ಮಂಗಾಜೆ: ಫೆ.೧೫ರಿಂದ ಫೆ೨೦ ರವರೆಗೆ ಶ್ರೀ ಕೋರ್ದಬ್ಬು ತನ್ನಿಮಾನಿಗ ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಹಾಗೂ ವರ್ಷಾವಧಿ ನೇಮೋತ್ಸವ ಇದರ ಆಮಂತ್ರಣ ಪತ್ರಿಕೆ ಡಿ.೧೯ ರಂದು ಭಾನುವಾರ ಮಂಗಾಜೆ ಶ್ರೀಕೋರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಕೇಶ್ ಚೌಟ ಬಡಕಬೈಲು ಆಮಂತ್ರಣಪತ್ರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಗುತ್ತಿನವರು. ಶ್ರೀ ಕೋರ್ದಬ್ಬು ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಬಡಕಬೈಲು, ಜೀರ್ಣೋದ್ದಾರ ಸಮಿತಿ ಪ್ರ. ಕಾರ್ಯದರ್ಶಿ ದೇವದಾಸ್ ಆಯೆರೆಮಾರ್, ಪ್ರಧಾನ ಕಾರ್ಯದರ್ಶಿ ಜೀರ್ಣೋದ್ಧಾರ ಸಮಿತಿ ಸರ್ವಸದಸ್ಯರು ಶ್ರೀ ಕೋರ್ದಬ್ಬು ಸೇವಾ ಸಮಿತಿ ಕಾರ್ಯದರ್ಶಿ ಶೇಖರ ಬಂಗೇರಾ ಗಾಣೆಮಾರ್, ಶ್ರೀಕೋರ್ದಬ್ಬು ಸೇವಾ ಸಮಿತಿಯ ಸರ್ವ ಸದಸ್ಯರು, ಗುರಿಕಾರರು ಹಾಗೂ ಅರ್ಚಕ ವೃಂದದವರು ಉಪಸ್ಥಿತರಿದ್ದರು.
ಮಂಗಾಜೆ: ಫೆ.೧೫ರಿಂದ ಫೆ೨೦ ರವರೆಗೆ ಶ್ರೀ ಕೋರ್ದಬ್ಬು ತನ್ನಿಮಾನಿಗ ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಹಾಗೂ ವರ್ಷಾವಧಿ ನೇಮೋತ್ಸವ
ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಂಗಾಜೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಫೆ.೧೭ರಂದು ಗುರುವಾರ ಬೆಳಗ್ಗೆ ೮.೪೫ ರಿಂದ ೯ ಗಂಟೆಯವರೆಗೆ ನಡೆಯುವ ಮೀನ ಲಗ್ನ ಸುಮುಹೂರ್ತದಲ್ಲಿ ಪೊಳಲಿ ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ತಂತ್ರಿ ಇವರ ನೇತೃತ್ವದಲ್ಲಿ ಶ್ರೀ ಕೋರ್ದಬ್ಬು ತನ್ನಿಮಾನಿಗ ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕವು ನೆರವೇರಲಿದೆ.
ಕಾರ್ಯಕ್ರಮಗಳು:
ಫೆ. ೧೫ರಂದು ಮಂಗಳವಾರ ಬೆಳಗ್ಗೆ ಗಂಟೆ ೯ರಿಂದ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮಹೂರ್ತ, ಸಂಜೆ ಗಂಟೆ ೪ಕ್ಕೆ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ. ಸಾಯಂಕಾಲ ಗಂಟೆ ೬ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಸಾಯಂಕಾಲ ಗಂಟೆ ಏಳಕ್ಕೆ ನಮ್ಮ ಕಲಾವಿದೆರ್ ಬೆದ್ರ ಅರ್ಪಿಸುವ ತುಳು ಹಾಸ್ಯಮಯ ನಾಟಕ “ಪಾಂಡುನ ಅಲಕ್ಕ ಪೋಂಡು”
ಫೆ.೧೬ರಂದು ಬುಧವಾರ ಬೆಳಿಗ್ಗೆ ೮:೦೦ರಿಂದ ಪುಣ್ಯಾಹ, ಬಿಂಬ ಶುದ್ಧಿ, ಕಲಶಾಭಿಷೇಕ, ಗಣಹೋಮ, ವಾಸ್ತು ಪೂಜೆ, ರಕ್ಷ್ನೋಘ್ನ ಹೋಮ, ಸಾಯಂಕಾಲ ೫ರಿಂದ ಸಪರಿವಾರ ಕೋರಬ್ಬು ದೈವಗಳ ಅಧಿವಾಸ, ಕಲಶಾಭಿವಾಸ, ಅಧಿವಾಸ ಹೋಮ ಸಾಯಂಕಾಲ ೬ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಡ್ಯಾನ್ಸ್ ಆಕಾಡೆಮಿ ಎಡಪದವು ಮಂಗಳೂರು ಇವರಿಂದ ನೃತ್ಯ ಗಾನವೈಭವ “ಡ್ಯಾನ್ಸಿಂಗ್ ಸ್ಟಾರ್”
ರಾತ್ರಿ ೮:೦೦ ಗಂಟೆಗೆ ರಾಜಶ್ರೀ ಮೋಕದ ಕಲಾವಿದೆರ್ ಪೊಳಲಿ ಅರ್ಪಿಸುವ ಅರುಣ್ ಚಂದ್ರ ಬಿ.ಸಿ.ರೋಡ್ ರಚಿಸಿ ನಟಿಸಿ ನಿರ್ದೇಶಿಸಿರುವ “ಬಂಗಾರ್ ಬಾಬು” ಹಾಸ್ಯಮಯ ನಾಟಕ
ಫೆ.೧೭ ರಂದು ಗುರುವಾರ ಬೆಳಿಗ್ಗೆ ಪುಣ್ಯಾಹ ಗಣಹೋಮ-೮:೪೫ರ ಮೀನ ಲಗ್ನ ಸುಮೂರ್ಹೂದಲ್ಲಿ ಸಪರಿವಾರ ಕೋರಬ್ಬು ದೈವಗಳ ಪುನರ್ ಪ್ರತಿಷ್ಠೆ, ಪ್ರಸನ್ನ ಪೂಜೆ, ಕಲಶಾಭಿಷೇಕ, ನಂತರ ಶ್ರೀ ದೈವಗಳ ದರ್ಶನ ಸೇವೆ, ಪ್ರಸಾದ ವಿತರಣೆ ಬಳಿಕ ಭಂಡಾರ ಏರುವುದು. ಬೆಳಿಗ್ಗೆ ೮ರಿಂದ ೧೨ ರವರೆಗೆ ವಿವಿಧ ಭಜನಾ ತಂಡಗಳಿಂದ “ಹರಿನಾಮ ಸಂಕೀರ್ತನೆ”, ಮಧ್ಯಾಹ್ನ ೧೨.೩೦ಕ್ಕೆ ಪಲ್ಲಪೂಜೆ, ಮಧ್ಯಾಹ್ನ ೧ರಿಂದ ಅನ್ನಸಂತರ್ಪಣೆ, ಮಧ್ಯಾಹ್ನ ೨ರಿಂದ ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಶ್ರೀ ಜಗದೀಶ ಆಚಾರ್ಯ ಪ್ರತ್ತೂರು ಮತ್ತು ಬಳಗದವರಿಂದ “ಭಕ್ತಿ ರಸಸಂಜೆ” ಸಂಜೆ ಗಂಟೆ ೫:೦೦ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ರಾತ್ರಿ ಘಂಟೆ ೦೯:೦೦ರಿಂದ ಶ್ರೀ ಕೋರಬ್ಬು ತನ್ನಿಮಾನಿಗ ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ “ಗಗ್ಗರ ಸೇವೆ” ಬೆಳಿಗ್ಗೆ-ಭಂಡಾರ ಇಳಿಯುವುದು.
ಫೆ.೧೯ರಂದು ಶುಕ್ರವಾರ ಸಂಜೆ ಘಂಟೆ ೬ರಿಂದ ರಾತ್ರಿ ೧೧ರ ವರೆಗೆ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟ-ಶುಕ್ರನ೦ದನೆ
ಫೆ.೧೯ರಂದು ಶನಿವಾರ ರಾತ್ರಿ ಗಂಟೆ ೮:೩೦ಕ್ಕೆ ಭಂಡಾರ ಏರುವುದು ರಾತ್ರಿ ಗಂಟೆ ೧೦:೦೦ಕ್ಕೆ ಶ್ರೀ ಕೋರ್ದಬ್ಬು ತನ್ನಿಮಾನಿಗ ದೈವಗಳ ವಾರ್ಷಿಕ ನೇಮೋತ್ಸವ
ಫೆ.೨೦ರಂದು ಭಾನುವಾರ ರಾತ್ರಿ ಗಂಟೆ ೮:೦೦ಕ್ಕೆ ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ನೇಮೋತ್ಸವ ಬಳಿಕ ಭಂಡಾರ ಇಳಿಯುವುದು.

