ಕೈಕಂಬ : ಗುರುಪುರ ಬಂಟರ ಮಾತೃ ಸಂಘ(ರಿ) ಇದರ ಸಾಮಾಜಿಕ ಸೇವಾ ಯೋಜನೆಯಡಿ ಕಡು ಬಡತನದಲ್ಲಿರುವ ಮೂಡುಶೆಡ್ಡೆಯ ಸುಶೀಲಾ ಶೆಟ್ಟಿಯವರಿಗೆ ಉಚಿತ ಮನೆ ನಿರ್ಮಿಸಿ ಕೊಡಲಿದ್ದು, ಫೆ. 0೩ರಂದು ಗುರುವಾರ ಮೂಡುಶೆಡ್ಡೆಯಲ್ಲಿ ಹೊಸ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿತು.

ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ಬಂಟ ಸಮಾಜದ ಅರ್ಹ ಫಲಾನುಭವಿಗಳನ್ನು ಗುರುತಿಸಿ ನೆರವಾಗುವಂತಹ ಕೆಲಸ ಇದಾಗಿದ್ದು, ಜಾಗತಿಕ ಬಂಟರ ಸಂಘವು ಇದುವರೆಗೆ ೧೮೨ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿದೆ. ಕಳೆದ ಸಾಲಿನಲ್ಲಿ ಸಮಾಜದ ಅರ್ಹರಿಗಾಗಿ ಒಂಬತ್ತು ಕೋಟಿ ರೂ ವ್ಯಯಿಸಲಾಗಿತ್ತು ಎಂದರು.

ಗುರುಪುರ ಬಂಟರ ಮಾತೃ ಸಂಘದ ಮಾಜಿ ಅಧ್ಯಕ್ಷ ರಾಜ್‌ಕುಮಾರ್ ಶೆಟ್ಟಿ ತಿರುವೈಲುಗುತ್ತು ಮಾತನಾಡಿ, ಸಂಘದ ಪ್ರಯೋಜನ ಪಡೆಯುವಂತಹ ಕುಟುಂಬಗಳ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸ್ಥಿತಿವಂತರಾಗಿ ಸಮಾಜದ ಏಳಿಗೆಗೆ ನೆರವಾಗಬೇಕು ಎಂದರು.

ಸAಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಹೊಸಲಕ್ಕೆ ಮೂಡುಶೆಡ್ಡೆ ಮಾತನಾಡಿ, ಗುರುಪುರ ಬಂಟರ ಮಾತೃ ಸಂಘವು ಬಂಟ ಸಮಾಜದ ಬಡ ಕುಟುಂಬಗಳ ಗುರುತಿಸಿ, ನೆರವಿನ ಕೆಲಸ ಮಾಡುತ್ತಿದೆ. ಪ್ರಸ್ತುತ ಸಂಘವು ‘ಫಲ್ಗುಣಿ ದತ್ತಿ ನಿಧಿ’ ರಚಿಸಿದ್ದು, ಈ ಮೂಲಕ ಇನ್ನಷ್ಟು ಸಾಮಾಜಿಕ ಕಳಕಳಿಯ ಕೆಲಸ ಮಾಡುವ ಉದ್ದೇಶ ಹೊಂದಿದೆ ಎಂದರು.

ಸAಘದ ಪದಾಧಿಕಾರಿ ಸುದರ್ಶನ ಶೆಟ್ಟಿ ಪೆರ್ಮಂಕಿ ಮಾತನಾಡಿದರು. ಅಂತಾರಾಷ್ಟ್ರೀಯ ಬಂಟ್ಸ್ ವೆಲ್ಫೇರ್ ಟ್ರಸ್ಟ್ನ ಯುವ ವಿಭಾಗದ ಉಪಾಧ್ಯಕ್ಷ ದೇವಿಚರಣ್ ಶೆಟ್ಟಿ, ಮೂಡುಶೆಡ್ಡೆ ಪಂಚಾಯತ್ ಉಪಾಧ್ಯಕ್ಷ ಅನಿಲ್, ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಶೇಖರ, ಬಬಿತಾ ಮತ್ತು ಕಿರಣ್ ಶೆಟ್ಟಿ, ಉಳಾಯಿಬೆಟ್ಟು ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ, ಉಮೇಶ್, ಸಂಘದ ಪದಾಧಿಕಾರಿಗಳಾದ ಪುರುಷೋತ್ತಮ ಮಲ್ಲಿ, ಜಯರಾಮ ರೈ ಉಳಾಯಿಬೆಟ್ಟು, ಪ್ರವೀಣ್ ಆಳ್ವ ಕಡೆಗುಂಡ್ಯ, ಇಂದಿರಾಕ್ಷಿ, ಹರೀಶ್ ಶೆಟ್ಟಿ ಉಪ್ಪುಗೂಡು, ವೀರಣ್ಣ ಹಾಗೂ ಇತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *