ಮುಂಬಯಿ : ನಾಡಿನ ಹೆಸರಾಂತ ಕೊಂಕಣಿ ಕಾರ್ಯಕರ್ತ ವಿಶ್ವ ಕೊಂಕಣಿ ಸರ್ದಾರ್ ಎಂದು ಜನಪ್ರಿಯ ಬಸ್ತಿ ವಾಮನ್ ಮಾಧವ್ ಶೆಣೈ (೮೭.) ಜ.02ರಂದು ಭಾನುವಾರ  ವಯೋಸಹಜ ಅನಾರೋಗ್ಯದಿಂದ ತನ್ನ ಸ್ವಗೃಹದಲ್ಲಿ ನಿಧನರಾದರು. ಶಕ್ತಿನಗರದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಆಗಿದ್ದ ಬಸ್ತಿ ಮಾಮ್ ಪ್ರಸಿದ್ಧ ವಾಮನ್ ಶೆಣೈ ಅವರು ಕಳೆದೆರಡು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.Basti Vaman Shenoey (A)

೧೯೮೦ರಿಂದ ಶೆಣೈ ಕೊಂಕಣಿ ಭಾಷಾ ಮಂಡಲದಲ್ಲಿ ತೊಡಗಿಸಿಕೊಂಡಿದ್ದರು. ಕೊಂಕಣಿ ಅಕಾಡೆಮಿ ಸ್ಥಾಪನೆಗೆ ಆಗ್ರಹಿಸಿ ಜನರನ್ನು ಸಂಘಟಿಸಲು ಕೊಂಕಣಿ ಜಾಥಾ ಚಳವಳಿಯ ಸಂಘಟನಾ ಕಾರ್ಯದರ್ಶಿ ಆಗಿ ಅವರನ್ನು ನೇಮಿಸಲಾಯಿತು. ೧೯೯೩ರಲ್ಲಿ ಕರ್ನಾಟಕ ಕೊಂಕಣಿ ಭಾಷಾ ಮಂಡಲ ಇದರ ಅಧ್ಯಕ್ಷರಾದರು. ೧೯೯೪-೯೫ ರಲ್ಲಿ ಅವರ ಪ್ರಯತ್ನದಿಂದಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದಿತು. ೧೯೯೫ರಲ್ಲಿ ಮಂಗಳೂರಿನಲ್ಲಿ ಪ್ರಥಮ ವಿಶ್ವ ಕೊಂಕಣಿ ಸಮಾವೇಶವನ್ನು ಆಯೋಜಿಸಿದರು. ೭ ದಿನಗಳ ಸಮಾವೇಶ, ವಿಚಾರ ಸಂಕೀರಣ, ಸಾಂಸ್ಕೃತಿಕ ಪ್ರಸ್ತುತಿಗಳು ಮತ್ತು ಪ್ರದರ್ಶನಗಳನ್ನು ಹಮ್ಮಿಕೊಂಡಿದ್ದು ಅದು ದೊಡ್ಡ ಯಶಸ್ಸನ್ನು ಕಂಡಿತು. ಅವರಿಗೆ `ವಿಶ್ವ ಕೊಂಕಣಿ ಸರ್ದಾರ್’ (ಕೊಂಕಣಿಯ ವಿಶ್ವ ನಾಯಕ) ಎಂಬ ಬಿರುದು ನೀಡಿ ಗೌರವಿಸಲಾಗಿತ್ತು. ಸಮ್ಮೇಳನವು ಕೊಂಕಣಿ ಭಾಷೆ, ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಮಂಗಳೂರಿನಲ್ಲಿ ವಿಶ್ವ ಕೊಂಕಣಿ ಕೇಂದ್ರವನ್ನು ಸ್ಥಾಪಿಸಲು ಆದೇಶ ನೀಡಿತು.Basti Vaman Shenoy (2)

೧೯೯೬ರಲ್ಲಿ, ಉತ್ತರ ಅಮೆರಿಕಾದ ವು ಯುಎಸ್‌ಎಯ ನ್ಯೂಜೆರ್ಸಿಯಲ್ಲಿ ಮೊದಲ ಕೊಂಕಣಿ ಸಮಾವೇಶ ನಡೆಸಿದರು. ೧೯೯೭ ರಲ್ಲಿ ಶೆಣೈ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದರು ಮತ್ತು ೨೦೦೧ ರವರೆಗೆ ಎರಡು ಅವಧಿಗೆ ಸೇವೆ ಸಲ್ಲಿಸಿದರು. ಅವರು ಕರ್ನಾಟಕದ ಶಾಲೆಗಳಲ್ಲಿ ಕೊಂಕಣಿಯನ್ನು ಐಚ್ಛಿಕ ಮೂರನೇ ಭಾಷೆಯಾಗಿ ಪರಿಚಯಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದರು.

೨೦೦೨ರಲ್ಲಿ ಮಂಗಳೂರಿನಲ್ಲಿ ಅಖಿಲ ಭಾರತ ಕೊಂಕಣಿ ಪರಿಷತ್ತ್ನ ೨೦ನೇ ಅಧಿವೇಶನ ಆಯೋಜಿಸಿದ್ದರು. ೨೦೦೪ರಲ್ಲಿ ಅವರು ಅಖಿಲ ಭಾರತ ಕೊಂಕಣಿ ಪರಿಷತ್ತ್ತ್ನ ಅಧ್ಯಕ್ಷರಾದರು. ೨೦೦೮ರಲ್ಲಿ, ಕೆಎಲ್‌ಸಿಎಫ್ ಬ್ಯಾನರ್ ಅಡಿಯಲ್ಲಿ, ಶೆಣೈ ಅವರು ಕೊಂಕಣಿ ಬರಹಗಾರರು ಮತ್ತು ವಿದ್ವಾಂಸರ ನಡುವೆ ದೇಶದ ಇತರ ಭಾಷೆಗಳಲ್ಲಿ ತಮ್ಮ ಸಹವರ್ತಿಗಳೊಂದಿಗೆ ಸಂವಹನದ ಅವಕಾಶವನ್ನು ಸೃಷ್ಟಿಸುವ ಉದ್ದೇಶದಿಂದ ವಿಶ್ವ ಕೊಂಕಣಿ ಅಭಿಯಾನ ಪ್ರಾರಂಭಿಸಿದರು. ಪಂಜಾಬಿ, ಹಿಂದಿ, ಪರ್ಷಿಯನ್, ಉರ್ದು, ಕನ್ನಡ ಮತ್ತು ಕೊಂಕಣಿ ಭಾಷೆಗಳ ವಿದ್ವಾಂಸರು `ಭಾಷೆಗಳ ಮೂಲಕ ಏಕೀಕರಣ’ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

೨೦೦೯ ರಲ್ಲಿ ಮಂಗಳೂರಿನ ಶಕ್ತಿನಗರದಲ್ಲಿ ವಿಶ್ವ ಕೊಂಕಣಿ ಕೇಂದ್ರವನ್ನು ಉದ್ಘಾಟಿಸಲಾಯಿತು. ಇದು ಗ್ರಂಥಾಲಯ, ಮ್ಯೂಸಿಯಂ ಮತ್ತು ಬೋರ್ಡ್ ರೂಮ್, ಸೆಮಿನಾರ್ ಹಾಲ್ ಮತ್ತು ಆಡಿಟೋರಿಯಂ ಅಂತಹ ಸಮಾವೇಶ ಸೌಲಭ್ಯಗಳನ್ನು ಒಳಗೊಂಡಿದೆ. ೨೦೧೦ ರಲ್ಲಿ ವಿಶ್ವ ಕೊಂಕಣಿ ಭಾಷಾ ಸಂಸ್ಥಾನ  ಮತ್ತು ವರ್ಲ್ಡ್  ಕೊಂಕಣಿ ಹಾಲ್ ಆಫ್ ಫೇಮ್ ಅನ್ನು ವಿಶ್ವ ಕೊಂಕಣಿ ಕೇಂದ್ರದಲ್ಲಿ ಉದ್ಘಾಟಿಸಲಾಯಿತು.

ಶೆಣೈ ಅವರ ಪಾರ್ಥಿವ ಶರೀರವನ್ನು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜನವರಿ ೩ ರಂದು ಬೆಳಿಗ್ಗೆ ೯ ರಿಂದ ೧೦ ರವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಮಧ್ಯಾಹ್ನ ೧೨ ಗಂಟೆಗೆ ಅವರ ಜನ್ಮಸ್ಥಳ ಬಂಟ್ವಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

By suddi9

Leave a Reply

Your email address will not be published. Required fields are marked *