ಮುಂಬಯಿ : ಜೈನಧರ್ಮ ವಿಶ್ವಧರ್ಮವಾಗಿದ್ದು ಅದರ ಮೌಲಿಕತತ್ವ, ಸಂದೇಶಗಳನ್ನು ಪಠ್ಯದಲ್ಲಿ ಅಳವಡಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾತ್ಮಕ ಅಧ್ಯಯನ ನಡೆಸಬೇಕು ಎಂದು ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಹೇಳಿದರು.Jaina Gummeguttu Bhagawan

ಗುಮ್ಮೆಗುತ್ತು ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಭಾನುವಾರ ನಡೆದ ಜಿನಬಿಂಬ ಪುನಃರ್ ಪ್ರತಿಷ್ಠಾಪನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಭಟ್ಟಾರಕ ಸ್ವಾಮೀಜಿಯವರು ದೇಶ-ವಿದೇಶಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಜೈನಪೀಠವನ್ನು ಪ್ರಾರಂಭಿಸಿ ಸಸ್ಯಾಹಾರ ಸೇವನೆ, ಸ್ಯಾದ್ವಾದ, ಪಂಚಾಣು ವೃತಗಳು ಮೊದಲಾದ ವಿಶಿಷ್ಠ ತತ್ವ, ಸಿದ್ದಾಂತಗಳ ಬಗ್ಯೆ ಇಂದು ವಿಶೇಷ ಅಧ್ಯಯನ ನಡೆಸುತ್ತಿದ್ದಾರೆ. ಭಕ್ತಿ ಇಲ್ಲದೆ ಭವ ಬಂಧನದಿಂದ ಮುಕ್ತಿ ಸಿಗಲಾರದು. ಶ್ರದ್ಧಾ-ಭಕ್ತಿಯಿಂದ, ಪಂಚೇAದ್ರಿಯಗಳ ನಿಯಂತ್ರಣದೊಂದಿಗೆ ಪಂಚಾಣುವೃತಗಳನ್ನು ಮನ, ವಚನ, ಕಾಯದಿಂದ ತ್ರಿಕರಣಪೂರ್ವಕ ಪಾಲನೆ ಮಾಡಿದಾಗ ಸಕಲ ಪಾಪಕರ್ಮಗಳ ಕ್ಷಯವಾಗಿ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದರು.

ತುಳುನಾಡಿನಲ್ಲಿ ಜೈನರಗುತ್ತು-ಬೀಡುಗಳು ಮತ್ತು ಅರಮನೆಗಳ ಮೂಲಕ ಜೈನರ ಆಡಳಿತ ವ್ಯವಸ್ಥೆ ಹಾಗೂ ಉಳ್ಳಾಲ ರಾಣಿಅಬ್ಬಕ್ಕ ಹಾಗೂ ಗೆರುಸೊಪ್ಪೆಯ ರಾಣಿ ಚೆನ್ನಭೈರಾದೇವಿಯ ದೇಶಪ್ರೇಮ ಹಾಗೂ ಆಡಳಿತ ವ್ಯವಸ್ಥೆಯನ್ನು ಅವರು ಶ್ಲಾಘಿಸಿ ದಕ್ಷಿಣ ಕನ್ನಡ ಜಿಲ್ಲೆಯ ಯುವಕರು ಜಿಲ್ಲೆಯಲ್ಲಿರುವ ಜಿನ ಮಂದಿರಗಳ ನಕ್ಷೆ ಹಾಗೂ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಮಾಹಿತಿ ಪ್ರಕಟಿಸಬೇಕು ಎಂದು ಭಟ್ಟಾರಕರು ಸಲಹಿ ಕಾರ್ಕಳ ತಾಲ್ಲೂಕಿನ ಬಜಗೊಳಿ ಬಳಿ ಮುಡಾರು ಗ್ರಾಮದಲ್ಲಿ ೨೦೨೨ರ ಫೆಬ್ರವರಿ ೧೭ರಿಂದ ೨೧ರ ವರೆಗೆ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕನಡೆಯಲಿದೆ ಎಂದು ಸ್ವಾಮೀಜಿ ಪ್ರಕಟಿಸಿ ಎಲ್ಲರನ್ನೂ ಆಮಂತ್ರಿಸಿದರು.

ಮಂಗಲ ಪ್ರವಚನ ನೀಡಿದ ಪ್ರಸಂಗಸಾಗರ ಮುನಿ ಮಹಾರಾಜರು ಎಲ್ಲರೂ ಸದಾ ನಗು ಮೊಗದಿಂದ ಸಾಹಸ, ಉತ್ಸಾಹ ಮತ್ತು ಧೈರ್ಯದಿಂದ ದುರ್ಲಭವಾದ ಮನುಷ್ಯ ಜನ್ಮದಲ್ಲಿ ಆತ್ಮಕಲ್ಯಾಣದೊಂದಿಗೆ ಸಮಾಜ ಸೇವಾಕಾರ್ಯಗಳನ್ನು ಮಾಡಬೇಕುಎಂದು ಹೇಳಿದರು.

ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ನಿತ್ಯವೂ ಬಸದಿಗೆ ಹೋಗಿ ದೇವರದರ್ಶನ, ಪೂಜೆ, ಸ್ವಾಧ್ಯಾಯದೊಂದಿಗೆಆತ್ಮಕಲ್ಯಾಣ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಭಾರತೀಯ ಜೈನ್ ಮಿಲನ್‌ನ ರಾಷ್ಟಾçಧ್ಯಕ್ಷ ಧರ್ಮಸ್ಥಳದ ಡಿ.ಸುರೇಂದ್ರಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮವನ್ನು ನಾವು ಕಾಪಾಡಿದರೆ, ಧರ್ಮ ಸದಾಕಾಲ ನಮ್ಮ ರಕ್ಷಣೆ ಮಾಡುತ್ತದೆ.ಜೈನ್ ಮಿಲನ್ ಮೂಲಕ ಭಜನಾ ಸ್ಪರ್ಧೆ ಆಯೋಜಿಸಿ ಮಕ್ಕಳಲ್ಲಿ ಧರ್ಮಜಾಗೃತಿ ಮತ್ತು ಭಜನಾ ಸಂಸ್ಕೃತಿಯನ್ನು ಮೂಡಿಸಲಾಗಿದೆ ಎಂದರು.

ಮೂಡಬಿದ್ರೆಜೈನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಮಾತನಾಡಿ ಬಸದಿಗಳ ಮೂಲಕ ಆತ್ಮಕಲ್ಯಾಣದೊಂದಿಗೆ, ಸಮಾಜದ ಸಂಘಟನೆ ಹಾಗೂ ಧರ್ಮ ಪ್ರಭಾವನೆಯಾಗುತ್ತದೆ ಎಂದರು.

ಮಂಗಳೂರಿನ ಡಾ| ಸಿ.ಕೆ ಬಳ್ಳಾಲ್ ಮತ್ತು ಬಾರಾಡಿ ಬೀಡುಯುವರಾಜ ಬಳ್ಳಾಲ್ ಉಪಸ್ಥಿತರಿದ್ದು ಸಮಿತಿಯ ಅಧ್ಯಕ್ಷ ಎನ್.ಪ್ರೇಮ್‌ಕುಮಾರ್ ಹೊಸ್ಮಾರು ಮತ್ತು ದಾನಿಗಳನ್ನು ಗೌರವಿಸಲಾಯಿತು. ಎನ್. ವಿಜಯಕುಮಾರ್ ಸ್ವಾಗತಿಸಿದರು. ದಿಶಾ ಬಳ್ಳಾಲ್ ಧನ್ಯವಾದವಿತ್ತರು.

By suddi9

Leave a Reply

Your email address will not be published. Required fields are marked *