ಮುಂಬಯಿ : ಕಾರವಾರ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ವೆಲೆಂಟೈನ್ ಡಿಸೋಜಾ ನೇತೃತ್ವದ ಪೊಲೀಸ್ ತಂಡವು ಎಟಿಎಂ ಕಾರ್ಡ್ ಬಳಸಿ ವಂಚನೆ ಮಾಡುತ್ತಿದ್ದ ಅಂತಾರಾಜ್ಯ ವಂಚಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರವಾರ ಉಪವಿಭಾಗದ ವ್ಯಾಪ್ತಿಯಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿತ್ತು.
ಉತ್ತರ ಪ್ರದೇಶ ಮೂಲತಃ ವೃತ್ತಿಯಲ್ಲಿ ಚಾಲಕನಾಗಿದ್ದ ಬಂಧಿತ ವಂಚಕ ವಿಜಯ್ ಅಲಿಯಾಸ್ ಅಂಗದಪ್ರಸಾದ್ ದ್ವಿವೇದಿ (೩೪.) ಎಂದು ಗುರುತಿಸಲಾಗಿದೆ. ಆದರೆ ಮುಂ¨ಯಿಯ ಪ್ರಸ್ತುತ ವಿಳಾಸ ಹೊಂದಿದ್ದು ಆತನ ವಶದಿಂದ ೪೨,೦೦೦ ರೂಪಾಯಿ ನಗದು ಮತ್ತು ಅಪರಾಧದ ನೋಂದಣಿ ಸಂಖ್ಯೆ ಎಂಎಚ್ ೦೩-ಎಚ್‌ಸಿ ೧೦೪೭ ಗೆ ಬಳಸಲಾದ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಕಾರವಾರ ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ ತಿಳಿಸಿದ್ದಾರೆ.
ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳೆಯಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬರು ೨೦೨೧ರ ಡಿಸೆಂಬರ್ ೨೧ರಂದು ಮಧ್ಯಾಹ್ನ ಎಸ್‌ಬಿಐ ಎಟಿಎಂಗೆ ಹಣ ವಿಥ್‌ಡ್ರಾ ಮಾಡಲು ಭೇಟಿ ನೀಡಿದ್ದರು. ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಈತನ ಗಮನ ಬೇರೆಡೆ ಸೆಳೆದು ಎಟಿಎಂ ಕಾರ್ಡ್ ತೆಗೆದು ಬೇರೆ ಬ್ಯಾಂಕ್ ನ ಎಟಿಎಂ ಮೂಲಕ ೪೪ ಸಾವಿರ ಹಣ ಡ್ರಾ ಮಾಡುವಲ್ಲಿ ಯಶಸ್ವಿಯಾಗಿದ್ದ. ಡಿಸೆಂಬರ್ ೨೮, ೨೦೨೧ ರಂದು ತಮಗೆ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಅಂಕೋಲಾ ಪೊಲೀಸರು ಆರೋಪಿಯನ್ನು ಕುರ್ಲಾ ಮುಂಬೈನಿAದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ರಾಜ್ಯದ ವಿವಿಧೆಡೆ ಇದೇ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
