ಕೈಕಂಬ: ಗುರುಪುರ ಮೂಳೂರು ಗ್ರಾಮದ ಬಡಕರೆಯ ಶ್ರೀ ಕರ‍್ದಬ್ಬು ದೈವಸ್ಥಾನದಲ್ಲಿ ಫೆ. ೧೯ರಿಂದ ೨೦ರವರೆಗೆ ವಾರ್ಷಿಕ ಕೋಲೋತ್ಸವ ಜರುಗಲಿದೆ.
ಫೆ. ೧೯ರಂದು ಬೆಳಿಗ್ಗೆ ೧೧:೩೦ಕ್ಕೆ ಭಂಡಾರ ಆಗಮನ, ೧ಕ್ಕೆ ಅನ್ನ ಸಂತರ್ಪಣೆ, ರಾತ್ರಿ ೧೦:೩೦ರಿಂದ ಶ್ರೀ ಕರ‍್ದಬ್ಬು ಹಾಗೂ ತನ್ನಿಮಾನಿಗ ದೈವಗಳಿಗೆ ಕೋಲ ನಡೆಯಲಿದೆ. ಫೆ. ೨೦ರಂದು ಸಂಜೆ ೭:೩೦ಕ್ಕೆ ಗುಳಿಗ-ಪಂಜುರ್ಲಿ, ರಾತ್ರಿ ೯:೩೦ರಿಂದ ರಾಹುಗುಳಿ ದೈವಗಳಿಗೆ ಕೋಲ ನಡೆಯಲಿದೆ. ರಾತ್ರಿ ೧೨:೩೦ಕ್ಕೆ ಮಾರಿ ಓಡಿಸಲಾಗುವುದು. ಬಳಿಕ ಭಂಡಾರ ನಿರ್ಗಮನವಾಗಲಿದೆ ಎಂದು ಕರ‍್ದಬ್ಬು ದೈವಸ್ಥಾನ ಕೋಲೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.
