ಮುಂಬಯಿ: ಧರ್ಮದ ಮರ್ಮವನ್ನರಿತು ನಮ್ಮನ್ನು ನಾವು ಶುದ್ದೀಕರಿಸಿ ಜಾಗೃತಿಗಾಗಿಜಾಗರಣೆ ಮಾಡಬೇಕು. ಸಂಸಾರದ ಕಷ್ಟಗಳನ್ನು ಪಾರುಮಾಡಲು ಧರ್ಮದ ಅನುಷ್ಠಾನದೊಂದಿಗೆ ದೇವರ ಅನುಗ್ರಹವೂಅಗತ್ಯ ಬೇಕಾಗಿದೆ ಎಂದು ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಕಳೆದ ಮಂಗಳವಾರ ಧರ್ಮಸ್ಥಳದಲ್ಲಿ ಶಿವರಾತ್ರಿ ಸಂದರ್ಭ ಶಿವಪಂಚಾಕ್ಷರಿ ಪಠಣದೊಂದಿಗೆ ಅಹೋರಾತ್ರಿ ಜಾಗರಣೆ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿ ಹೆಗ್ಗಡೆ ಅವರು ಶುಭ ಹಾರೈಸಿದರು.
ನಮ್ಮೆಲ್ಲರ ಸುಖ-ಶಾಂತಿ, ನೆಮ್ಮದಿಯೊಂದಿಗೆ ವಿಶ್ವಶಾಂತಿಗಾಗಿ ನಾವು ಪಾರ್ಥನೆ ಮಾಡಬೇಕಾದ ಅನಿವಾರ್ಯತೆ ಹಾಗೂ ಸಂಕ್ರಮಣಕಾಲದಲ್ಲಿ ನಾವು ಈಗ ಇದ್ದೇವೆ. ಧರ್ಮದ ಬಗ್ಗೆ ತಿಳಿವಳಿಕೆ ಇದ್ದುಆಚರಣೆ ಮಾಡಿದರೆಅದು ಹೆಚ್ಚು ಫಲಪ್ರದವಾಗುತ್ತದೆ.ಸತ್ಯ, ಧರ್ಮ, ನ್ಯಾಯ ಮತ್ತು ನೀತಿಯ ಪಾಲನೆಯೊಂದಿಗೆಎಲ್ಲರೂ ಸಚ್ಚಾರಿತ್ರ್ಯದ ಸುಜ್ಞಾನಿ ಭಕ್ಷರಾಗಬೇಕು.ಹಿತ-ಮಿತಆಹಾರ ಸೇವನೆಯೊಂದಿಗೆ ಶಿಸ್ತು, ಸಂಯಮ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೆಗ್ಗಡೆ ಹೇಳಿದರು.
ಪಾದಯಾತ್ರಿಗಳು ಪರಿಸರ ಮಾಲಿನ್ಯ ಮಾಡಬಾರದು. ಶಿಸ್ತಿನೊಂದಿಗೆ ಪರಿಸರ ಸಂರಕ್ಷಣೆ ಮಾಡಿ ಸ್ವಚ್ಛತೆಯನ್ನೂ ಕಾಪಾಡಬೇಕು. ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ಅಲ್ಲಲ್ಲಿ ಬಿಸಾಡಿ ಇತರರಿಗೆ ತೊಂದರೆ ಉಂಟು ಮಾಡಬಾರದು ಎಂದು ಧರ್ಮಾಧಿಕಾರಿ ಕಿವಿಮಾತು ಹೇಳಿದರು.
ಅತಿಯಾದ ಆಸೆ ಸಲ್ಲದು.ಭಕ್ತರು ಭಗವಂತನ ಪ್ರತಿರೂಪವಾಗಿದ್ದು ನಿಶ್ಚಿಂತೆಯಿಂದ ದೇವರಧ್ಯಾನ, ಪ್ರಾರ್ಥನೆ ಮಾಡಬೇಕು.ನಿತ್ಯದ ವ್ಯವಹಾರದಲ್ಲಿ ಕೂಡಾ ಸತ್ಯ ಮತ್ತುಧರ್ಮವನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಮಾಣಿಲದ ಮೋಹನದಾಸ ಸ್ವಾಮೀಜಿ ಮಾತನಾಡಿ ಜಾಗರಣೆಯೊಂದಿಗೆ ಅಂತರಂಗ ಹಾಗೂ ಬಹಿರಂಗದಲ್ಲಿ ಭಕ್ತರು ಪರಿಶುದ್ಧರಾಗಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಭಾವಶುದ್ಧಿ, ಕರ್ಮಶುದ್ಧಿ ಮತ್ತು ಮನಶುದ್ಧಿಯೊಂದಿಗೆ ಸಾರ್ಥಕ ಜೀವನ ನಡೆಸಬೇಕು ಎಂದರು.
ಪಾದಯಾತ್ರೆಯ ರೂವಾರಿ ಹನುಮಂತಪ್ಪ ಗುರೂಜಿ ಬೆಂಗಳೂರು ಮತ್ತು ಮರಿಯಪ್ಪ ಗೌಡ ಉಪಸ್ಥಿತರಿದ್ದು ರಾತ್ರಿ ಇಡೀ ಭಕ್ತರು ದೇವರ ಪ್ರಾರ್ಥನೆ, ಧ್ಯಾನ, ಭಜನೆಯೊಂದಿಗೆ ಜಾಗರಣೆ ಮಾಡಿದರು.
ಚಿತ್ರ ಶೀರ್ಷಿಕೆ: ೦೧, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ದೀಪ ಬೆಳಗಿಸಿ ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡಿದರು, ೦೨, ವಿಶೇಷವಾಗಿ ಅಲಂಕೃತಗೊಂಡ ಶ್ರೀ ಮಂಜುನಾಥ ಸ್ವಾಮಿದೇವಸ್ಥಾನ, ಭಕ್ತರಗಡಣ
