Published On: Wed, Oct 20th, 2021

ಬಿ.ಸಿ.ರೋಡು: ಎಲ್ಲೈಸಿ ಪ್ರತಿನಿಧಿಗಳ ೨೨ನೇ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ ಗ್ರಾಹಕರ ತ್ವರಿತ ಸೇವೆಗೆ ಆನ್ ಲೈನ್ ಸೌಲಭ್ಯ: ಬಿಂದು ರಾಬಟ್ ð

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಎಲ್ಲೈಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ೨೨ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾಧಕ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಉಡುಪಿ ವಿಭಾಗೀಯ ಹಿರಿಯ ಪ್ರಬಂಧಕಿ ಬಿಂದು ರಾಬರ್ಟ್ ಮತ್ತಿತರರು ಇದ್ದಾರೆ.19btl-LICದೇಶದಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯು ತನ್ನ ಗ್ರಾಹಕರು ಮತ್ತು ಪ್ರತಿನಿಧಿಗಳಿಗೆ ತ್ವರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಆನ್ ಲೈನ್ ಸೌಲಭ್ಯ ಒದಗಿಸಿದ ಪರಿಣಾಮ ಗರಿಷ್ಟ ಮಟ್ಟದ ಸಾಧನೆ ದಾಖಲಿಸಲು ಸಾಧ್ಯವಾಗಿದೆ ಎಂದು ಎಲ್ಲೈಸಿ ಉಡುಪಿ ವಿಭಾಗೀಯ ಹಿರಿಯ ಪ್ರಬಂಧಕಿ ಬಿಂದು ರಾಬಟ್  ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಎಲ್ಲೈಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ೨೨ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಂಟ್ವಾಳ ಶಾಖೆ ಮುಖ್ಯ ಪ್ರಬಂಧಕ ಪಿ.ಸಿ.ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾರುಕಟ್ಟೆ ವಿಭಾಗೀಯ ಅಧಿಕಾರಿ ರಮೇಶ ಭಟ್ ಮತ್ತು ಮಾರಾಟ ವಿಭಾಗೀಯ ಅಧಿಕಾರಿ ಸದಾಶಿವ ಭಟ್ ಮಾತನಾಡಿ ದೇಶದ ಆರ್ಥಿಕತೆಯಲ್ಲಿ ಎಲ್ಲೈಸಿ ಸಂಸ್ಥೆಯ ಪಾತ್ರ ಮಹತ್ತರವಾಗಿದೆ ಎಂದರು.

ಬಂಟ್ವಾಳ ಉಪ ಶಾಖಾಧಿಕಾರಿ ಸುಂದರ ಮೇರ, ಹಿರಿಯ ಪ್ರತಿನಿಧಿ ಮಹಾಬಲ ಆಳ್ವ ಶುಭ ಹಾರೈಸಿದರು. ಇದೇ ವೇಳೆ ಜೇಸಿ ರಾಷ್ಟ್ರೀಯ ತರಬೇತುದಾರ ಕೃಷ್ಣ ಮೋಹನ್ ಇವರಿಂದ ತರಬೇತಿ, ಸಾಧಕ ಪ್ರತಿನಿಧಿಗಳಿಗೆ ಸನ್ಮಾನ, ಗರಿಷ್ಟ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಿತು. ಹಿರಿಯ ಪ್ರತಿನಿಧಿ ಲೂವಿಸ್ ಮಸ್ಕರೇನಸ್ ಸನ್ಮಾನಿತರನ್ನು ಪರಿಚಯಿಸಿ, ರೋಹಿದಾಸ್ ಕುಂದರ್ ಅನಿಸಿಕೆ ವ್ಯಕ್ತಪಡಿಸಿದರು. ರಾಜಶ್ರೀ ಗುಣಪಾಲ ಪೆರಾಡ್ಕರ್ ಪ್ರಾರ್ಥಿಸಿದರು.

ಕಾರ್ಯಕ್ರಮ ಸಂಚಾಲಕ ಯಶೋಧರ ಗೌಡ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಪ್ರತಿನಿಧಿ ರಾಜಾ ಬಂಟ್ವಾಳ್ ವಂದಿಸಿದರು. ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತು ಪ್ರತಿನಿಧಿ ನವೀನ್ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು. ಭವಾನಿ ನಾರಾಯಣ ಅಮೀನ್ ಮತ್ತು ವಿಶಾಲಾಕ್ಷಿ ಬ್ರಹ್ಮರಕೂಟ್ಲು ಸಹಕರಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter