ಬಂಟ್ವಾಳ: ಕಿರಿಯ ವಯಸ್ಸಿನಲ್ಲಿ ಮಕ್ಕಳು ಎಲ್ಲರ ಜತೆ ಬೆರೆತರೆ ಅವರ ಬೆಳವಣಿಗೆ ಪೂರಕವಾಗಲಿದ್ದು, ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಹೆಚ್ಚಿನ ಜವಾಬ್ದಾರಿಗಳಿವೆ. ಬೇರೆ ಬೇರೆ ಮನಸ್ಥಿತಿಯ ಮಕ್ಕಳನ್ನು ಒಂದು ಮಾಡಿ ಅವರ ಭವಿಷ್ಯದ ಬದಲಾವಣೆಗೆ ಕಾರಣವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ನರಿಕೊಂಬು ಗ್ರಾಮದ ಶೇಡಿಗುರಿ, ಅಮ್ಟೂರು ಗ್ರಾಮದ ಕೇಶವ ನಗರ ಹಾಗೂ ಸಜೀಪಮುನ್ನೂರು ಗ್ರಾಮದ ಕಟ್ಲೆಮಾರ್ ಅಂಗನವಾಡಿ ಕೇಂದ್ರಗಳ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತನಾಡಿ, ಮಕ್ಕಳ ಬೆಳವಣಿಗೆ ಪೂರಕವಾಗುವ ನಿಟ್ಟಿನಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದೆ. ತಾಯಿ ಮಗುವಿನ ಆರೋಗ್ಯದ ದೃಷ್ಟಿಯಿಂದ ಅಂಗನವಾಡಿ ಕೇಂದ್ರಗಳು ಪೂರಕವಾಗಿ ಕೆಲಸ ಮಾಡುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಳದಾನ ಮಾಡಿದವರು, ಕೇಂದ್ರ ನಡೆಸಲು ಸ್ಥಳಾವಾಕಾಶ ನೀಡಿದವರು ಹಾಗೂ ಕೊಡುಗೆಗಳನ್ನು ನೀಡಿದವರನ್ನು ಸನ್ಮಾನಿಸಲಾಯಿತು. ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ ಪ್ರಸ್ತಾವನೆಗೈದರು.
ಶೇಡಿಗುರಿಯಲ್ಲಿ ನರಿಕೊಂಬು ಗ್ರಾ.ಪಂ.ಅಧ್ಯಕ್ಷೆ ವಿನಿತಾ ಪುರುಷೋತ್ತಮ, ಸದಸ್ಯರಾದ ಕಿಶೋರ್ ಶೆಟ್ಟಿ ಅಂತರ, ರವಿ ಅಂಚನ್, ನಾರಾಯಣ ಪೂಜಾರಿ, ಜಿ.ಪಂ.ಮಾಜಿ ಸದಸ್ಯೆ ಕಮಲಾಕ್ಷಿ ಪೂಜಾರಿ, ತಾ.ಪಂ.ಮಾಜಿ ಉಪಾಧ್ಯಕ್ಷ ಆನಂದ ಎ.ಶಂಭೂರು, ಗ್ರಾ.ಪಂ.ಮಾಜಿ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸುನೀತಾ, ಯುವತಿ ಮಂಡಲದ ಗೀತಾ, ಸುನೀತಾ, ಉಪಾಧ್ಯಕ್ಷ ಪ್ರಕಾಶ್ ಮಡಿಮೊಗೆರು, ಪ್ರಮುಖರಾದ ಜಯರಾಮ ಪೂಜಾರಿ, ಪುರುಷೋತ್ತಮ ಸಾಲ್ಯಾನ್, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಅಮೃತ್‌ಕುಮಾರ್, ಪಿಡಿಒ ಶಿವು ಬಿರಾದಾರ್, ಶಂಭೂರು ಪ್ರೌಢಶಾಲಾ ಮುಖ್ಯಶಿಕ್ಷಕ ಕಮಲಾಕ್ಷ ಉಪಸ್ಥಿತರಿದ್ದರು.
ಕೇಶವನಗರದಲ್ಲಿ ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಉಪಾಧ್ಯಕ್ಷೆ ಲಕ್ಷ್ಮೀ ಪ್ರಭು, ಸದಸ್ಯರಾದ ಎಲಿಯಾಸ್ ಡಿಸೋಜ, ಜಯಂತ ಗೌಡ, ಸುಶ್ಮಾ, ಪಿಡಿಒ ವಿಜಯಶಂಕರ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ಸಾಯಿದಾ, ತಾ.ಪಂ.ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಉಪಸ್ಥಿತರಿದ್ದರು. ಕಟ್ಲೆಮಾರ್‌ನಲ್ಲಿ ಸಜೀಪಮ್ನೂರು ಗ್ರಾ.ಪಂ.ಉಪಾಧ್ಯಕ್ಷೆ ಸಬೀನಾ, ಸದಸ್ಯರಾದ ಸಿದ್ದೀಕ್, ಜಮಾಲುದ್ದೀನ್, ಪ್ರವೀಣ್ ಗಟ್ಟಿ, ಪ್ರಮುಖರಾದ ಇದಿನಬ್ಬ ನಂದಾವರ, ಉಪಾಧ್ಯಕ್ಷ ಪಿಡಿಒ ಮೊಹಮ್ಮದ್, ಪಿಡಿಒ ಮೊಹಮ್ಮದ್, ಆರೋಗ್ಯ ಇಲಾಖೆಯ ಸುಮನಾ ಕ್ರಾಸ್ತಾ ಉಪಸ್ಥಿತರಿದ್ದರು. ಸಹಾಯಕ ಸಿಡಿಪಿಒ ಶೀಲಾವತಿ, ಸಂರಕ್ಷಣಾಧಿಕಾರಿ ಭಾರತಿ ಬಿ.ಕುಂದರ್, ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕತೆಯರು ಸಹಕರಿಸಿದರು.
