ಬಂಟ್ವಾಳ: ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿ ರೋಟರಿ ಕ್ಲಬ್ ಬಂಟ್ವಾಳದ ವತಿಯಿಂದ ಸುಮಾರು ೩.೫ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಗೊಂಡ ಭೋಜನಾಲಯ ಮತ್ತು ಸ್ಮಾರ್ಟ್ ತರಗತಿಯ ಉದ್ಘಾಟನೆ ಸಮಾರಂಭ ಶುಕ್ರವಾರ ನಡೆಯಿತು.
ಜಿಲ್ಲಾ ಗವರ್ನರ್ ರವೀಂದ್ರ ಭಟ್ ಭೋಜನಾಲಯ ಮತ್ತು ಸ್ಮಾರ್ಟ್ ತರಗತಿಯನ್ನು ಉದ್ಘಾಟಿಸಿದರು ಅವರು ಮಾತನಾಡಿ ವಿದ್ಯಾರ್ಥಿಗಳು ತಂದೆ, ತಾಯಿ, ಗುರುಗಳನ್ನು ಗೌರವಿಸಿದರೆ ಮುಂದಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದರು. ಉತ್ತಮ ಶಿಕ್ಷಣದ ಜಪತೆಗೆ ಸಂಸ್ಕೃತಿ ಇದ್ದಾಗ ವ್ಯಕ್ತಿ ಉತ್ತಮ ಮನುಷ್ಯನಾಗಿ ಬಾಳಲು ಸಾಧ್ಯ.
ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ, ಪ್ರಸ್ತುತ ದಿನಗಳಲ್ಲಿ ಸರಕಾರೇತರ ಸಂಸ್ಥೆಗಳು ಸರಕಾರಿ ಶಾಲೆಗಳ ಬೆಳವಣಿಗೆಗೆ ಸಹಕಾರ ನೀಡುತ್ತಿವೆ. ಪೊಳಲಿ ಸರಕಾರಿ ಪ್ರೌಢಶಾಲೆಯ ಪ್ರಗತಿಯಲ್ಲಿ ರೋಟರಿ ಕ್ಲಬ್ ಬಂಟ್ವಾಳದ ಕೊಡುಗೆ ಅವಿಸ್ಮರಣೀಯ ವಾದುದು ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಮಹಮ್ಮದ್ ವಳವೂರು ಮಾತನಾಡಿ ಶಿಕ್ಷಕರು ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಶಿಲ್ಪಿಗಳು. ತಮಗೆ ಕಲಿಸಿದ ಶಿಕ್ಷಕರಿಗೆ ಗೌರವ ನೀಡಿ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬದುಕಿದರೆ ಅದುವೇ ನಾವು ನೀಡುವ ಗುರುದಕ್ಷಿಣೆ ಎಂದು ತಿಳಿಸಿದರು.
ನಿಯೋಜಿತ ಗವರ್ನರ್ ಪ್ರಕಾಶ್ ಕಾರಂತ್, ಸಹಾಯಕ ಗವರ್ನರ್ ಸುರೇಂದ್ರ ಕಿಣಿ ಕ್ಲಬ್ ಕಾರ್ಯದರ್ಶಿ ಧನಂಜಯ ಬಾಳಿಗ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟೇಶ್ ನಾವಡ ಇಂಟರಾಕ್ಟ್ ಕ್ಲಬ್ ಮಹಮ್ಮದ್ ಶಾಹೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಬಂಟ್ವಾಳದ ಕೋಶಾಧಿಕಾರಿ ಬೇಬಿ ಕುಂದರ್ ಸದಸ್ಯರಾದ ಡಾ. ರಮೇಶಾನಂದ ಸೋಮಯಾಜಿ, ಪುಷ್ಪರಾಜ ಹೆಗ್ಡೆ, ರಿತೇಶ್ ಬಾಳಿಗ, ಕರುಣಾಕರ ಶೆಟ್ಟಿ, ನಾರಾಯಣ ಹೆಗ್ಡೆ,
ವಸಂತ ಪ್ರಭು, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಯಶವಂತ ಪೂಜಾರಿ, ಲೋಕೇಶ್, ಪರಮೇಶ್ವರ ಭಟ್ ಹಾಜರಿದ್ದರು. ಮುಖ್ಯ ಶಿಕ್ಷಕ ರಾಧಕೃಷ್ಣ ಭಟ್ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ವಸಂತಿ ವಂದಿಸಿದರು, ರಂಜಿತ ಕಾರ್ಯಕ್ರಮ ನಿರೂಪಿಸಿದರು.
