ಕೈಕಂಬ: ಎಡಪದವು ಜಂಕ್ಷನ್‌ನಲ್ಲಿ ಭಾನುವಾರ ಬೆಳಿಗ್ಗೆ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಗುದ್ದಿ ಪರಾರಿಯಾಗಿದ್ದ ಓಬ್ಬ ಕಾರನ್ನು ಪತ್ತೆ ಹಚ್ಚಿರುವ ಬಜಪೆ ಪೊಲೀಸರು ಕಾರು ಚಾಲಕನನ್ನು ಬಂಧಿಸಿದ್ದಾರೆ. ವಾಮಂಜೂರು ನಿವಾಸಿ ರಿಕೊಡನಲ್ ರಾಚೆಲ್ ಬಾಬು (19) ಬಂಧಿತ ವ್ಯಕ್ತಿ. ಭಾನುವಾರ ಬೆಳಿಗ್ಗೆ 7 ಗಂಟೆಗೆ ಎಡಪದವು ಜಂಕ್ಷನ್‌ನಲ್ಲಿ ನಡೆದ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಪತ್ತೆಂಗಿ ನಿವಾಸಿ ಅರುಣ್ ಅಡ್ಯಂತಾಯ (40)ಎಂಬವರು ಗಂಭೀರ ಗಾಯಗೊಂದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು.WhatsApp Image 2021-11-30 at 3.29.35 PMಗಂಜಿಮಠದ ಖಾಸಗಿ ಸಿಸಿ ಟಿವಿ ಪುಟೇಜ್‌ಗಳಿಂದ ಕಾರಿನ ನೋಂದಣಿ ಸಂಖ್ಯೆ ದಾಖಲಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಬೈಕಂಪಾಡಿಯಿಂದ ಓಮ್ಮಿ ಕಾರನ್ನು ವಶಪಡಿಸಿಕೊಂಡಿದ್ದು ಓಮ್ಮಿ ಕಾರು ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದ ಸ್ಟೀಲ್ ಕಂಪನಿಯೊಂದಕ್ಕೆ ಸೇರಿದ್ದು ಎನ್ನಲಾಗಿದೆ.

By Suddi9

Leave a Reply

Your email address will not be published. Required fields are marked *