ಮುಂಬಯಿ : ಬದುಕಿನಲ್ಲಿ ಸಿಗುವ ಅವಕಾಶಗಳು ಹಾಗೂ ಸೌಲಭ್ಯಗಳ ಸದುಪಯೋಗ ಪಡೆದು ಪ್ರತಿಯೊಬ್ಬರೂ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವಾ ಮನೋಭಾವದಿಂದ ಸದಾ ಸ್ಪೂರ್ತಿಯಿಂದ ತಮ್ಮನ್ನು ತಾವು ತೊಡಗಿಸಿ ಕೊಳ್ಳಬೇಕು, ಅಡಗಿಸಿ ಕೊಳ್ಳಬಾರದು ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರಕುಮಾರ್ ಧರ್ಮಸ್ಥಳ ಹೇಳಿದರು.Kanasikna Mane @ Ujire 2

ಹರ್ಷೇಂದ್ರಕುಮಾರ್ ಅವರು ಕಳೆದ ಭಾನುವಾರ ಉಜಿರೆಯಲ್ಲಿ ಲಕ್ಷ್ಮೀ ಇಂಡಸ್ಟೀಸ್‌ ಮಾಲಕ ಕೆ. ಮೋಹನ್‌ಕುಮಾರ್ ಮಾಲಕತ್ವದ `ಕನಸಿನ ಮನೆ’ ಉದ್ಘಾಟಿಸಿ ಮಾತನಾಡಿ ಶಿಸ್ತು, ಸಮಯಪಾಲನೆ, ಬದ್ಧತೆ ಮತ್ತು ಶ್ರಮ ಸಂಸ್ಕೃತಿಯಿಂದ ಸಮಾಜದಲ್ಲಿಉತ್ತಮಗೌರವ ಮತ್ತು ಮಾನ್ಯತೆ ಸಿಗುತ್ತದೆ. ಕನಸಿನ ಮನೆಯರೂವಾರಿ ಕೆ.ಮೋಹನ್‌ಕುಮಾರ್‌ಅವರ ಸೃಜನಾತ್ಮಕಚಿಂತನೆ ಮತ್ತುಕರ್ತೃತ್ವ ಶಕ್ತಿ ಶ್ಲಾಘಿಸಿ, ಎಂಜಿನಿಯರ್‌ಗಳ ಸಹಯೋಗದೊಂದಿಗೆ ಸಂಶೋಧನಾತ್ಮಕಅಧ್ಯಯನ ನಡೆಸಿ ಹೊಸ ವಿನ್ಯಾಸಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.Kanasikna Mane @ Ujire 1

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಶುಭಾಶಂಸನೆಗೈದು, ಉಜಿರೆ ಬಳಿ ನಿನ್ನಿಕಲ್ಲು ಪ್ರದೇಶದಲ್ಲಿ ೧೦೮ ಎಕ್ರೆ ಜಾಗದಲ್ಲಿ ಕೈಗಾರಿಕಾ ಪ್ರದೇಶ ರೂಪಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತನ್ಮೂಲಕ ಉದ್ಯೋಗಾವಕಾಶ ಹೆಚ್ಚಾಗಿ, ಸುಂದರ ಉಜಿರೆಯನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ, ಗುಜರಾತ್‌ನ ಉದ್ಯಮಿ, ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ (ಗುರುವಾಯನಕೆರೆ) ಬರೋಡ, ಮೋಹನ್ ಶೆಟ್ಟಿಗಾರ್, ಲೀಲಾವತಿ ಮತ್ತು ಮಕ್ಕಳು ಹಾಗೂ ರೇಶ್ಮಾ ಮೋಹನ್‌ಕುಮಾರ್ ಉಪಸ್ಥಿತರಿದ್ದು, ಮೋಹನ್‌ಕುಮಾರ್ ಸ್ವಾಗತಿಸಿದರು. ರಾಜೇಶ್ ಪೈ ಧನ್ಯವಾದವಿತ್ತರು.

By Suddi9

Leave a Reply

Your email address will not be published. Required fields are marked *