ಬಂಟ್ವಾಳ : ತಾಲೂಕು ಮಣಿನಾಲ್ಕೂರು ಗ್ರಾಮದ ಬಾಚಕೆರೆ ಸರಪಾಡಿಯಲ್ಲಿ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ಸಾನಿಧ್ಯವು ಭಕ್ತರ ನಂಬುಗೆಯ, ಇಷ್ಠಾರ್ಥ ಸಿದ್ಧಿಸುವ ಪುಣ್ಯನೆಲೆಯಾಗಿ ಪ್ರಸಿದ್ಧಿ ಪಡೆದಿದೆ. ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಮೂಲಸಾನಿಧ್ಯವನ್ನು ಸಮಸ್ತ ಭಕ್ತಾದಿಗಳ ಸಂಕಲ್ಪದಂತೆ ಇದೀಗ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವನ್ನಾಗಿ ರೂಪಿಸಲಾಗಿದೆ.
ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಶಿಲಾಮಯವಾಗಿ ನಿರ್ಮಾಣಗೊಂಡಿದ್ದು, ಮಾ.೨೨ರಿಂದ ಮಾ.೨೮ರ ವರೆಗೆ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ ವಿವಿಧ ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆಗಳು, ಭಜನೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಸಂಪನ್ನಗೊಳ್ಳಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಽಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಶುಭಾಶೀರ್ವಾದದೊಂದಿಗೆ ಸುಮಾರು ಎರಡೂವರೆ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸುಂದರವಾಗಿ ನಿರ್ಮಾಣಗೊಂಡಿರುವ ಈ ಕ್ಷೇತ್ರದಲ್ಲಿ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ, ಶ್ರೀ ಕ್ಷೇತ್ರದ ಪ್ರಧಾನ ತಂತ್ರಿ ಸರಪಾಡಿ ಅರಮನೆ ವೇ.ಮೂ.ಶಿವಪ್ರಸಾದ ಐತಾಳರ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಈಗಾಗಲೇ ಹಲವಾರು ವರ್ಷಗಳಿಂದ ಈ ಸಾನಿಧ್ಯದಲ್ಲಿ ವಾರ್ಷಿಕ ಉತ್ಸವ, ನವರಾತ್ರಿ ಉತ್ಸವ, ಸಂಕ್ರಮಣ ವಿಶೇಷ ಪೂಜೆ, ಅನ್ನಸಂತರ್ಪಣೆ, ಅಯ್ಯಪ್ಪ ಸ್ವಾಮಿ ಪೂಜೆ ಮೊದಲಾದ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಊರಪರವೂರ ಅಪಾರ ಭಕ್ತಾಽಗಳು ಈ ಸಾನಿಧ್ಯಕ್ಕೆ ಚಿತ್ತೈಸಿ ತಾಯಿಯ ಮುಂದೆ ಪ್ರಾರ್ಥಿಸಿಕೊಂಡು ತಮ್ಮ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿಕೊಳ್ಳುತ್ತಿದ್ದಾರೆ. ಈ ಕ್ಷೇತ್ರದ ವತಿಯಿಂದ ನಡೆಯುವ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿಯು ನಾಡಿನ ವಿವಿಧೆಡೆ ಕಲಾಪ್ರದರ್ಶನ ನೀಡುತ್ತಾ ಯಶಸ್ವಿ ಎಂಟು ವರ್ಷಗಳನ್ನು ಪೂರೈಸಿದ್ದು ಈ ಮೂಲಕ ಯಕ್ಷಗಾನ ಕಲೆ ಮತ್ತು ಕಲಾವಿದರ ಬೆಳವಣಿಗೆಗೂ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಪ್ರತಿವರ್ಷ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೂ ಶ್ರಮಿಸಲಾಗುತ್ತಿದೆ.
ಈ ಕ್ಷೇತ್ರವು ಪೂಜೆ, ಉತ್ಸವಾದಿಗಳಿಗಷ್ಟೇ ಸೀಮಿತವಾಗದೆ ಬದುಕಿನಲ್ಲಿ ನೊಂದು, ಬೆಂದು ಬಂದವರಿಗೆ ಶಾಂತಿ ನೆಮ್ಮದಿ ನೀಡುವ ತಾಣವಾಗಿದೆ.,ಕಲೆ-ಸಾಹಿತ್ಯ-ಸಾಂಸ್ಕೃ
ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ ಜೋತಿಷ್ಯರಾದ ಮಧೂರು ರಂಗ ಭಟ್ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ ಇಟ್ಟು ನೂತನ ಶಿಲಾಮಯ ದೇಗುಲ ನಿರ್ಮಿಸಲು ಸಂಕಲ್ಪಿಸಲಾಗಿತ್ತು. ಪ್ರಸ್ತುತ ಶಿಲಾಮಯ ಗರ್ಭಗುಡಿ,ಮುಖ ಮಂಟಪ, ಸುತ್ತು ಪೌಳಿ,ವಸಂತ ಮಂಟಪ, ತೀರ್ಥಬಾವಿ ಕಾಮಗಾರಿ ಪೂರ್ಣಗೊಂಡಿದ್ದು, ಹೃನ್ಮನ ಸೂರೆಗೊಳ್ಳುವ ಸುಂದರ ದೇವಾಲಯ ನಿರ್ಮಾಣಗೊಂಡಿದೆ.
ಜಾನಪದ ಕ್ಷೇತ್ರದ ದೈವಾರಾಧಕರು ಮತ್ತು ಜ್ಯೋತಿಷ ಪ್ರಶ್ನಾ ಚಿಂತಕರಾಗಿರುವ ದೇಜಪ್ಪ ಬಾಚಕೆರೆ ಅವರು ಕ್ಷೇತ್ರದ ಧರ್ಮದರ್ಶಿಯಾಗಿದ್ದು , ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ ಅವರು ಗೌರವಾಧ್ಯಕ್ಷರಾಗಿ ಮತ್ತು ಮೋಹನ್ ಗೌಡ ಇಡ್ಯಡ್ಕ ಅವರು ಅಧ್ಯಕ್ಷರಾಗಿರುವ ಜೀರ್ಣೋದ್ದಾರ ಸಮಿತಿ, ಸಂಜೀವ ಪೂಜಾರಿ ಗುರುಕೃಪಾ ಅವರು ಅಧ್ಯಕ್ಷರಾಗಿರುವ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ವಿವಿಧ ಸಮಿತಿಗಳು ರಚನೆಗೊಂಡಿದ್ದು ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಕಾರ‍್ಯೊನ್ಮುಖವಾಗಿದೆ.
ಹಸಿರು ಹೊಣಿಕೆ ಸಮರ್ಪಣೆ : ಮಾ.೨೦ರಂದು ಆದಿತ್ಯವಾರ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಬೆಳಗ್ಗೆ ೧೦ ಗಂಟೆಗೆ ವೈಭವದ ಹಸಿರುವಾಣಿ ಹೊರೆಕಾಣಿಕೆ, ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪ್ರಧಾನ ಕಲಶ(ಮುಗುಳಿ), ಪಾಣಿಪೀಠದ ಬೆಳ್ಳಿಯ ಹೊದಿಕೆ, ಉತ್ಸವಮೂರ್ತಿ ಮತ್ತು ಪಲ್ಲಕ್ಕಿಯೊಂದಿಗೆ ಮೆರವಣಿಗೆಯು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಹೊರಟು ಕೈಕಂಬ, ಪೊಳಲಿ ಮಾರ್ಗವಾಗಿ ಬಿ.ಸಿ. ರೋಡ್ ಶ್ರೀ ರಕ್ತೇಶ್ವರೀ ದೇವಸ್ಥಾನದ ಹತ್ತಿರ ಸಂಪನ್ನಗೊಂಡು ಅಲ್ಲಿಂದ ಮಧ್ಯಾಹ್ನ ೧೨:೩೦ಕ್ಕೆ ಸರಿಯಾಗಿ ವಿವಿಧ ವಾದ್ಯಘೋಷಗಳಿಂದ ಶ್ರೀ ಕ್ಷೇತ್ರ ಬಾಚಕೆರೆಗೆ ಹೊರಡುವುದು.
ಮಾ.೨೨ರಂದು ಮಂಗಳವಾರ ಸಂಜೆ ವೈದಿಕ ಕಾರ್ಯಕ್ರಮಗಳು, ಸಂಜೆ ಭಜನ ಸಂಕೀರ್ತನೆ, ರಾತ್ರಿ ಸಸಿಹಿತ್ಲು ಮೇಳದವರಿಂದ ರಂಗಸ್ಥಳ ಯಕ್ಷಗಾನ ಬಯಲಾಟ ನಡೆಯಲಿದೆ.
ಮಾ.೨೩ರಂದು ಬುಧವಾರ: ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸಂಜೆ ವಿವಿಧ ವೈದಿಕ ಕಾರ್ಯಕ್ರಮಗಳು, ಬಳಿಕ ಧಾರ್ಮಿಕ ಸಭೆ ನಡೆಯಲಿದ್ದು, ಧರ್ಮಸ್ಥಳ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಆಶೀರ್ವಚನ ನೀಡಲಿರುವರು.ಮಾಜಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಲಿರುವರು. ಶಶಾಂಕ್ ನೆಲ್ಲಿತ್ತಾಯ ಅವರು ಧಾರ್ಮಿಕ ಉಪನ್ಯಾಸ ನೀಡಲಿರುವರು. ರಾತ್ರಿ ಶ್ರೀ ಕೃಷ್ಣ ಲೀಲೆ, ಕಂಸ ವಧೆ ಯಕ್ಷಗಾನ ಬಯಲಾಟವಿದೆ.
ಮಾ.೨೪ರಂದು ಗುರುವಾರ: ಬೆಳಗ್ಗೆ ಮತ್ತು ಸಂಜೆ ವಿವಿಧ ವೈದಿಕ ಕಾರ್ಯಕ್ರಮಗಳು, ಮಧ್ಯಾಹ್ನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಮಾತಾನಂದಮಯಿ ಅವರು ಆಶೀರ್ವಚನ ನೀಡಲಿರುವರು. ಡಾ.ಆಶಾಜ್ಯೋತಿ ರೈ ಮಾಲಾಡಿ ಅಧ್ಯಕ್ಷತೆ ವಹಿಸಲಿರುವರು. ಡಾ. ನಾಗವೇಣಿ ಮಂಚಿ ಧಾರ್ಮಿಕ ಉಪನ್ಯಾಸ ನೀಡಲಿರುವರು. ರಾತ್ರಿ ವಿಟ್ಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮವಿದೆ.
ಮಾ.೨೫ರಂದು ಶುಕ್ರವಾರ: ಬೆಳಗ್ಗೆ ಶ್ರೀ ಗಣಪತಿ ದೇವರ ಪ್ರತಿಷ್ಠೆ, ೯.೫೬ ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವರ ಪ್ರತಿಷ್ಠೆ, ಅಷ್ಠಬಂಧ ಸ್ಥಾಪನೆ, ಕಲಶಾಭಿಷೇಕ, ಸಂಜೆ ದುರ್ಗಾ ಪೂಜೆ ಇತ್ಯಾದಿ ನಡೆಯಲಿದೆ. ಸಂಜೆ ಧಾರ್ಮಿಕ ಸಭೆಯಲ್ಲಿ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ ಮತ್ತು ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಆಸ್ರಣ್ಣ ರಾದ ಶ್ರೀ ಲಕ್ಷ್ಮೀ ನಾರಾಯಣ ಆಸ್ರಣ್ಣರು ಆಶೀರ್ವಚನ ನೀಡಲಿರುವರು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ಯದುಪತಿ ಗೌಡ ಧಾರ್ಮಿಕ ಉಪನ್ಯಾಸ ನೀಡಲಿರುವರು. ರಾತ್ರಿ ಸಾಣೂರು ಶಾಂಭವಿ ಕಲಾವಿದರಿಂದ ನಾಟಕದಾಯೆ ನಾಟಕವಿದೆ.
ಮಾ.೨೬ರಂದು ಶನಿವಾರ: ಬೆಳಗ್ಗೆ ಮಹಾಚಂಡಿಕಯಾಗ, ಸಂಜೆ ವಿವಿಧ ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆಯಲ್ಲಿ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಅಧ್ಯಕ್ಷತೆ ವಹಿಸಲಿರುವರು. ಧಾರ್ಮಿಕ ಪರಿಷತ್ ಅಧ್ಯಕ್ಷ ಸೂರ್ಯ ನಾರಾಯಣ ಭಟ್ ಕಲ್ಲಡ್ಕ ಧಾರ್ಮಿಕ ಉಪನ್ಯಾಸ ನೀಡಲಿರುವರು. ರಾತ್ರಿ ಶಿವದೂತೆ ಗುಳಿಗೆ ತುಳು ನಾಟಕ ಪ್ರದರ್ಶನವಿದೆ.
ಮಾ.೨೭ರಂದು ಬಾನುವಾರ: ಬೆಳಗ್ಗೆ ಗಣಯಾಗ, ೯.೧೯ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮ ಕಲಶಾಭಿಷೇಕ, ೧೧.೨೪ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ದೇವರಿಗೆ ಬ್ರಹ್ಮ ಕಲಶಾಭಿಷೇಕ,ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ನಾಗ ಸನ್ನಿಧಿಯಲ್ಲಿ ನಾಗತನು ತರ್ಪಣ, ಬಳಿಕ ಧಾರ್ಮಿಕ ಸಭೆ ನಡೆಯಲಿದ್ದು, ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ ಮತ್ತು ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಆಸ್ರಣ್ಣ ರಾದ ಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣರು ಆಶೀರ್ವಚನ ನೀಡಲಿರುವರು.ಅಳದಂಗಡಿ ಅರಮನೆ ಡಾ.ಪದ್ಮ ಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಲಿರುವರು. ಮಹೇಂದ್ರನಾಥ ಸಾಲೆತ್ತೂರು ಅವರು ಧಾರ್ಮಿಕ ಉಪನ್ಯಾಸ ನೀಡಲಿರುವರು. ರಾತ್ರಿ ಲಕುಮಿ ತಂಡದವರಿಂದ ಎನ್ನ ಬಂಗ ಎಂಕೇ ಗೊತ್ತು ತುಳು ನಾಟಕ ಪ್ರದರ್ಶನವಿದೆ.
ಮಾ.೨೮ರಂದು ಸೋಮವಾರ: ಬಾಚಕೆರೆ ಜಾತ್ರೋತ್ಸವ ನಡೆಯಲಿದ್ದು, ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ಸಂಜೆ ಉತ್ಸವ ಬಲಿ ಹೊರಡುವುದು, ರಾತ್ರಿ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ.
ಮಾ.೨೯ರಂದು ಮಂಗಳವಾರ: ಸಂಜೆ ರಂಗಪೂಜೆ, ರಾತ್ರಿ ಬಾಚಕೆರೆ ಮೂಲ ಸಾನ್ನಿಧ್ಯದಲ್ಲಿ ಮೈಸಂದಾಯ, ರಕ್ತೇಶ್ವರಿ, ಪಂಜುರ್ಲಿ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಭಾಗವಹಿಸಿ, ಶ್ರೀ ದೇವರ ಪ್ರಸಾದ ಸ್ವೀಕರಿಸಿ, ಮಾಧ್ಯಮಗಳಲ್ಲಿ ಪ್ರಕಟಿಸಿ ಸಹಕರಿಸ ಬೇಕಾಗಿ ವಿನಮ್ರವಾಗಿ ವಿನಂತಿ.
ಶ್ರೀ ನಳಿನ್ ಕುಮಾರ್‌ಕಟೀಲು, ಶ್ರೀ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಶ್ರೀ ಬಿ.ರಮಾನಾಥ ರೈ ( ಗೌರವಾಧ್ಯಕ್ಷರು) ಶ್ರೀ ಮೋಹನ್ ಗೌಡ ಇಡ್ಯಡ್ಕ(ಅಧ್ಯಕ್ಷರು,)ಶ್ರೀ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ (ಕಾರ್ಯಧ್ಯಕ್ಷರು), ಶ್ರೀ ಸರಪಾಡಿ ಆಶೋಕ ಶೆಟ್ಟಿ (ಪ್ರಧಾನ ಕಾರ್ಯದರ್ಶಿ)- ಜೀರ್ಣೋದ್ಧಾರ ಸಮಿತಿ ಶ್ರೀ ಸಂಜೀವ ಪೂಜಾರಿ ಗುರುಕೃಪಾ(ಅಧ್ಯಕ್ಷರು ), ಶ್ರೀ ಶ್ರೀನಿವಾಸ ಭಟ್ ಕಯ್ಯಾಳ(ಕಾರ್ಯಾಧ್ಯಕ್ಷರು), ಶ್ರೀ ದಯಾನಂದ ಶೆಟ್ಟಿ(ಪ್ರ.ಕಾರ್ಯದರ್ಶಿ),-ಬ್ರಹ್ಮ ಕಲಶೋತ್ಸವ ಸಮಿತಿ ಉಪಾಧ್ಯಕ್ಷರು, ಪದಾದಿಕಾರಿಗಳು, ಸರ್ವ ಸದಸ್ಯರು . ಜೀರ್ಣೋದ್ಧಾರ ಸಮಿತಿ, ಬ್ರಹ್ಮ ಕಲಶೋತ್ಸವ ಸಮಿತಿ
