ಬಂಟ್ವಾಳ: ಬಾಳ್ತಿಲ ಹಾಗೂ ಬಿ.ಕಸ್ಬಾ ವಲಯ ಅಂಗನವಾಡಿ ಕೇಂದ್ರಗಳ, ಮೇಲ್ವಿಚಾರಕಿಯರು ಹಾಗೂ ಅಂಗನವಾಡಿ ಕಾರ್ಯಕತರ್ೆಯರ ವತಿಯಿಂದ ಮಂಗಳೂರು ಆರೋಗ್ಯ ಕೇಂದ್ರಕ್ಕೆ ವಗರ್ಾವಣೆಗೊಂಡಿರುವ ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಜಯ್ ಭಂಡಾರಿ1 ಅವರಿಗೆ ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೀಳ್ಕೋಡುಗೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಿಡಿಪಿಒ ಮಲ್ಲಿಕಾ ಮಾತನಾಡಿ ವೈದ್ಯಾಧಿಕಾರಿಯಾಗಿ 14 ವರ್ಷಗಳ ಕಾಲ ಮೌಲ್ಯಯುತವಾದ ಸೇವೆ ಸಲ್ಲಿಸಿದ್ದಾರೆ. ಡಾ| ಸುಜಯ್ರವರು ಕರ್ತವ್ಯದಲ್ಲಿ ನಿಷ್ಠೆಯನ್ನು ಪಾಲಿಸಿದಂತಹ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರದ ಏಕೈಕ ಆರೋಗ್ಯಧಿಕಾರಿ ಎಂದು ಹೇಳಿದರು. ಈ ಸಂದರ್ಭ ವಿಟ್ಲ ಸಿಡಿಪಿಒ ಸುಧಾ ಜೋಷಿ, ಸಹಾಯಕ ಸಿಡಿಪಿಒ ಅನ್ನಪೂರ್ಣ, ಆರೋಗ್ಯ ಸಹಾಯಕಿ ರೋಹಿನಿ, ಮೇಲ್ವಿಚಾರಕಿ ಶಾಲಿನಿ, ಉಮಾವತಿ ಉಪಸ್ಥಿತರಿದ್ದರು.
ಸುರೇಖಾ ಸ್ವಾಗತಿಸಿ, ಅರುಣಾ ವಂದಿಸಿದರು. ಮೇಲ್ವಿಚಾರಕಿ ಪುಷ್ಪಲತಾ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *