ಕೈಕಂಬ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕಿರಿಯರ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್-೨೦೨೧ರಲ್ಲಿ ಪಾಲ್ದೆನೆಯ ಕ್ಯಾಂಬ್ರಿಡ್ಜ್ ಸ್ಕೂಲ್‌ನ ೧೦ನೇ ತರಗತಿಯ ವಿದ್ಯಾರ್ಥಿ, ವಾಮಂಜೂರಿನ ಜಿ ಆದಿತ್ಯ ಕಿರಣ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಇವರು ಕಾವೂರಿನ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್(ಐಕೆಎಂಎ) ಸಂಸ್ಥೆಯಲ್ಲಿ ಕಿಕ್ ಬಾಕ್ಸಿಂಗ್ ಕಲಿಯುತ್ತಿದ್ದು, ನಿತಿನ್ ಎನ್ ಸುವರ್ಣ ಮತ್ತು ಸಂಪತ್ ಕುಮಾರ್ ತರಬೇತುದಾರರಾಗಿದ್ದಾರೆ.
ಜಿ ಕಿರಣ್ ಮತ್ತು ಸಿ ಎಸ್ ಲೀಲಾವತಿ ದಂಪತಿಯ ಪುತ್ರನಾಗಿರುವ ಈತ ಇತ್ತೀಚೆಗೆ ಬಾಗಲಕೋಟೆಯಲ್ಲಿ ನಡೆದಿದ್ದ ರಾಜ್ಯ ಮಟ್ಟದ ಡಬ್ಯೂಯುಎಸ್‌ಎಚ್‌ಯು ಚಾಂಪಿಯನ್‌ಶಿಪ್ ಮತ್ತು ಮೈಸೂರು ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್‌ನಲ್ಲಿ ಒಟ್ಟು ಮೂರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
