ಕೈಕಂಬ: ಭಾರತ ಕ್ರಿಕೆಟ್ ತಂಡದ ಆಟಗಾರ ಮನೀಶ್ ಪಾಂಡೆ ಹಾಗೂ ಅವರ ಪತ್ನಿ ಆಶ್ರಿತಾ ಶೆಟ್ಟಿ ಅವರು ಡಿ. ೨೭ರಂದು ಗುರುಪುರ ಬಡಕರೆಯಲ್ಲಿರುವ ಆಶ್ರಿತಾರ ಗುತ್ತಿನ ಮನೆ ಹಾಗೂ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನ, ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೈವ, ದೇವರ ದರ್ಶನ ಪಡೆದರು. ದೇವಸ್ಥಾನದ ಅರ್ಚಕ ಜಿ ಕೆ ಕೃಷ್ಣ ಭಟ್ ಅವರು ಪಾಂಡೆ ದಂಪತಿಗೆ ದೇವರ ಪ್ರಸಾದ ವಿತರಿಸಿದರು.gur-dec-27-koladabadi temple-2

ಪಾಂಡೆ ದಂಪತಿಯೊಂದಿಗೆ ಆಶ್ರಿತಾ ಶೆಟ್ಟಿಯವರ ಮಾವ, ಗುರುಪುರ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯರಾಮ ಶೆಟ್ಟಿ ಬಡಕರೆಗುತ್ತು, ಅವರ ಪತ್ನಿ ಚೇತನಾ ಜೆ ಶೆಟ್ಟಿ ಕಡಂದಲೆ, ಬೆಳ್ಳಿಬೆಟ್ಟುಗುತ್ತು ಸತೀಶ್ ಕಾವ, ಗುರುಪುರ ಪಂಚಾಯತ್ ಸದಸ್ಯ ಸುನಿಲ್ ಜಲ್ಲಿಗುಡ್ಡೆ ಹಾಗೂ ಪಾಂಡೆ ಅಭಿಮಾನಿ ಮಕ್ಕಳು ಇದ್ದರು.gur-dec-27-fans-1

ಭಾರತ ಕ್ರಿಕೆಟ್ ತಂಡದ ಆಟಗಾರ ಮನೀಶ್ ಪಾಂಡೆ ಅವರು ಡಿ. ೨೭ರಂದು ಗುರುಪುರ ಕೊಳದಬದಿ ಶೀ ಸದಾಶಿವ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಸಂದರ್ಭದಲ್ಲಿ ಗುರುಪುರದ ಕ್ರಿಕೆಟ್ ಅಭಿಮಾನಿ ಮಕ್ಕಳು ಪಾಂಡೆಯವರೊಂದಿಗೆ ಪೋಟೊ ಕ್ಲಿಕ್ಕಿಸಿಕೊಂಡರು.gur-dec-27-koladabadi temple-3

ಹರಿಣಗಳ ನಾಡಿನಲ್ಲಿ ಭಾರತ ಸರಣಿ ಗೆಲ್ಲಲಿದೆ : ಮನೀಶ್ ಪಾಂಡೆ

ರವಿಶಾಸ್ತ್ರಿ ಅವರು ಭಾರತ ಕ್ರಿಕೆಟ್ ತಂಡದ ಕೋಚ್ ಆಗಿದ್ದಾಗ ಭಾರತ ಕೆಲವು ದ್ವಿಪಕ್ಷೀಯ ಸರಣಿ ಗೆದ್ದಿದೆ. ಅವರ ಅವಧಿಯಲ್ಲಿ ಭಾರತ ತಂಡ ಮಹತ್ವದ ಸಾಧನೆಗೈದಿದೆ. ಪ್ರಸಕ್ತ ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ಟ್ಯಾಟರ್ಜಿ ಇರುತ್ತದೆ. ಈಗ ದಕ್ಷಿಣ ಆಫ್ರಿಕಾದಲ್ಲಿರುವ ಭಾರತ ತಂಡ ದ್ರಾವಿಡ್ ಮುಂದಾಳತ್ವದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿ ಗೆಲ್ಲುವ ವಿಶ್ವಾಸವಿದೆ ಎಂದು ಮನೀಶ್ ಪಾಂಡೆ ಹೇಳಿದರು.gur-dec-27-pandey&dhananjaya

ಡಿ. ೨೭ರಂದು ಗುರುಪುರ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮಕ್ಕೆ ಸಂದರ್ಶನ ನೀಡಿದರು. ಹರಿಣಗಳ ನಾಡಿನಲ್ಲಿ(ದ. ಆ) ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಕೆ ಎಲ್ ರಾಹುಲ್ ಉತ್ತಮ ಆರಂಭ ಪಡೆದುಕೊಂಡಿದ್ದು, ಅವರು ಭಾರತ ತಂಡದ ಆಧಾರ ಸ್ತಂಬ. ಅವರೊಬ್ಬ ಆಕರ್ಷಕ ಬ್ಯಾಟ್ಸ್ಮ್ಯಾನ್. ಈ ಬಾರಿ ಖಂಡಿತವಾಗಿಯೂ ಭಾರತವು ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲುವಿನ ಬರ ನೀಗಿಸಲಿದೆ ಎಂದು ಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸಕ್ತ ಭಾರತ ಕ್ರಿಕೆಟ್ ತಂಡದಲ್ಲಿ ತಮಗೆ ಸ್ಥಾನ ಲಭಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಂಡೆ, ಕೋಚ್ ದ್ರಾವಿಡ್ ಮುಂದಾಳತ್ವದ ಭಾರತ ಕ್ರಿಕೆಟ್ ತಂಡ ಶ್ರೀಲಂಕಾದಲ್ಲಿ ಏಕದಿನ ಸರಣಿ ಗೆದ್ದಾಗ ಮತ್ತು ಟಿ-೨೦ ಡ್ರಾ ಮಾಡಿಕೊಂಡಾಗ ನಾನು ತಂಡದ ಸದಸ್ಯನಾಗಿದ್ದೆ. ಅಲ್ಲಿ ನಮ್ಮ ಸಾಧನೆ ಉತ್ತಮವಾಗಿತ್ತು. ಮುಂದೆ ನಡೆಯಲಿರುವ ರಣಜಿಯಲ್ಲಿ ಕಠಿಣ ಪರಿಶ್ರಮಗೈದು, ಮತ್ತೊಮ್ಮೆ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆ ಗುರಿ ಹಾಗೂ ವಿಶ್ವಾಶ ಇಟ್ಟುಕೊಂಡಿದ್ದೇನೆ ಎಂದರು.

”ಐಪಿಎಲ್ ಮತ್ತು ರಣಜಿ ಕ್ರಿಕೆಟ್ ಮೂಲಕವೇ ಮತ್ತೊಂದು ಬಾರಿ ಭಾರತ ತಂಡದ ಕದ ತಟ್ಟಲಿದ್ದೇನೆ. ಭಾರತಕ್ಕಾಗಿ ಆಡುವುದು ಶ್ರೇಷ್ಠ. ಅವಕಾಶಕ್ಕಾಗಿ ಕಾಯುತ್ತೇನೆ” ಎಂದು ಮತ್ತೊಂದು ಪ್ರಶ್ನೆಗೆ ಪಾಂಡೆ ಉತ್ತರಿಸಿದರು.

By Suddi9

Leave a Reply

Your email address will not be published. Required fields are marked *