ಬೆಂಗಳೂರು: ರಾಜ್ಯ ಸರ್ಕಾರಿ ವೈದ್ಯಾಧಿ­ಕಾ­ರಿ­ಗಳ ಹತ್ತು ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ ವೈದ್ಯರು ಬುಧವಾರ ಬೇಷರತ್ತಾಗಿ ರಾಜೀನಾಮೆ ಹಿಂದಕ್ಕೆ ಪಡೆದಿದ್ದಾರೆ. ಇದರೊಂದಿಗೆ ಎರಡು ದಿನಗಳಿಂದ ಇದ್ದ ಬಿಕ್ಕಟ್ಟು  ಬಗೆಹರಿದಂತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ಯು.ಟಿ.ಖಾದರ್‌, ಲೋಕೋಪಯೋಗಿ ಸಚಿವ ಡಾ.ಎಚ್‌.­ಸಿ. ಮಹದೇವಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಬುಧವಾರ ಸಂಜೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಪ್ರತಿನಿಧಿಗಳ ಜೊತೆ ವಿಧಾನಸೌಧದಲ್ಲಿ ಸಂಧಾನ ಸಭೆ ನಡೆಸಿದರು.

dr

ವೈದ್ಯರ ಬೇಡಿಕೆ ಮತ್ತು ರಾಜೀನಾ­ಮೆಗೆ ಸಂಬಂಧಿಸಿದಂತೆ ದೀರ್ಘ ಚರ್ಚೆ ನಡೆಯಿತು. ಬಳಿಕ ಜಂಟಿ ಪತ್ರಿಕಾ­ಗೋಷ್ಠಿ­ಯಲ್ಲಿ ವೈದ್ಯರ ಬೇಡಿಕೆಗಳನ್ನು ಒಪ್ಪಿ­ಕೊಂ­ಡಿ­ರುವ ವಿಷಯವನ್ನು ಆರೋಗ್ಯ ಸಚಿವ ಖಾದರ್‌ ಪ್ರಕಟಿಸಿದರು. ರಾಜೀ­ನಾಮೆ ಹಿಂಪಡೆಯುವುದಾಗಿ ಸಂಘದ ಅಧ್ಯಕ್ಷ ಡಾ.ಟಿ.ಎ. ವೀರಭದ್ರಯ್ಯ  ಘೋಷಿಸಿದರು.

ಪರಿಶೀಲನೆ: ‘ವೈದ್ಯರ ಹಲವು ಬೇಡಿಕೆ­ಗಳನ್ನು ನಾವು ಒಪ್ಪಿಕೊಂಡಿದ್ದೇವೆ. ಕೆಲವನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದೇವೆ.ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡಲಾಗುವುದು. ಆದರೆ ಹುದ್ದೆಗಳ ಭರ್ತಿಗೆ ತಮಿಳುನಾಡು ಮಾದರಿ ಅನುಸರಿ­ಸ­ಬೇಕೆಂಬ ಕೋರಿಕೆಯನ್ನು ಒಪ್ಪಿಲ್ಲ. ಕರ್ನಾ­ಟಕ ಲೋಕಸೇವಾ ಆಯೋಗದ ಮೂಲಕವೇ ನೇಮಕಾತಿ ನಡೆಸಲಾಗುವುದು. 989 ತಜ್ಞ ವೈದ್ಯರು, 321 ವೈದ್ಯಾಧಿಕಾರಿಗಳು ಮತ್ತು 2,500 ಶುಶ್ರೂಷಕರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.

By Suddi9

Leave a Reply

Your email address will not be published. Required fields are marked *