ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ರೋಟರಿ ಕ್ಲಬ್ ಫರಂಗಿಪೇಟೆ ಇವರ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ದ.ಕ. ಜಿಲ್ಲೆ ಇದರ ಸಹಕಾರದೊಂದಿಗೆ 117 ನೇ ರಕ್ತದಾನ ಶಿಬಿರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ  ನಡೆಯಿತು.vlcsnap-2021-12-28-13h48m26s985-e1640685503603

ರೋಟರಿ ಕ್ಲಬ್ ಫರಂಗಿಪೇಟೆಯ ಸ್ಥಾಪಕಾಧ್ಯಕ್ಷ, ಮಹೇಶ್ ಮೋಟರ್ಸ್ ಮಾಲಕ ಎ.ಕೆ. ಜಯರಾಮ ಶೇಖ ಶಿಬಿರ  ಉದ್ಘಾಟಿಸಿದರು. ಅವರು ಮಾತನಾಡಿ ರಕ್ತದಾನ ಮಾಡುವ ಮೂಲಕ ತುರ್ತು ಸಂದರ್ಭದಲ್ಲಿ ರೋಗಿಯ ಪ್ರಾಣ ಉಳಿಸಲು ಸಾಧ್ಯವಿದೆ. ಆದ್ದರಿಂದ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ನಾವು ಮುಂದಾಗಬೇಕು ಎಂದು ತಿಳಿಸಿದರು. vlcsnap-2021-12-28-13h47m36s943

ರೋಟರಿ ಕ್ಲಬ್ ಫರಂಗಿಪೇಟೆಯ ಅಧ್ಯಕ್ಷ  ಸುರೇಂದ್ರ ಕಂಬಳಿ ಅಡ್ಯಾರ್ ಗುತ್ತು  ಮಾತನಾಡಿ ರಕ್ತದಾನದಿಂದ ಜೀವ ಉಳಿಸುವುದರ ಜೊತೆಗೆ ನಮ್ಮದೇಹದಲ್ಲೂ ಹೊಸ ರಕ್ತ ಉತ್ಪತ್ತಿಯಾಗಿ ನಮ್ಮ  ಆರೋಗ್ಯವರ್ಧನೆಯೂ ಆಗಲಿದೆ ಎಂದು ತಿಳಿಸಿದರು.

ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಜಯರಾಂ ತುಂಬೆ ಮುಖ್ಯ ಅತಿಥಿvlcsnap-2021-12-28-13h44m53s458ಯಾಗಿ ಭಾಗವಹಿಸಿದ್ದರು. ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಪ್ರವೀಣ್, ರೋಟರಿ ಕ್ಲಬ್ ಫರಂಗಿಪೇಟೆಯ ನಿಕಟಪೂರ್ವ ಅಧ್ಯಕ್ಷ ರಮೇಶ್  ತುಂಬೆ, ಸೇವಾಂಜಲಿಯ ಪ್ರಶಾಂತ್ ತುಂಬೆ ಅಡ್ಯಾರ್ ಗ್ರಾ.ಪಂ.  ಸದಸ್ಯ ಪ್ರವೀಣ್ ಕುಮಾರ್, ತುಂಬೆ ಗ್ರಾ.ಪಂ. ಸದಸ್ಯ ಕಿಶೋರ್ ಬಂಗೇರ ಸಚಿನ್, ಅರ್ಜುನ್ ಪೂಂಜಾ, ಲೋಕೇಶ್ ಮಹಮ್ಮದ್ ಫೈಝಲ್ ತುಂಬೆ, ಪ್ರಕಾಶ್ ಕಿದೆಬೆಟ್ಟು, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಫರಂಗಿಪೇಟೆಯ ಅಧ್ಯಕ್ಷ ಸುರೇಂದ್ರ ಕಂಬಳಿ ಅಡ್ಯಾರ್ ಗುತ್ತು ಹಾಗೂ ಪ್ರಣಮ್ ಕಿದೆಬೆಟ್ಟು ಸ್ವಯಂ ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು.

By Suddi9

Leave a Reply

Your email address will not be published. Required fields are marked *