ಬಂಟ್ವಾಳ : ಯು.ಟಿ.ಫರೀದ್ ಫೌಂಡೇಶನ್ ಮಂಗಳೂರು ,ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ-ಮಂಗಳೂರು , ನೇತ್ರಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್ ಉಡುಪಿ , ಇಮಾ ವಳವೂರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಅಂಧತ್ವ ವಿಭಾಗ) ಉಡುಪಿ-ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಸಮಾರಂಭವು
ನ.9ರಂದು ಭಾನುವಾರ ಸಮಯ ಬೆ.ಗಂ.9.30 ರಿಂದ 12.30 ರ ತನಕ ದ.ಕ.ಜಿಲ್ಲಾ ಪಂ.ಹಿ.ಪ್ರಾ.ಶಾಲೆ ವಳವೂರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಎಂದು ಕೆ .ಪಿ.ಸಿ.ಸಿ ರಾಜ್ಯ ಕಾರ್ಮಿಕ ಘಟಕದ ಉಪಾಧ್ಯಕ್ಷ ಕೆ.ಎಸ್.ಅಮೀರ್ ಅಹ್ಮದ್ ತುಂಬೆ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ
