ಬಂಟ್ವಾಳ: ಬಿ.ಸಿ.ರೋಡಿನ ಬಸ್ತಿ ಪಡ್ಪು ಬಳಿ ನಿರ್ಮಿಸಲಾಗಿರುವ ಅಗ್ನಿಶಾಮಕ ಠಾಣೆಗೆ ಇನ್ನೂ ಉದ್ಘಾಟನೆಯ ಭಾಘ್ಯ ಒದಗಿ ಬಂದಿಲ್ಲ. ಆದರೆ ಅದಾಗಲೇ ಅದು ಭಿಕ್ಷುಕರು, ವಲಸಿಗರು ಹಾಗೂ ಕುಡುಕರ ಹಾಡಿಯಾಗಿ ಮಾರ್ಪಟ್ಟಿದೆ. ರಾತ್ರಿಯಾದರೆ ಹುಡುಗರ ಗುಂಪು ಸ್ಥಳದಲ್ಲಿ ಜಮಯಿಸುತ್ತದೆ. ಮಟ್ಕ ದಂದೆಗಳು ಅವ್ಯಾಹತವಾಗಿ ನಡೆಯಲು ಈ ಕಟ್ಟಡದಲ್ಲಿ ಅವಕಾಶ ಮಾಡಿಕೊಟ್ಟಂತಾಗಿದೆ. ಉದ್ಘಾಟನೆಗೆ ಮುನ್ನವೇ ಕಟ್ಟಡದ ಒಳ ಆವರಣದಲಲಿ ಹುಲ್ಲುಗಳು ಬೆಳೆದು ನಿಂತು ಸ್ವಚ್ಚತೆಗೆ ಸವಾಲೊಡ್ಡುತ್ತಿದೆ.


ಭೌಗೋಳಿಕವಾಗಿ ವಿಸ್ತಾರವಾದ ಭೂಪ್ರದೇಶವನ್ನು ಹೊಂದಿರುವ ಬಂಟ್ವಾಳ ತಾಲೂಕಿನ ಯಾವುದೇ ಮೂಲೆಯಲ್ಲಿ ಬೆಂಕಿ ಅವಘಡಗಳು ಉಂಟಾದಗ ರಕ್ಷಣೆಗಾಗಿ ಮಂಗಳೂರು, ಬೆಳ್ತಂಗಡಿ ಅಥವಾ ಪುತ್ತೂರಿನಿಂದ ಅಗ್ನಿಶಾಮಕದಳವನ್ನು ಕರೆಸಿಕೊಳ್ಳ ಬೇಕಾಗಿತ್ತು. ಅಷ್ಟು ದೂರದಿಂದ ಅಗ್ನಿಶಾಮಕದಳದ ವಾಹನ ಅವಘಡ ಉಂಟಾದ ಸ್ಥಳಕ್ಕೆ ತಲುಪುವ ಮುನ್ನವೇ ಸೊತ್ತುಗಳು ಅಗ್ನಿಯಲ್ಲಿ ಸುಟ್ಟು ಹೋಗಿ ಕಷ್ಟ ನಷ್ಟಗಳು ಸಂಭವಿಸುತ್ತಿತ್ತು. ಇದನ್ನು ತಪ್ಪಿಸಲು ತಾಲೂಕಿನ ಕೇಂದ್ರ ಸ್ಥಾನದಲ್ಲಿಯೇ ಸುಸಜ್ಜಿತ ಅಗ್ನಿಶಾಮಕ ಠಾಣೆಯನ್ನು ತೆರಯ ಬೇಕೆಂಬ ಬೇಡಿಕೆಯನ್ನು ಇಲ್ಲಿನ ಜನತೆ ಸಕರ್ಾರದ ಮುಂದಿಟ್ಟಿದ್ದರು.
ಹಲವು ವರ್ಷಗಳ ಬೇಡಿಕೆಯ ಪರಿಣಾಮವಾಗಿ ಕೊನೆಗೂ ಬಂಟ್ವಾಳಕ್ಕೆ ಅಗ್ನಿಶಾಮಕ ಠಾಣೆ ಮಂಜೂರು ಗೊಂಡಿತು. ಇದೀಗ ಖಾಲಿಯಾಗಿದ್ದ ಮೈದಾನದಲ್ಲಿ ಸುಸಜ್ಜಿತ ಅಗ್ನಿಶಾಮಕ ಠಾಣೆ ಎದ್ದು ನಿಂತಿದೆ. ಅದರ ಪಕ್ಕದಲ್ಲಿಯೇ ಸಿಬ್ಬಂದಿಗಳ ವಸತಿಗೃಹವನ್ನು ನಿಮರ್ಿಸಲಾಗಿದೆ. ಆದರೆ ಉದ್ಘಾಟನೆಗೆ ಮಾತ್ರ ಇನ್ನೂ ಮೂಹೂರ್ತ ಕೂಡಿ ಬಂದಿಲ್ಲ. ಅದರ ದುಷ್ಪಾರಿಣಾಮ ಎನ್ನುವಂತೆ ಸುಸುಜ್ಜಿತ ಕಟ್ಟಡ ಭಿಕ್ಷುಕರ ಕೇಂದ್ರವಾಗುತ್ತದೆ.

