ಮುಂಬಯಿ : ದ.ಕ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಬಾಹ್ರೇಯ್ನ್ ಸಂಸ್ಥೆಯಲ್ಲಿ ಸುಮಾರು ಮೂರು ದಶಕಗಳ ಕಾಲ ಸೇವೆಸಲ್ಲಿಸಿದ ಎಸ್.ಮೊಹಮ್ಮದ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಬಾಹ್ರೇಯ್ನ್ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಕಚೇರಿಯಲ್ಲಿ ನಡೆಯಿತು.
ಸುಮಾರು ೩೦ವರ್ಷಗಳಿಂದ ಬಾಹ್ರೇಯ್ ನಲ್ಲಿ ನೆಲೆಸಿ ಇತ್ತೀಚೆಗೆ ವೃತ್ತಿ ನಿವೃತ್ತಿಹೊಂದಿ ತಾಯ್ನಾಡಿಗೆ ಮರಳುತ್ತಿರುವ ಸಂದರ್ಭ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಬೀಳ್ಕೋಡಲಾಯಿತು.
ದ.ಕ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ರಝಾಕ್ ಹಾಜಿ ಕೋಟೆಮನೆ, ಉಪಾಧ್ಯಕ್ಷ ಅಬೂಬಕ್ಕರ್ ಕುನೈಝಿ, ಕಾರ್ಯದರ್ಶಿಗಳಾದ ಸುಲೈಮಾನ್ ನಂದಾವರ್, ಸಿರಾಜ್, ಕೋಶಾಧಿಕಾರಿ ಹಂಝ ಮೊಗ್ರಲ್, ಕ್ರೀಡಾ ಸಮಿತಿ ಕಾರ್ಯದರ್ಶಿ ಮೊಹಮ್ಮದ್ ಸಯ್ಯದ್ ಕೋಟೆ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಅಬ್ದುಲ್ ಕರೀಂ, ಸಲಹೆಗಾರ ರಶೀದ್ ಇದ್ರೀಸ್ ಉಪಸ್ಥಿತರಿದರು.
