ಮುಂಬಯಿ : ಮಂಗಳೂರು ಗುರುಪುರ ಕೈಕಂಬ ಇಲ್ಲಿನ ಅವರ್ ಲೇಡಿ ಆಫ್ ಪೊಂಪೈ ಚರ್ಚ್ ತನ್ನ ಶತಮಾನೋತ್ಸವವನ್ನು ಕಳೆದ ಭಾನುವಾರ ಸಂಭ್ರಮೋಲ್ಲಾಸದಿಂದ ಆಚರಿಸಿತು. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂ| ಡಾ| ಪೀಟರ್ ಪೌಲ್ ಸಲ್ಡಾನ್ಹಾ ಸಹ ಧರ್ಮಗುರುಗಳನ್ನು ಒಳಗೊಂಡು ಸಂಭ್ರಮಿಕ ಕೃತಜ್ಞತಾ ಪೂಜೆಯನ್ನು ನೆರವೇರಿಸಿ ಅನುಗ್ರಹಿಸಿದರು.
ನಿವೃತ್ತ ಬಿಷಪ್ ಅತಿ ವಂ| ಡಾ| ಅಲೋಶಿಯಸ್ ಪಾವ್ಲ್ ಡಿಸೋಜ, ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ| ಡಾ| ಲಾರೆನ್ಸ್ ಮುಕ್ಕುಝಿ, ರೆ| ಫಾ| ಡಾ| ಪಿಯುಸ್ ಜೇಮ್ಸ್ ಡಿಸೋಜಾ (ಒಸಿಡಿ- ಕಾರ್ಮೆಲೈಟ್ಸ್), ರೆ| ಫಾ| ಮಾರ್ಸೆಲ್ ಸಲ್ಡಾನ್ಹಾ (ವಿಕಾರ್-ಪೆಜಾರ್ ಡೀನರಿ), ಪೊಂಪೈ ಚರ್ಚ್ನ ಪ್ರಧಾನ ಧರ್ಮಗುರು ರೆ| ಫಾ| ಆ್ಯಂಟನಿ ಲೋಬೋ ಮತ್ತು ಎಲ್ಲಾ ಅತಿಥಿü ಧರ್ಮಗುರುಗಳು ಪೂಜೆಯಲ್ಲಿ ಸಹಭಾಗಿಗಳಾದರು.
ಈ ಶುಬಾವಸರದಲ್ಲಿ ಚರ್ಚ್ ನ ಮಾಜಿ ಕೌನ್ಸಿಲ್ ಅಧ್ಯಕ್ಷರು, ಕಾರ್ಯದರ್ಶಿಗಳು ಶತಮಾನೋತ್ಸವ ಆಚರಣೆಯ ಸಂಚಾಲಕರು, ಶತಮಾನೋತ್ಸವ ಆಚರಣೆಗೆ ಕೊಡುಗೆಯನ್ನಿತ್ತ ಗಣ್ಯರು, ದಾನಿಗಳಿಗೆ ಸನ್ಮಾನಿಸಲಾಯಿತು.
ಬೆಥನಿ ಸೊಸೈಟಿ ಮಂಗಳೂರು ಇದರ ಸುಪೀರಿಯರ್ ಜನರಲ್ ಭ| ಎಂ.ರೋಸ್ಲೀನ್ (ಬಿಎಸ್), ಭ| ಸಿಸಿಲಿಯಾ ಮೆಂಡೋನ್ಸಾ (ಬಿಎಸ್), ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ| ವೈ.ಭರತ್ ಶೆಟ್ಟಿ, ಮಾಜಿ ಶಾಸಕ ಜೆ.ಆರ್. ಲೋಬೋ ಇವರಿಗೆ ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು. ಬಿಷಪ್ ಲಾರೆನ್ಸ್ ಮುಕ್ಕುಝಿ ಅವರು ಸ್ಮರಣಿಕೆ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಮುಹಮ್ಮದ್ ಶರೀಫ್ ಅರ್ಷದಿ, ಡಾ| ಎಂ ಮೋಹನ್ ಆಳ್ವ, ಮಾಜಿ ಎಂಎಲ್‌ಸಿ ಐವನ್ ಡಿಸೋಜ, ಮಾಜಿ ಶಾಸಕ ಮೊಯ್ದೀನ್ ಬಾವಾ, ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಮೂಲ್ಯ, ಗುರುಪುರ ಗ್ರಾ.ಪಂ. ಅಧ್ಯಕ್ಷ ಯಶವಂತ ಕುಮಾರ ಶೆಟ್ಟಿ, ಗಂಜಿಮಠ ಗ್ರಾ.ಪಂ. ಅಧ್ಯಕ್ಷ ನೋಣಯ್ಯ ಕೋಟ್ಯಾನ್ ಉಪಸ್ಥಿತರಿದ್ದು ಗೌರವಿಸಲಾಯಿತು. ಅಂತೆಯೇ ಚರ್ಚ್ನ ಇತಿಹಾಸ ಪುಸ್ತಕ ರಚಿತ ಫಾ| ಪಿಯಸ್ ಪಿಂಟೋ ಮತ್ತು ಡಾ| ಗಾಡ್ವಿನ್ ಲೋಬೋ, ಶತಮಾನೋತ್ಸವ ಸ್ಮರಣಿಕೆ ಸಂಪಾದಿತ ರೆ| ಫಾ| ಶ್ರೀಸೆಲ್ ಸಲ್ಡಾನ್ಹಾ ಇವರನ್ನೂ ಗೌರವಿಸಲಾಯಿತು.
ಫಾ| ಆ್ಯಂಟನಿ ಲೋಬೋ ಸ್ವಾಗತಿಸಿ ಪ್ರಸ್ತಾವನೆಗೈದರು. ರೋಮನ್ ಲೋಬೋ ಮತ್ತು ಡೆಲ್ಸಿ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಪ್ಯಾರಿಷ್ ಕೌನ್ಸಿಲ್‌ನ ಉಪಾಧ್ಯಕ್ಷ ಜೆರಾಲ್ಡ್ ಲೋಬೋ ವಂದಿಸಿದರು.
