ಉಜಿರೆ: ಪ್ರಧಾನಿ ನರೇಂದ್ರ ಮೋದಿಯವರಆರೋಗ್ಯ ಮತ್ತು ಆಯುಷ್ಯ ವೃದ್ಧಿಗಾಗಿ ಸೋಮವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಮೃತ್ಯುಂಜಯ ಹೋಮ ನಡೆಯಿತು. ಸುರತ್ಕಲ್‌ನ ವೇದಮೂರ್ತಿ ನಾಗೇಂದ್ರ ಭಾರದ್ವಾಜ್ ಪ್ರಧಾನ ಪೌರೋಹಿತ್ಯದಲ್ಲಿ ಏಳು ಕುಂಡಗಳಲ್ಲಿ ನಡೆದ ಮೃತ್ಯುಂಜಯ ಹೋಮದಲ್ಲಿ ೧೦೮ ಮಂದಿ ಅರ್ಚಕರು ಭಾಗವಹಿಸಿದರು.12

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರುಮತ್ತು ಹೇಮಾವತಿ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಡೆದ ಮೃತ್ಯುಂಜಯ ಹೋಮದಲ್ಲಿ ಶಾಸಕ ಹರೀಶ್ ಪೂಂಜ ಮತ್ತುಡಾ.ಸ್ವೀಕೃತಿ ಹರೀಶ್ ಪೂಂಜ ಭಾಗವಹಿಸಿ ಪುಣ್ಯಭಾಗಿಗಳಾದರು. ಸಚಿವರುಗಳಾದ ಕೆ.ಎಸ್. ಈಶ್ವರಪ್ಪ, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ್ ಮತ್ತುಎಸ್. ಅಂಗಾರ ಉಪಸ್ಥಿತರಿದ್ದು ತಾಲ್ಲೂಕಿನ ಸಮಸ್ತ ಜನತೆಯ ಪರವಾಗಿ ಶಾಸಕ ಹರೀಶ್ ಪೂಂಜ ಆಯೋಜಿಸಿದ ಮೃತ್ಯುಂಜಯ ಹೋಮಕ್ಕೆ ಶ್ಲಾಘಿಸಿ ಅಭಿನಂದಿಸಿದರು.15ಬೆಳಿಗ್ಯೆ ೭ ಗಂಟೆಗೆ ಆರಂಭವಾದ ಮೃತ್ಯುಂಜಯ ಹೋಮ, ಚತುರ್ವೇದ ಪಾರಾಯಣ, ಗೋಪೂಜೆ ಮತ್ತು ಮಹಾಗಣಪತಿ ಹೋಮದ ಬಳಿಕ ಮಧ್ಯಾಹ್ನಒಂದು ಗಂಟೆಗೆ ಮಹಾ ಮಂಗಳಾರತಿ, ಪೂರ್ಣಾಹುತಿಯೊಂದಿಗೆ ಸಮಾಪನಗೊಂಡಿತು. ಶುಭ ಹಾರೈಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಶಾಸಕ ಹರೀಶ್ ಪೂಂಜರ ಸೇವಾ ಕಾರ್ಯವನ್ನುಶ್ಲಾಘಿಸಿ ಅಭಿನಂದಿಸಿ ಪ್ರಧಾನಿಯವರ ಆಯುಷ್ಯ ಮತ್ತು ಆರೋಗ್ಯ ವೃದ್ಧಿಯಾಗಿ, ಸಕಲ ಸನ್ಮಂಗಲ ಉಂಟಾಗಲಿ ಎಂದು ಹಾರೈಸಿ ಶಾಸಕ ಹರೀಶ್ ಪೂಂಜ ಮತ್ತುಡಾ.ಸ್ವೀಕೃತಿ ಹರೀಶ್ ಪೂಂಜದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಸಾದ ನೀಡಲಿದ್ದಾರೆಎಂದು ಹೇಳಿದರು.

16ವಿಧಾನ್ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾ ಹಷೇಂದ್ರಕುಮಾರ್, ಶ್ರೇಯಸ್‌ಕುಮಾರ್ ಮತ್ತು ನಿಶ್ಚಲ್‌ಕುಮಾರ್ ಉಪಸ್ಥಿತರಿದ್ದರು.

17

By suddi9

Leave a Reply

Your email address will not be published. Required fields are marked *