ದೇನೆ, ಇದರ ಬದಲಾಗಿ ಗ್ರಾಹಕರು ಬೇರೆ ಸಾಮಾನುಗಳನ್ನು ತೆಗೆದುಕೊಂಡಿ ಹೊಗೊತ್ತಿದ್ದಾರೆ ಎನ್ನಲಾಗುತ್ತಿದೆ, ಮೊದಲು ದಾಳಿ ನಡೆಸುವಾಗ ಆಹಾರ ನೀರಿಕ್ಷಕರಾದ ವಾಸು ಶೆಟ್ತಿ ಮತ್ತು ಅಧಿಕಾರಿಗಳಿದ್ದು ಇಷ್ಟು ದೊಡ್ದ ಮಟ್ಟದ ಅಕ್ರಮ ನಡೆದಿದ್ದನ್ನು ಕಂಡು ತಾಶಿಲ್ದ್ದಾರ್ ಮೋಹನ್ ರಾವ್ ಮತ್ತು ಇತರ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿದ್ದಾರೆ,
ಮುಲ್ಕಿ ಉಪ ತಶಿಲ್ದ್ದಾರ್ ಪುಷ್ಪರಾಜ್, ವಿ.ಎ ಲೋಕೆಶ್, ಮತ್ತು ಕಿರಣ್ ದಾಳಿಗೆ ಸಹಕರಿಸಿದ್ದು ಮುಂದಿನ ಕ್ರಮ ಜರಗಿಸುದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. .ನಿಶಾಂತ್ ಕಿಲೆಂಜೂರು




