ಬಂಟ್ವಾಳ: ಇಲ್ಲಿಗೆ ಸಮೀಪದ ಮಚ್ಚಿನ ಗ್ರಾಮದ ಬಳ್ಳಮಂಜ ನಿವಾಸಿ, ದಿವಂಗತ ಡಾ.ಚಂದ್ರಶೇಖರ ಸಂಪಿಗೆತ್ತಾಯ ಇವರ ಪತ್ನಿ ಎಂ.ವಸಂತಿ ಸಂಪಿಗೆತ್ತಾಯ (೮೦)ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಮಾ.14ರಂದು ಸೋಮವಾರ ನಿಧನರಾದರು.15btl-Vasanthi

ಮೃತರಿಗೆ ಪುತ್ರ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ.ಹರ್ಷ ಸಂಪಿಗೆತ್ತಾಯ ಮತ್ತು ಬೆಂಗಳೂರು ಚಾರ್ಟರ್ಡ್ ಅಕೌಂಟೆಂಟ್ ಅಶೋಕ ಸಂಪಿಗೆತ್ತಾಯ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಪ್ರಗತಿಪರ ಕೃಷಿಕರಾಗಿದ್ದ ಇವರು ಮಚ್ಚಿನ ಮಹಿಳಾ ಮಂಡಳಿ ಸ್ಥಾಪಕಾಧ್ಯಕ್ಷರಾಗಿ ವಿವಿಧ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.

By suddi9

Leave a Reply

Your email address will not be published. Required fields are marked *