ಮುಂಬಯಿ : ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿ, ಮಾಜಿ ಕೇಂದ್ರ ಸಚಿವ, ಸಂಸದ ಡಾ| ಎಂ.ವೀರಪ್ಪ ಮೊಯಿಲಿ ಅವರ ‘ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ-೨೦೨೦ ಪ್ರಾಪ್ತಿಯಾಗಿದ್ದು ನವದೆಹಲಿಯಲ್ಲಿ ಜರುಗಿದ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಭಾರತ ಸರಕಾರದ ಸಂಸ್ಕೃತಿ ಮಂತ್ರಾಲಯದ ಸ್ವಾಯಂತಿಶಾಸಿ ಸಂಸ್ಥೆ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಚಂದ್ರಶೇಖರ ಕಂಬಾರ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಪುರಸ್ಕಾರ ಪ್ರದಾನಿಸಿ ಡಾ| ಮೊಯಿಲಿ ಅವರನ್ನು ಗೌರವಿಸಿ ಅಭಿನಂದಿಸಿದರು.
ಸಮಾರಂಭದಲ್ಲಿ ದೇವಾಡಿಗ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಅಧ್ಯಕ್ಷ ರವಿ ಎಸ್.ದೇವಾಡಿಗ, ಮಾಜಿ ಹಿರಿಯಡ್ಕ ಮೋಹನ್‌ದಾಸ್, ಉದ್ಯಮಿ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ಉಪಸ್ಥಿತರಿದ್ದು ಡಾ| ಮೊಯಿಲಿ ಅವರಿಗೆ ಶುಭಕೋರಿದರು.
