ಮುಂಬಯಿ : ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲರ ರಾಜಭವನದಲ್ಲಿ ನೂತನವಾಗಿ ನಿರ್ಮಿಸಲಾದ ದರ್ಬಾರ್ ಹಾಲ್ ಇಂದಿಲ್ಲಿ ಶುಕ್ರವಾರ ಪೂರ್ವಾಹ್ನ ಭಾರತದ ರಾಷ್ಟ್ರಪತಿ ರಾಮ್‌ನಾಥ್ ಕೋವಿದ್ ಅವರು ಪತ್ನಿ ಸವಿತಾ ಕೋವಿಂದ್ ಅವರೊಂದಿಗೆ ರಾಷ್ಟ್ರಪತಿಗಳು ಉದ್ಘಾಟಿಸಿದ್ದು ಆ ಮುನ್ನ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶದ ಸಾಂತಾಕ್ರೂಜ್ ಪೂರ್ವದಲ್ಲಿನ ಪೇಜಾವರ ಮಠದ ಮುಂಬಯಿ ಶಾಖೆಯ ಪ್ರಧಾನ ವ್ಯವಸ್ಥಾಪಕ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಇವರು ತನ್ನ ಪೌರೋಹಿತ್ಯದಲ್ಲಿ ದ್ವಾರಪಾಲಕ ಪೂಜೆ ಮತ್ತು ಲಕ್ಷ್ಮೀನಾರಾಯಣ ಪೂಜೆ ನೆರವೇರಿಸಿದರು. ವಿದ್ವಾನ್ ಪವನ ಭಟ್ ಅಣ್ಣಿಕೇರಿ ಸಹಕರಿಸಿದರು.Raj Bhavan Pejawara 1  Raj Bhavan Pejawara 5

ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ಮುಖ್ಯಮಂತ್ರಿ ಉದ್ಧಾವ್ ಠಾಕ್ರೆ, ಉಪಮುಖ್ಯಮಂತ್ರಿ ಅಜಿತ್ ಪವಾರ್, ಲೋಕೋಪಯೋಗಿ ಸಚಿವ ಅಶೋಕ್ ಚವ್ಹಾಣ್, ಶಿಷ್ಟಾಚಾರ ಸಚಿವ ಆದಿತ್ಯ ಠಾಕ್ರೆ, ಬಾಂಬೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ದೀಪಾಂಕರ್ ದತ್ತಾ, ವಿಧಾನ ಪರಿಷತ್ ನ ಉಪ ಸಭಾಪತಿ ಡಾ| ನೀಲಂ ಗೋರ್ಹೆ, ಉಪಸಭಾಪತಿ ನರಹರಿ ಜಿರ್ವಾಲ್, ರಾಜ್ಯ ಸಚಿವೆ ಅದಿತಿ ತಟ್ಕ್ಕರೆ ಮತ್ತಿತರ ಆಹ್ವಾನಿತರು ಉಪಸ್ಥಿತರಿದ್ದರು.Raj Bhavan Pejawara 4  Raj Bhavan Pejawara 3  Raj Bhavan Pejawara 2

By suddi9

Leave a Reply

Your email address will not be published. Required fields are marked *