ಮುಂಬಯಿ: ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಛೇರಿಯ ಸುಮಾರು 50 ಜನರ ತಂಡವು ಕಳೆದ ಫೆ.5ರಂದು ಶನಿವಾರದಿಂದ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರಗಳ ದರ್ಶನ ನಡೆಸಿತು.IMG-20220212-WA0053  IMG-20220212-WA0054
ಮಾಜಿ  ಕಾರ್ಯಾಧ್ಯಕ್ಷ ರವಿ ಸನಿಲ್ ನೇತೃತ್ವದಲ್ಲಿ ಮುಂಬಯಿಯಿಂದ ಮತ್ಸ್ಯಗಂಧ ರೈಲಿನಲ್ಲಿ ಹೊರಟ ತಂಡವು ಮಾರನೇ ದಿನ ಕುಂದಾಪುರ ತಲುಪಿ ಅಲ್ಲಿಂದ ಆನೆಗುಡ್ಡೆ ಗಣಪತಿ ದೇವರ ಮತ್ತು ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಮರಣಕಟ್ಟೆ ಬ್ರಹ್ಮಲಿಂಗೇಶ್ವರ, ಕೊಲ್ಲೂರು ಮೂಕಾಂಬಿಕಾ ಹಾಗೂ ಮುರ್ಡೇಶ್ವರ ಈಶ್ವರ ದೇವರ ದರ್ಶನ ಪಡೆಯಿತು.IMG-20220212-WA0055
ನಂತರ ಕುಂದಾಪುರ, ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರು, ಶೃಂಗೇರಿ ಶರದಾಂಬೆ ಯ ದರ್ಶನ ಪಡೆದು ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ರಾತ್ರಿ ಉಜಿರೆಯಲ್ಲಿ ಉಳಿದು ಮೂರನೇ ದಿನ ಬೆಳಿಗ್ಗೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು, ಕೋಟಿ ಚೆನ್ನಯರ ಜನ್ಮಸ್ಥಳ ಗೆಜ್ಜೆಗಿರಿ ನಂದನ ಬಿತ್ತಿಲ್ ನಲ್ಲಿ ತಾಯಿ ದೇಯಿಬೈದ್ಯೆತಿ ದರ್ಶನ ಪಡೆದು ಕುಳಾಯಿಯಲ್ಲಿ ಗುರು ನಾರಾಯಣ ದರ್ಶನ, ಬಪ್ಪನಾಡು ದುರ್ಗಾಪರಮೇಶ್ವರಿ ಹಾಗೂ ಕಾಪು ಮಾರಿಯಮ್ಮನ ದರ್ಶನ ದೊಂದಿಗೆ ದೇಗುಲ ದರ್ಶನ ಮುಕ್ತಾಯ ಗೊಳಿಸಿ ಕಾಪು ಲೈಟ್ ಹೌಸ್ ರಿಸೋರ್ಟ್ ನಲ್ಲಿ ವಿಶ್ರಾಂತಿ ಪಡೆಯಿತು.  ಫೆ.10 ರಂದು ಮುಂಬಯಿಗೆ ಮರು ಪ್ರಯಾಣ ಬೆಳೆಸಿದರು.IMG-20220212-WA0056
ಈ ಸಂದರ್ಭದಲ್ಲಿ ಕುಶ ಸನಿಲ್, ರಾಜೇಶ್ ಕೋಟ್ಯಾನ್, ಆರ್.ಕೆ. ಸುವರ್ಣ, ಮನೋಜ್ ಆರ್. ಕುಕ್ಯಾನ್, ಚಂದ್ರಹಾಸ್ ಪಾಲನ್, ದೇವರಾಜ್ ಪೂಜಾರಿ ಇವರುಗಳು ಊಟೋಪಚಾರ ದ ವ್ಯವಸ್ಥೆ, ಶ್ರೀಧರ್ ಅಮೀನ್, ರಾಜು ಜಿ.ಪೂಜಾರಿ, ಪುರಂದರ ಪೂಜಾರಿ, ಅಶೋಕ್ ಅಮೀನ್ ಇವರು ಉಪಾಹಾರ ವ್ಯವಸ್ಥೆ ಮಾಡಿದರು. ಗೌರವ ಅಧ್ಯಕ್ಷ ದೇವರಾಜ ಪೂಜಾರಿ, ಕಾರ್ಯಾಧ್ಯಕ್ಷ ಚಂದ್ರಹಾಸ್ ಪಾಲನ್ ಮತ್ತು  ಪದಾಧಿಕಾರಿಗಳು, ಸದಸ್ಯರ ಸಹಕಾರದಿಂದ ಪುಣ್ಯಕ್ಷೇತ್ರಗಳ ದರ್ಶನ ಯಶಸ್ವಿಯಾಗಿ ನೆರವೇರಿತು.IMG-20220212-WA0057

By suddi9

Leave a Reply

Your email address will not be published. Required fields are marked *