ಬಂಟ್ವಾಳ: ಋಷಿ ಪರಂಪರೆ ಮತ್ತು ಜಾನಪದ ಮೂಲಕ ಬಂದಿರುವ ಇಲ್ಲಿನ ದೈವ ದೇವರ ಆರಾಧನೆ ಮತ್ತು ಶ್ರದ್ಧಾ ಭಕ್ತಿಗೆ ವೈಜ್ಞಾನಿಕವಾಗಿಯೂ ಸಮರ್ಥನೆ ಇದೆ. ತಾನು ಬದುಕಿ ಇತರರನ್ನು ಕೂಡಾ ಬದುಕಲು ಬಿಡುವುದು ನಿಜವಾದ ಧರ್ಮ ಎಂದು ಪತ್ರಕರ್ತ   ಶ್ರೀಕಾಂತ್ ಶೆಟ್ಟಿ ಕಾರ್ಕಳ  ಹೇಳಿದ್ದಾರೆ.

8dd18936-35c9-4d97-a382-73f9d768c5ff
ಇಲ್ಲಿನ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಗುರುವಾರ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪದೇಶ ನೀಡಿದರು.
ತ್ಯಾಗದ ಸಂಕೇತ ಕೇಸರಿ ಬಣ್ಣಕ್ಕೆ ದೇಶದ ಜಾತ್ಯತೀತ ಪರಂಪರೆ ಉಳಿಸುವ ಮಹತ್ತರ ಜವಾಬ್ದಾರಿಯೂ ಇದೆ ಎಂದರು.01

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪುರಾತನ ಹಿನ್ನೆಲೆ ಹೊಂದಿರುವ ಹಿಂದೂ  ಧರ್ಮದ  ದೈವಸ್ಥಾನಗಳಿಗೆ ಈಗಿನ ಧಾರ್ಮಿಕ ಪರಿಷತ್ ಅನಗತ್ಯ ಎಂದರು. ಜಿಲ್ಲಾ  ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ,
ಮಂಗಳೂರು ಎ.ಜೆ.ಸಮೂಹ ಸಂಸ್ಥೆ ಮುಖ್ಯಸ್ಥ ಎ.ಜೆ.ಶೆಟ್ಟಿ, ಮಾಜಿ‌ ಮೇಯರ್ ಭಾಸ್ಕರ್ ಕೆ. ಶುಭ ಹಾರೈಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಪ್ರಕಾಶ್ ಆಳ್ವ, ಬಂಟ್ವಾಳ ತಾಲೂಕು ಬಂಟರ ಸಂಘದ ಚಂದ್ರಹಾಸ ಶೆಟ್ಟಿ ರಂಗೋಲಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಉದ್ಯಮಿ ನಿತ್ಯಾನಂದ ಮಲ್ಲಿ ಮುಂಬೈ, ದೀಪಕ್ ಶೆಟ್ಟಿ ಮಂಗಳೂರು, ಕೃಷ್ಣ ವೈ.ಶೆಟ್ಟಿ ಮುಂಬೈ , ವ್ಯವಸ್ಥಾಪನಾ ಸಮಿತಿ ಸದಸ್ಯ ಬಾರಿ ಭಂಡಾರಿ ಮೇಗಿನಮನೆ ಮತ್ತಿತರರು ಇದ್ದರು. ದೀಕ್ಷಾ ಮತ್ತು ರಕ್ಷಾ  ಪ್ರಾರ್ಥಿಸಿದರು.

ವ್ಯವಸ್ಥಾಪನಾ ‌ಸಮಿತಿ ಅಧ್ಯಕ್ಷ ರಘು ಎಲ್.ಶೆಟ್ಟಿ ದೇವಸ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ ವಂದಿಸಿದರು. ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಮತ್ತು ಶಿಕ್ಷಕಿ ಅನಿತಾ ಕಾರ್ಯಕ್ರಮ ನಿರೂಪಿಸಿದರು.

ನಡ್ವಂತಾಡಿ ಉದಯ ಪಾಂಗಣ್ಣಾಯ ಇವರ ಮರ‍್ಗರ‍್ಶನದಲ್ಲಿ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನೆರವೇರಿತು. ಭಾಗವತ ಪಟ್ಲ ಸತೀಶ್  ಶೆಟ್ಟಿ ನೇತೃತ್ವದಲ್ಲಿ “ಕೃಷ್ಣ ಸಂಧಾನ” ಯಕ್ಷಗಾನ ತಾಳಮದ್ದಳೆ ನಡೆಯಿತು.

.

By suddi9

Leave a Reply

Your email address will not be published. Required fields are marked *