ಕೈಕಂಬ : ಗುರುಪುರ ಮೂಳೂರು ಗ್ರಾಮದ ಕಿನ್ನಿಮಜಲು ಎಂಬಲ್ಲಿ ಸುಮಾರು ೧೦೦ ವರ್ಷಗಳ ಹಿಂದಿನಿಂದ ಆರಾಧಿಸಿಕೊಂಡು ಬಂದಿರುವ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಡಿ. ೧೨ರಂದು ಭಾನುವಾರ ಕಲ್ಲುರ್ಟಿ-ಪಂಜುರ್ಲಿ-ಗುಳಿಗ ದೈವದ ಪ್ರತಿಷ್ಠಾ ಕಲಶಾಭಿಷೇಕ ಜರುಗಲಿದೆ.

ಡಿ.೧೧ರಂದು ಶನಿವಾರ ಸ್ವಸ್ತಿ ಪುಣ್ಯಾಹ ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ರಕ್ಷ್ನೋಘ್ನ ಹೋಮ, ದಿಕ್ಪಾಲಕ ಬಲಿ ದೈವ ಮಂಚಾಧಿವಾಸ ನಡೆಯಲಿದೆ. ಡಿ. ೧೨ರಂದು ಬೆಳಿಗ್ಗೆ ೮ರಿಂದ ಪ್ರಾರ್ಥನೆ, ನವಕ ಪ್ರಧಾನ ಹೋಮ, ದೈವ ಪ್ರತಿಷ್ಠೆ, ಕಲಶಾಭಿಷೇಕ, ಪನಿವಾರ ಸೇವೆ, ಪ್ರಸನ್ನ ಪೂಜೆ, ೧೦ಕ್ಕೆ ದೈವಗಳ ದರ್ಶನ ಸೇವೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜೀವ ಕುಲಾಲ್ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *