ಬಂಟ್ವಾಳ: ಇಲ್ಲಿನ ನಿವೃತ್ತ ಅಂಚೆಪಾಲಕಿ, ಮೀನಾಕ್ಷಿ ಶ್ಯಾಂ ಸುಂದರ್ (೫೮) ಇವರು ಅಸೌಖ್ಯದಿಂದ ಮೂಡುಬಿದ್ರೆ ಸ್ವಗೃಹದಲ್ಲಿ ಮಾ.14ರಂದು ಸೋಮವಾರ ನಿಧನರಾದರು. ಮೃತರಿಗೆ ಪತಿ ನಿವೃತ್ತ ಅಂಚೆ ಸಿಬಂದಿ ಶ್ಯಾಂ ಸುಂದರ್ ಮತ್ತು ಇಬ್ಬರು ಪುತ್ರರು ಇದ್ದಾರೆ. ಸಾಹಿತ್ಯಾಸಕ್ತರಾಗಿ, ಗಾಯಕಿಯಾಗಿ, ಕನ್ನಡ ಮತ್ತು ತುಳು ಕವನ, ಕವನ ಸಂಕಲನ ರಚಿಸಿದ್ದರು.
