ಕೈಕಂಬ : ರಕ್ತಕ್ಕೆ ತನ್ನದೇ ಆದಂತಹ ಧರ್ಮವಿದೆ. ಅದು ತನ್ನ ಗುಂಪಿಗೆ ಮಾತ್ರ ಹೊಂದಾಣಿಕೆಯಾಗುತ್ತದೆ. ಧರ್ಮ ಒಳಗೊಳ್ಳದ ಕೆಲಸಗಳೆಲ್ಲ ವ್ಯರ್ಥ. ರಕ್ತದಾನದಿಂದ ಹಲವು ಜೀವ ಉಳಿಸಬಹುದು. ಇಂತಹ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ನಾವು ಹಿಂದೂಗಳ ಒಗ್ಗಟ್ಟಿಗೆ ಕಾರಣೀಭೂತರಾಗಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಹೇಳಿದರು.
ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗ ದಳ, ಮಾತೃಶಕ್ತಿ ದುರ್ಗಾವಾಹಿನಿ, ವಜ್ರದೇಹಿ ಘಟಕ ಗುರುಪುರ ಇದರ ಆಶ್ರಯದಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಪೊಳಲಿ ದಿ. ಅನಂತು ಇವರ ಸ್ಮರಣಾರ್ಥ `ರಕ್ತದಾನ ಶಿಬಿರ’ ಹಾಗೂ ಜಿ ಆರ್ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಮತ್ತು ರೀಸರ್ಚ್ ಸೆಂಟರ್ ನೀರುಮಾರ್ಗ ಇದರ ಸಹಯೋಗದಲ್ಲಿ ಆಯೋಜಿಸಲಾದ `ಉಚಿತ ವೈದ್ಯಕೀಯ ತಪಾಸಣಾ ಶಿಬಿರ’ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಶಿಬಿರಕ್ಕೆ ಭೇಟಿ ನೀಡಿದ ಶಾಸಕ ಡಾ. ಭರತ್ ಶೆಟ್ಟಿಯವರು ಕಾರ್ಯಕ್ರಮ ಸಂಘಟಕರನ್ನು ಅಭಿನಂದಿಸಿದರು. ವಿ.ಹಿ.ಪ ವಿಭಾಗ ಸಹ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಮತ್ತು ಜಿ ಆರ್ ಆಸ್ಪತ್ರೆಯ ಡಾ. ಕಿಶೋರಿ ಮಾತನಾಡಿದರು. ಸಭೆಯಲ್ಲಿ ಗುರುಪುರ ಜಂಗಮ ಮಠದ ರುದ್ರಮುನಿ ಸ್ವಾಮಿ, ಉದ್ಯಮಿ ಯತಿರಾಜ ಶೆಟ್ಟಿ, ಶ್ರೀ ವೈದ್ಯನಾಥ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು, ರೋಹಿತ್ ಪೂಜಾರಿ, ದಿನೇಶ್ ಮಿಜಾರು, ಡಾ. ಚೇತನ್, ಸುರೇಖಾ ರಾಜ್, ಪುನಿತ್ ಅತ್ತಾವರ, ಗುರುಪುರ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಜಿ ಎಂ ಉದಯ ಭಟ್, ಸಚಿನ್ ಅಡಪ, ಸುನಿಲ್ ಜಲ್ಲಿಗುಡ್ಡೆ ಮತ್ತು ನಳಿನಿ ಶೆಟ್ಟಿ, ವಿಹಿಂಪ ಗುರುಪುರ ಪ್ರಖಂಡ ಅಧ್ಯಕ್ಷ ವಿಷ್ಣು ಕಾಮತ್, ಸಂಘಟನೆಯ ಪ್ರಮುಖರಾದ ಶ್ರೀಕರ ವಿ ಶೆಟ್ಟಿ, ಹೇಮಾ, ದಿನೇಶ್ ಸುವರ್ಣ ದೇವಂದಬೆಟ್ಟು, ನಾಗೇಶ್ ಕೊಟ್ಟಾರಿ ಮತ್ತಿತರರು ಇದ್ದರು. ವಸಂತ್ ಕುಮಾರ್ ಗುರುಪುರ ಸ್ವಾಗತಿಸಿ, ವಂದಿಸಿದರು. ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು, ವೈದ್ಯಕೀಯ ತಪಾಸಣೆ ನಡೆಸಿದರು.

