ಪೊಳಲಿ:  ಶ್ರೀ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಜಾತ್ರೆಯ ನಿಮಿತ್ತ ಮಾ.19ರಂದು ಶನಿವಾರ 5ನೇ ದಂಡಮಾಲೆಯ ದಿನದಂದು ತುಲಾಭಾರ ಸೇವೆ ನಡೆಯಿತು. ಹಲವಾರು ಭಕ್ತಾದಿಗಳು ಇದರಲ್ಲಿ ಪಾಲ್ಗೊಂಡಿದ್ದರು.  ಶ್ರೀ ದೇವಿಗೆ ಹರಕೆ ಹೊತ್ತ ಭಕ್ತಾದಿಗಳು ಹರಕೆಯ ರೂಪದಲ್ಲಿ ಸಿಯಾಳ, ಅಕ್ಕಿ, ಬೆಲ್ಲ, ತೆಂಗಿನಕಾಯಿ, ಹೂವು, ಹಿಂಗಾರದಲ್ಲಿ ತುಲಾಭಾರ ಸೇವೆ ಸಲ್ಲಿಸಿದರು.IMG_7195

ದೇವಳದ ಅರ್ಚಕರು ದೇವಿಗೆ ಹಾಕುವ ಚಿನ್ನಾಭರಣಗಳನ್ನು ಹರಕೆ ಹೊತ್ತ ಭಕ್ತರ ಕೊರಳಿಗೆ ಹಾಕಿ ತೂಕದಲ್ಲಿ ಕುಳ್ಳಿರಿಸಿ ತೂಕ ಮಾಡಿದರು ಸುಮಾರು 118 ಭಕ್ತಾದಿಗಳಿಂದ ತುಲಾಭಾರ ಸೇವೆ ನಡೆಯಿತು. ದೇವಳದ ಅರ್ಚಕರು ಹಾಗೂ ಸಿಬ್ಬಂದಿಗಳು ತುಲಾಭಾರ ಸೇವೆಗೆ ಸಹಕರಿಸಿದರು.IMG_7184  IMG_7191

By Suddi9

Leave a Reply

Your email address will not be published. Required fields are marked *