ಕೈಕಂಬ: ಗಂಜಿಮಠದ ಒಡ್ಡೂರು ಫಾರ್ಮ್ಸ್ ನಲ್ಲಿ ಜ.21ರಂದು ಶುಕ್ರವಾರ ವಿಕ ಸುಪರ್ ಸ್ಟಾರ್ ರೈತ ೨೦೨೧ರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ದ.ಕ.ಜಿಲ್ಲೆಯ ಒಂಭತ್ತು ರೈತರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಸಕ ಡಾ. ವೈ.ಭರತ್ ಶೆಟ್ಟಿ ಗೋಪೂಜೆ ನೆರವೇರಿಸಿದರು.

ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಏಕಗಮ್ಯಾನಂದ ಶುಭ ಹಾರೈಸಿದರು. ಒಡ್ಡೂರು ಫಾರ್ಮ್ಸ್ ಮಾಲೀಕರೂ ಆದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಇದೇ ವೇಳೆ ರಾಜೇಶ್ ನಾಯ್ಕ್ ಮತ್ತು ಉಷಾ ಆರ್. ನಾಯ್ಕ್ ದಂಪತಿಯನ್ನು ಸನ್ಮಾನಿಸಲಾಯಿತು.
ಪ್ರಕೃತಿ ಪ್ರೊಡಕ್ಟ್ ಪ್ರೈವೇಟ್ ಲಿಮಿಟೆಡ್ ನ ಚೇರ್ಮನ್ ಎಂ.ಆರ್. ಶೆಟ್ಟಿ ಅವರು ಪ್ರಗತಿಪರ ಕೃಷಿ ಮತ್ತು ಆರ್ಥಿಕ ಸ್ವಾವಲಂಬನೆ ವಿಚಾರದ ಕುರಿತು ಮಾತನಾಡಿದರೆ, ಬೆಳ್ತಂಗಡಿ ತಾಲೂಕಿನ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕೃಷಿಕ ನಡೆದ ಪ್ರಭಾಕರ ಮಯ್ಯ ಸುರ್ಯ ಅವರು ಸಮಗ್ರ ಕೃಷಿ ಮತ್ತು ಸವಾಲುಗಳು ವಿಷಯದಲ್ಲಿ ತನ್ನ ಕೃಷಿ ಅನುಭವಗಳನ್ನು ವಿವರಿಸಿ, ಯಶಸ್ಸಿನ ಸೂತ್ರಗಳನ್ನು ಒದಗಿಸಿದರು.

ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರು ದ.ಕ ಮತ್ತು ಕಾಸರಗೋಡಿನ ಒಂಭತ್ತು ರೈತರಿಗೆ ಸೂಪರ್ ಸ್ಟಾರ್ ರೈತ ಪುರಸ್ಕಾರ ನೀಡಿ ಗೌರವಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ. ಎಂ.ಸಿ. ಸೀತಾ ಹಾಗೂ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್.ಆರ್.ನಾಯ್ಕ್ ಉಪಸ್ಥಿತರಿದ್ದರು.

ವಿಜಯ ಕರ್ನಾಟಕ ಸ್ಥಾನೀಯ ಸಂಪಾದಕ ಯು.ಕೆ.ಕುಮಾರನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಉಪಸಂಪಾದಕ ರವೀಂದ್ರ ಶೆಟ್ಟಿ, ಪುತ್ತೂರಿನ ಹಿರಿಯ ವರದಿಗಾರ ಸುಧಾಕರ ಸುವರ್ಣ ತಿಂಗಳಾಡಿ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ವರದಿಗಾರ ಮಹಮ್ಮದ್ ಆರೀಫ್ ಪಡುಬಿದ್ರಿ, ಮೂಡುಬಿದಿರೆ ವರದಿಗಾರ ಬೆಳುವಾಯಿ ಸೀತಾರಾಮ ಆಚಾರ್ಯ, ಬಂಟ್ವಾಳ ವರದಿಗಾರ ಹರೀಶ ಮಾಂಬಾಡಿ, ಬೆಳ್ತಂಗಡಿ ವರದಿಗಾರ ಭುವನೇಶ ಗೇರುಕಟ್ಟೆ ಸನ್ಮಾನಿತರ ಪರಿಚಯಿಸಿದರು. ಹಿರಿಯ ವರದಿಗಾರ ಆರ್.ಸಿ.ಭಟ್ ವಂದಿಸಿದರು. ರೆಸ್ಪಾನ್ಸ್ ವಿಭಾಗದ ಮುಖ್ಯಸ್ಥ ರಾಮಕೃಷ್ಣ, ಪ್ರಸರಣ ವಿಭಾಗ ಮುಖ್ಯಸ್ಥ ನಾರಾಯಣ ವೇದಿಕೆಯಲ್ಲಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ರೈತರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದೇ ಸಂದರ್ಭ ವಸ್ತು ಪ್ರದರ್ಶನ, ಮೈಮ್ ರಾಮ್ ದಾಸ್ ಮತ್ತು ಬಳಗದಿಂದ ಹಾಡು ಕಾರ್ಯಕ್ರಮಗಳು ನಡೆದವು. ಮಹೇಶ್ ಪಟ್ಟಾಜೆ, ವಿಜಯ್ ಕೋಟ್ಯಾನ್ ಪಡು, ಯೋಗೀಶ್ ಹೊಳ್ಳ, ಕೃಷ್ಣ ಕೋಲ್ಚಾರ್, ಬಾಲಸುಬ್ರಹ್ಮಣ್ಯ, ರಾಮಣ್ಣ, ಚಂದ್ರಕಾಂತ್, ರಾಜೇಶ್ ಕಿಣಿ, ಗಿರೀಶ್, ಆಲ್ವಿನ್, ಯೋಗಿತಾ, ಪ್ರತಿಭಾ, ಸುಷ್ಮಾ, ಉಮಾ, ಸುಪ್ರೀತ್, ನವೀನ್, ಗುರುರಾಜ್, ದಯಾನಂದ್, ಅರವಿಂದ್, ಕೃಷ್ಣ ಭಟ್, ಸಾಕೇತ್ ಭಂಡಾರಿ, ಸುಶೀಲೇಂದ್ರ, ಧರಣೇಶ್, ಪ್ರಮೋದ್, ಆಂಟನಿ, ದೇವದಾಸ್, ಸ್ಟೀವನ್ ರೇಗೊ, ವಾಮನ ಪೂಜಾರಿ, ಯಾದವ ಕುಲಾಲ್, ರವಿ ಪೊಸವಣಿಕೆ, ವಸಂತ್, ಹರೀಶ್, ಚಂದ್ರಹಾಸ ಪೊಳಲಿ ಸಹಿತ ಪ್ರಮುಖರು ವಿವಿಧ ಜವಾಬ್ದಾರಿ ನಿಭಾಯಿಸಿದರು.

ಸೂಪರ್ ಸ್ಟಾರ್ ರೈತರು
- ಆನಂದ ರೈ ಸೂರಂಬೈಲ್, ಸರ್ವೆ, ಪುತ್ತೂರು ತಾಲೂಕು
- ತಿರುಮಲೇಶ್ವರ ಭಟ್ ಕುರಿಯಾಜೆ, ಸುಳ್ಯ ತಾಲೂಕು
ಹರೀಶ್ ಜೆ. ಶೆಟ್ಟಿ ಮೂಲ್ಕಿ, ಮೂಡುಬಿದಿರೆ ತಾಲೂಕು
ಹರೀಶ್ ಕೋಡ್ಲ, ಕರೋಪಾಡಿ, ಬಂಟ್ವಾಳ ತಾಲೂಕು
ಅಭಿನಂದನ್, ಇಂದಬೆಟ್ಟು, ಬೆಳ್ತಂಗಡಿ ತಾಲೂಕು
ಅನಂತ ಪದ್ಮನಾಭ ಭಟ್, ಸೂರಿಂಜೆ, ಮಂಗಳೂರು ತಾಲೂಕು
ಕೇಶವ ಭಂಡಾರಿ ಕೈಪ, ಕೋಡಿಂಬಾಡಿ, ಪುತ್ತೂರು ತಾಲೂಕು
ಸತ್ಯನಾರಾಯಣ ಬೆಳೇರಿ, ಕಿನ್ನಿಂಗಾರು, ಕಾಸರಗೋಡು
ಲಕ್ಷ್ಮೀ ಎಂ.ಎಸ್., ಮುಣ್ಚಿಕಾನ, ಬದಿಯಡ್ಕ, ಕಾಸರಗೋಡು


