ಕೈಕಂಬ : ಅಡ್ಡೂರು ಜಂಕ್ಷನ್‌ನಲ್ಲಿ ೨೦೧೫-೧೬ನೇ ಸಾಲಿನ ಗ್ರಾಮ ವಿಕಾಸ ಯೋಜನೆಯಡಿ ೯ ಲಕ್ಷ ರೂ ವೆಚ್ಚದಲ್ಲಿ ವ್ಯವಸ್ಥೆಗೊಳಿಸಲಾದ ನೂತನ ವ್ಯಾಯಾಮ ಶಾಲೆಯನ್ನು(ಜಿಮ್) ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಸೋಮವಾರ ಉದ್ಘಾಟಿಸಿದರು.
ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಮಾತನಾಡಿ, ಗ್ರಾಮಾಭಿವೃದ್ಧಿಯ ಪ್ರತಿಯೊಂದು ಎಕಲಸಕ್ಕೂ ಗ್ರಾಮದಸಸ್ಥರ ಸಹಕಾರ ಅತ್ಯವಶ್ಯ ಎಂದರು. ಜಿ.ಪಂ ನಿಕಟಪೂರ್ವ ಸದಸ್ಯ ಯು ಪಿ ಇಬ್ರಾಹಿಂ ಮಾತನಾಡಿ, ಮಾಜಿ ಶಾಸಕ ಮೊಯಿದಿನ್ ಬಾವಾ ಅವರು ೨೦೧೫-೧೬ನೇ ಸಾಲಿನಲ್ಲಿ ಗ್ರಾಮ ವಿಕಾಸ ಯೋಜನೆಯಡಿ ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮಕ್ಕೆ ೭೫ ಲಕ್ಷ ರೂ ಅನುದಾನ ಮತ್ತು ಮೂಳೂರು ಗ್ರಾಮಕ್ಕೆ ೭೫ ಲಕ್ಷ ರೂ ಅನುದಾನ ಮೀಸಲಿರಿಸಿದ್ದು, ಆ ಯೋಜನೆಯಡಿ ಅಡ್ಡೂರಿನಲ್ಲಿ ವ್ಯಾಯಾಮ ಶಾಲೆ ತೆರೆಯಲಾಗಿದೆ. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸಮಾರAಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ದಿಲ್ಶಾದ್ ಎ, ಸಾಹಿಕ್, ಬಬಿತಾ, ಎಡ್ಲಿನ್ ಕ್ಲೀಟಾ ಡಿ’ಸೋಜ, ಬಾಲಕೃಷ್ಣ ಕೋಟ್ಯಾನ್, ಸದಾಶಿವ ಶೆಟ್ಟಿ, ಎ ಕೆ ಅಶ್ರಫ್, ಎ ಕೆ ರಿಯಾಝ್, ಮನ್ಸೂರ್, ಬುಶ್ರಾ, ಅಝ್ಮೀನಾ, ಮರಿಯಮ್ಮ, ಅಡ್ಡೂರು ಜುಮ್ಮಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವ, ಗೌರವಾಧ್ಯಕ್ಷ ಎ ಎಸ್ ಬಾವುಞ, ಜಲೀಲ್, ಜಯಲಕ್ಷಿö್ಮÃ, ಎ ಕೆ ಮೊಹಮ್ಮದ್, ಕಟ್ಟಡ ಮಾಲಕ ಜಿ ಪಿ ಹಮ್ಮಬ್ಬ, ಗಣ್ಯರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
