ಬಂಟ್ವಾಳ : ತಾಲೂಕಿನ  ಕಾರಿಂಜದ ಯಕ್ಷಾವಾಸ್ಯಂ ಕಾರಿಂಜ ಇದರ  ಪ್ರಥಮ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಡಿ.೨೫ರಂದು ವಗ್ಗ ಕಾಡಬೆಟ್ಟು ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ನಡೆಯಿತು. ಮಾಜಿ ಸಚಿವ ರಮಾನಾಥ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಶ್ರೇಷ್ಠ ಕಲೆಯಾಗಿದ್ದು, ಇದರ ಉಳಿವಿಗೆ ಶಕ್ತಿ ನೀಡುವ ಯಕ್ಷಾವಾಸ್ಯಮ್ ಕಾರ್ಯ ಅಭಿನಂದನೀಯ ಎಂದರು. ಯಕ್ಷಗಾನವನ್ನು ಉಳಿಸಿ, ಬೆಳೆಸಿದ ಹಿಂದಿನ ತಲೆಮಾರಿನ ಮೇರು ಕಲಾವಿದರ ಸಂಸ್ಮರಣೆ ಮತ್ತು ಕಲಾವಿದರಿಗೆ ಗೌರವ ಉತ್ತಮ ಕಾರ್ಯ ಎಂದರು.2912pkt1

ಕಾರಿಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪಿ.ಜಿನರಾಜ ಆರಿಗ ,ಜಿ.ಪಂ. ನಿಕಟಪೂರ್ವ ಸದಸ್ಯ ಬಿ.ಪದ್ಮಶೇಖರ ಜೈನ್, ಕಲಾ ಪೋಷಕ ಗಣೇಶ್ ನಾವಡ  ಪಡುಬಿದ್ರಿ, ಹಿರಿಯ ಯಕ್ಷಗಾನ ಕಲಾವಿದ ಮಂಜುನಾಥ ಭಟ್ ಬೆಳ್ಳಾರೆ, ಉದ್ಯಮಿ ರಾಜೇಶ್ ಶೆಟ್ಟಿ ಪುಳಿಮಜಲು, ಕಾರಿಂಜ ದೇವಸ್ಥಾನದ ಅರ್ಚಕ ಮಿಥುನ್‌ರಾಜ್ ನಾವಡ ಅವರು ಉಪಸ್ಥಿತರಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರು ಭೇಟಿ ನೀಡಿ ಶುಭ ಹಾರೈಸಿದರು.ಸಮಿತಿ ಪದಾದಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಯಕ್ಷಾವಾಸ್ಯಂ ಸಂಚಾಲಕಿ ಸಾಯಿಸುಮಾ ನಾವಡ ಅವರು ಸ್ವಾಗತಿಸಿದರು. ಜ್ಯೋತಿ ರಾವ್ ಮತ್ತು ಜ್ಯೋತ್ಸ್ನಾ  ರಾವ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಪೂರ್ವರಂಗ,  ಯಕ್ಷಗಾನ ಅಬ್ಬರತಾಳ,  ದಾಶರಥಿ ದರ್ಶನ ಯಕ್ಷಗಾನ ಪ್ರದರ್ಶನ ನಡೆಯಿತು. ಮಧ್ಯಾಹ್ನ  ಬಳಿಕ  ಹಿರಿಯ ಯಕ್ಷಗಾನ ಕಲಾವಿದ ಮಂಜುನಾಥ ಭಟ್ ಬೆಳ್ಳಾರೆ ಅವರಿಗೆ ಗೌರವಾರ್ಪಣೆ ನಡೆಯಿತು. ಯಕ್ಷಗುರುಗಳಿಗೆ ಗುರುವಂದನೆ, ಭಕ್ತಿ ಪಾರಮ್ಯ ಯಕ್ಷಗಾನ ತಾಳಮದ್ದಳೆ ನಡೆಯಿತು.

ಸಂಜೆ  ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ   ವಾಸುದೇವ ತಂತ್ರಿ ಕುಂಟಾರು ಅವರು ಅಧ್ಯಕ್ಷತೆ ವಹಿಸಿದ್ದರು. ಅಷ್ಟಾವಧಾನಿ ಕಬ್ಬಿನಾಲೆ ಬಾಲಕೃಷ್ಣ ಭಾರಧ್ವಾಜ, ರಾಮಕುಂಜ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ನಿರ್ದೇಶಕ ವೇದವ್ಯಾಸ ರಾಮಕುಂಜ, ಯಕ್ಷಗಾನ ಕಲಾವಿದೆ ಪೂರ್ಣಿಮಾ ಯತೀಶ್ ರೈ, ಕಾರಿಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಗ್ರಾಮಣಿ ವೆಂಕಟರಮಣ ಮುಚ್ಚಿನ್ನಾಯ, ಗೌರವಾಧ್ಯಕ್ಷ ಪ್ರಮೋದ್ ಕುಮಾರ್ ರೈ, ಉದ್ಯಮಿ ಹೇಮಂತ ಕುಮಾರ್, ಕಾವಳಪಡೂರು ಗ್ರಾ.ಪಂ. ಅಧ್ಯಕ್ಷೆ ರಜನಿ, ಕಾವಳಮೂಡೂರು ಗ್ರಾ.ಪಂ.ಉಪಾಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಹಿರಿಯ ಭಾಗವತ  ದಿ.ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಸಂಸ್ಮರಣೆ ಹಾಗೂ ಯಕ್ಷಗಾನ ಕಲಾವಿದ ಸೂರ್ಯನಾರಾಯಣ ಭಟ್‌ಬೆಳ್ಳಾರೆ ಅವರಿಗೆ ಯಕ್ಷಾವಾಸ್ಯಮ್ ಪ್ರಶಸ್ತಿ ೨೦೨೧ ಪ್ರದಾನ ಮಾಡಲಾಯಿತು. ಎಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಯಕ್ಷವಾಸ್ಯಮ್ ಕಾರಿಂಜದ ವಿದ್ಯಾರ್ಥಿಗಳಿಗೆ ಪುರಸ್ಕಾರ,    ಗಿರಿಜಾ ಕಲ್ಯಾಣ, ಕುಮಾರ ವಿಜಯ  ಯಕ್ಷಗಾನ ಪ್ರದರ್ಶನ  ನಡೆಯಿತು.

By Suddi9

Leave a Reply

Your email address will not be published. Required fields are marked *