ಕೈಕಂಬ: ಕಂದಾವರ ಗ್ರಾಮ ಪಂಚಾಯತ್‌ನಲ್ಲಿ ಮಂಗಳವಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಮತ್ತು ಅಧ್ಯಕ್ಷರ ಸಹಿತ ಬಿಜೆಪಿ ಬೆಂಬಲಿತ ಸದಸ್ಯರ ಮಧ್ಯೆ ಮಾತಿನ ಚಕಮಕಿ, ಹೊಯಿಕೈ ನಡೆದಿದ್ದು, ಹಲ್ಲೆಗೊಳಗಾದ ಪಿಡಿಒ ಯಶವಂತ ಬೆಳ್ಚಡ ಮತ್ತು ಪಂಚಾಯತ್ ಅಧ್ಯಕ್ಷ ಉಮೇಶ್ ಮೂಲ್ಯರು ಚಿಕಿತ್ಸೆಗಾಗಿ ಸ್ಥಳೀಯ ಪ್ರತ್ಯೇಕ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.
ಉಮೇಶ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರಾದ ಸುದರ್ಶನ್, ಅನಿಲ್, ಶಾಲಿನಿ ಮತ್ತಿತರರು ಪಿಡಿಒ ಕಚೇರಿಯೊಳಗೆ ಪ್ರವೇಶಿಸಿ ಪಂಚಾಯತ್ ಸಭೆಗಳಲ್ಲಿ ತೆಗೆದುಕೊಳ್ಳಲಾಗಿರುವ ನಿರ್ಣಯ ಪ್ರತಿಗಳು, ಎನ್‌ಒಸಿ ಹಾಗೂ ೯/೧೧ ದಾಖಲೆಗಳ ಪ್ರತಿ ಸಹಿತ ಸಾರ್ವಜನಿಕ ಕೆಲಸಗಳಿಗೆ ಸಂಬ0
ಧಿಸಿದ ಇತರ ದಾಖಲೆ ಪ್ರತಿ ಕೇಳಿದರು. ಪ್ರತಿ ನೀಡಲು ನಿರಾಕರಿಸಿದಾಗ ಸದಸ್ಯರು ಮತ್ತು ಪಿಡಿಒ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಳಿಕ ಪಿಡಿಒ ಅವರು ತನ್ನ ಕಚೇರಿಯಿಂದ ಹೊರ ನಡೆಯಲು ಮುಂದಾದಾಗ ಸದಸ್ಯರು ಅಡ್ಡಕಟ್ಟಿ ಪ್ರತಿಗಾಗಿ ತಳ್ಳಾಟ ನಡೆಸಿದರು. ಆಗ ಪರಸ್ಪರರ ಮಧ್ಯೆ ಹೊÊಕೈ ನಡೆದಿದ್ದು, ಪಿಡಿಒ ಯಶವಂತರ ಎದೆ ಹಾಗೂ ಬೆನ್ನಿಗೆ ಗಾಯವಾಗಿದ್ದರೆ, ಉಮೇಶರ ಗಲ್ಲಕ್ಕೆ ಗಾಯವಾಗಿದೆ.
ಪ್ರತಿಭಟನೆ : ಪಂಚಾಯತ್ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದ ಪಿಡಿಒ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ, ಪಂಚಾಯತ್ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಸಿದ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯರು ಹಾಗೂ ಇತರ ಬೆಂಬಲಿಗರು ಪಿಡಿಒ ಯಶವಂತ ವಿರುದ್ಧ ಧಿಕ್ಕಾರ ಕೂಗಿದರು.
ಕಂದಾವರ ಪಂಚಾಯತ್ ಕಚೇರಿಗೆ ಆಗಮಿಸಿದ ತಾಲೂಕು ಪಂಚಾಯತ್ ಇಒ ನಾಗರಾಜ್ ಘಟನೆ ಬಗ್ಗೆ ಮಾಹಿತಿ ಪಡೆದರು. ಈ ಬಗ್ಗೆ ಇನ್ನಷ್ಟು ಪರಿಶೀಲಿಸಿ ಜಿಪಂ ಸಿಇಒಗೆ ವರದಿ ನೀಡುವೆ ಎಂದಿದ್ದಾರೆ.
