ಕಲ್ಲಡ್ಕ : ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕಇಲ್ಲಿ ವಿವೇಕಾನಂದ ಜಯಂತಿ ಅಂಗವಾಗಿ ಜ.12ರಂದು ಬುಧವಾರ ವಿವೇಕಾಮೃತ ಸಿಂಚನ ಕಾರ್ಯಕ್ರಮ ನಡೆಯಿತು. ವಿವೇಕಾನಂದರ ವೇಷಧರಿಸಿದ ವಿದ್ಯಾರ್ಥಿಗಳು ವಿವೇಕವಾಣಿ ಉದ್ಘೋಷಿಸಿದರು.
ಕಾರ್ಯಕ್ರಮದಲ್ಲಿ ಡಿವೈನ್ ಪಾರ್ಕ್ ಸಾಲಿಗ್ರಾಮ ಉಡುಪಿ ಇದರ ಮಹಿಳಾ ಮೇಲ್ವಿಚಾರಣಾ ಅಧಿಕಾರಿ ಪ್ರೇಮ ಪ್ರಭಾಕರ್, ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆಪುಷ್ಪಾರ್ಚನೆ ಮಾಡುವ ಮೂಲಕಕಾರ್ಯಕ್ರಮಕ್ಕೆಚಾಲನೆ ನೀಡಿದರು ಮತ್ತು ವಿವೇಕಾನಂದರ ಆಧ್ಯಾತ್ಮಿಕ ಜೀವನ, ವೈಜ್ಞಾನಿಕ ಚಿಂತನೆ, ದೇಶ, ಧರ್ಮ ಯುವಜನಾಂಗದ ಬಗ್ಗೆ ಅವರ ಕಾಳಜಿ, ಬಡತನ ನಿರ್ಮೂಲನೆಗಾಗಿ ಅವರ ಶ್ರಮ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯನ್ನು ವಿಶ್ವಕ್ಕೆ ಸಾರಿದ ಘನತೆ ಇವೆಲ್ಲದರ ಬಗ್ಗೆ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಮನಸ್ಸು ಬುದ್ಧಿ ಮತ್ತು ಚಿತ್ತ ಇವುಗಳ ಸದುಪಯೋಗ ಮಾಡಿಕೊಂಡರೆಎಲ್ಲರೂ ಹಂತ ಹಂತವಾಗಿ ಬೆಳೆಯುತ್ತಾ ವಿವೇಕಾನಂದರೆ ಆಗಬಹುದು ಎಂದರು. 
ವೇದಿಕೆಯಲ್ಲಿ ಉಪಸ್ಥಿತರಿದ್ದ ರಾಷ್ಟ್ರ ಸೇವಿಕಾ ಸಮಿತಿದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಕಮಲಾ ಪ್ರಭಾಕರ ಭಟ್, ಫ್ರೌಢಶಾಲಾ ಸಹ ಸಂಚಾಲಕರಾದ ರಮೇಶ್ ಶ್ರೀಮಾನ್, ಶ್ರೀಯುತ ಸುಧಾಕರ್ ,ಶ್ರೀಯುತ ಪ್ರಭಾಕರ ಮತ್ತು ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶಾಂಭವಿ ಮಾತಾಜಿ ಇವರು ಕ್ರೀಡಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಪುರುಷೋತ್ತಮ ಶ್ರೀಮಾನ್ ಮತ್ತು ಭಾಗ್ಯಶ್ರೀ ಮಾತಾಜಿ ವಿಜೇತರ ಪಟ್ಟಿಯನ್ನು ವಾಚಿಸಿದರು.
ಕು ವಾಸವಿ ಕೆ.ಸಿ. ನಿರೂಪಿಸಿ, ಕು ಅನುಷಾ ಸ್ವಾಗತಿಸಿ, ಕು ಚಿನ್ಮಯಿ ವಂದಿಸಿದಳು, ಶಿವರಾಜ್ ಶ್ರೀಮಾನ್ ಕಾರ್ಯಕ್ರಮವನ್ನು ಸಂಯೋಜಿಸಿದರು.

