ಬಂಟ್ವಾಳ: ಕಡಂಬು ಶ್ರೀ ಕಲ್ಕುಡ, ಕಲ್ಲುರ್ಟಿ, ಕೊಡಮಣಿತ್ತಾಯ ದೈವಸ್ಥಾನದ ಆವರಣದಲ್ಲಿ ಅಳವಡಿಸಲಾದ ಸೋಲಾರ್ ಹೈಮಾಸ್ಟ್ ದೀಪವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿದರು.
ದೈಸ್ಥಾನದ ಮೊಕ್ತೇಸರ ಗೋವಿಂದರಾಯ ಪ್ರಭು, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾಶಂಕರಿ, ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ರವೀಶ್ ಕರ್ಕಳ, ಅರವಿಂದ ರೈ ಮೊದಲಾದವರು ಉಪಸ್ಥಿತರಿದ್ದರು.
