ಮುಂಬಯಿ : ಮಾಜಿ ಕೇಂದ್ರ ಸಚಿವ, ರಾಜ್ಯ ಸಭಾ ಸಂಸದ, ಅಖಿಲ ಭಾರತೀಯ ಕಾಂಗ್ರೆಸ್ (ಐ) ಪಕ್ಷದ ಸಕ್ರೀಯ ಸದಸ್ಯ ಆಸ್ಕರ್ ಫೆರ್ನಾಂಡಿಸ್ (೮೦.) ಸೆ.೧೩ ರಂದು ಸೋಮವಾರ ಮಂಗಳೂರು ಅಲ್ಲಿನ ಯೆನೇಪೊಯಾ ಆಸ್ಪತೆಯಲ್ಲಿ ನಿಧನರಾದರು.
ಉಡುಪಿ ಅಂಬಲಪಾಡಿ ಬ್ರಹ್ಮಗಿರಿ ಇಲ್ಲಿನ ಡೋರಿಸ್ ರೆಸ್ಟ್ ಹೆವೆನ್ ಮೂಲತಃ ಆಸ್ಕಡಿ ದೆಹಲಿ ನಿವಾಸದಿಂದ ಸದ್ಯ ಮಂಗಳೂರು ಅತ್ತಾವರ ಇಲ್ಲಿ ವಾಸವಾಗಿದ್ದರು. ಕಳೆದ ಜುಲೈ.೨೦ ರಂದು ಯೋಗ ನಿರತರಾಗಿದ್ದಾಗಲೇ ಕುಸಿದು ಬಿದ್ದು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಇಲ್ಲಿನ ಸರ್ಕಾರಿ ಕಾಂಪೋಸಿಟ್ ಪಿಯು ಕಾಲೇಜಿನ ಮುಖ್ಯಸ್ಥ ಮತ್ತು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೊದಲ ಅಧ್ಯಕ್ಷ ರೋಕ್ ಫೆರ್ನಾಂಡಿಸ್ ಮತ್ತು ಭಾರತದ ಮೊದಲ ಮಹಿಳಾ ಮ್ಯಾಜಿಸ್ಟ್ರೇಟ್ ಲಿಯೊನಿಸ್ಸಾ ಎಂ.ಫೆರ್ನಾಂಡಿಸ್ (ಮಥಾಯಸ್) ದಂಪತಿ ಸುಪುತ್ರರಾಗಿ (೨೭.ಮಾರ್ಚ್.೧೯೪೧) ಉಡುಪಿಯಲ್ಲಿರುವ ಕುಟುಂಬದ ಎಸ್ಟೇಟ್‌ನಲ್ಲಿ ಆಸ್ಕರ್ ಜನಿಸಿದರು. ಪತ್ನಿ ಬ್ಲಾಸಮ್ ಫೆರ್ನಾಂಡಿಸ್, ಸುಪುತ್ರಿ ಓಶಾನಿ ಫೆರ್ನಾಂಡಿಸ್, ಅಳಿಯ ಮಾರ್ಕ್ ಸಲ್ಡಾನ್ಹಾ, ಸುಪುತ್ರ ಓಶನ್ ಫೆರ್ನಾಂಡಿಸ್, ಸೊಸೆ ಫ್ರೇಜಿಲ್ ಕ್ವಾಡ್ರ‍್ರಸ್ ಅವರನ್ನೊಳಗೊಂಡ ಚಿಕ್ಕ ಸಂಸಾರ.
ಉಡುಪಿ ಜಿಲ್ಲೆಯ ಉಡುವರ ಮೂಲದ ರೋಮನ್ ಕ್ಯಾಥೊಲಿಕ್ ಧರ್ಮದ ಮಂಗಳೂರುನ ಫೆರ್ನಾಂಡಿಸ್ -ಪ್ರಭು ಕುಲಕ್ಕೆ ಸೇರಿದ್ದ ರೋಕ್ ಫೆರ್ನಾಂಡಿಸ್ ದಂಪತಿಯ ೧೨ ಮಕ್ಕಳಲ್ಲಿ ಆಸ್ಕರ್ ಓರ್ವರು. ಬಲವಾದ ಕ್ಯಾಥೊಲಿಕ್ ಹಿನ್ನೆಲೆಯೊಂದಿಗೆ ಬೆಳೆದ ಆಸ್ಕರ್ ಬಾಲ್ಯದಲ್ಲಿ ಚರ್ಚ್ನ ಬಲಿಪೀಠದ ಸೇವಕರ್ತ ಆಗಿ ಮುಂದೆ ಯುವಕರಾಗಿ ಚರ್ಚ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಯುಯ ಶಕ್ತಿಯೊಂದಿಗೆ ಸಮಾಜ ಸೇವೆಯಲ್ಲಿ ಸಕ್ರೀಯರಾಗಿ ಜನಾನುರೆಣಿಸಿ ರಾಷ್ಟ್ರ ಮಟ್ಟದ ರಾಜಕಾರಣಿಯಾಗಿ ಬೆಳದವರು. ಆಸ್ಕರ್ ತನ್ನ ತಂದೆ ರೋಕ್ ಫೆರ್ನಾಂಡಿಸ್ ಸ್ಮಾರಣಾರ್ಥ ೨೦೦೨ರಲ್ಲಿ ಉಡುಪಿ ಅಂಬಲ್‌ಪಾಡಿಯಲ್ಲಿ ಗ್ಲೋಯಿನ್‌ಸ್ಟಾರ್ ಅಕಾಡೆಮಿ ಸಮಗ್ರ ಅಭಿವೃದ್ಧಿ ಶಾಲೆಯನ್ನು ಸೇವಾರ್ಪಣೆಗೈದರು.
ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಿಸಿಲಿಯಾ ಕಾನ್ವೆಂಟ್ ಉಡುಪಿ ಇಲ್ಲಿ ಪೂರೈಸಿ ಮತ್ತು ಪ್ರೌಢ ಶಿಕ್ಷಣವನ್ನು ಬಿ.ಎ.ಐ ಶಿಕ್ಷಣವನ್ನು ಬೋರ್ಡ್ ಹೈಸ್ಕೂಲ್ ಮತ್ತು ಕಾಲೇಜ್ ವಿದ್ಯಾಭ್ಯಾಸವನ್ನು ಎಂ.ಜಿ.ಎಂ.ಕಾಲೇಜ್ ಉಡುಪಿ ಪೂರೈಸಿರುವರು. ರೈತಾಪಿ, ಕೃಷಿ ವೃತ್ತಿಯ ಇವರು ಕ್ರಮೇಣ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತನಾಗಿ ರಾಷ್ಟçಮಟ್ಟದಲ್ಲಿ ಸೇವೆ ಸಲ್ಲಿಸಿದ್ದರು.
೧೯೭೨-೭೬ರಲ್ಲಿ ಉಡುಪಿ ಮುನ್ಸಿಪಲ್ ಕೌನ್ಸಿಲ್ ಸದಸ್ಯರಾಗಿ, ಉಡುಪಿ ಲೋಕಸಭಾ ಕ್ಷೇತ್ರದಿಂದ ಏಳನೇ ಲೋಕಸಭೆ ಸದಸ್ಯರಾಗಿ (೧೯೮೦-೮೪), ಎಂಟನೇ ಲೋಕಸಭೆ ಸದಸ್ಯರಾಗಿ (೧೯೮೪-೮೯), ಒಂಭತ್ತನೇ ಲೋಕಸಭೆ ಸದಸ್ಯರಾಗಿ (೧೯೮೯-೯೧), ಹತ್ತನೇ ಲೋಕಸಭೆ ಸದಸ್ಯರಾಗಿ (೧೯೯೧-೯೬), ಹನ್ನೊಂದನೇ ಲೋಕಸಭೆ ಸದಸ್ಯರಾಗಿ (೧೯೯೬-೨೦೦೦) ಸತತ ಐದು ಭಾರಿ ಎಂಪಿ ಆಗಿದ್ದು ಬಳಿಕ (೧೯೯೮-೨೦೦೪) ರಿಂದ ರಾಜ್ಯಸಭಾ ಸದಸ್ಯರಾಗಿ ರಾಜ್ಯಸಭೆಗೆ ಚುನಾಯಿತರಾಗಿ ಕೇಂದ್ರ ಸಚಿವರಾಗಿದ್ದರು. ೧೯೮೬ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ೧೯೯೦ರಲ್ಲಿ ಇಂಧನ ಸಚಿವಾಲಯದ ಸಮಾಲೋಚನಾ ಸಮಿತಿ ಸದಸ್ಯ, ೧೯೯೯-ಫೆಬ್ರವರಿಯಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಜುಲೈ ೨೦೦೪ ರಲ್ಲಿ ಮತ್ತೆ ರಾಜ್ಯಸಭೆಗೆ ಮರು ಆಯ್ಕೆಯಾಗಿ ರಾಜ್ಯ ಸಚಿವರು (ಸ್ವತಂತ್ರ) ೨೦೦೬-೨೦೦೯ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ) ೨೦೦೯ ರಿಂದ ಸದಸ್ಯ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಷ್ಟಿçÃಯ ಮಂಡಳಿ, ೨೦೦೯ರಿಂದ ಮಾನವ ಸಂಪನ್ಮೂ ಲ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಇಂದಿರಾ ಗಾಂಧಿ, ರಾಜೀವ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಗಾಂಧಿ ಪರವಾರದ ಆಪ್ತ ವಲಯದಲ್ಲಿ ಗುರುತಿಸಿ ಕೊಂಡಿದ್ದು, ಮಾಜಿ ಪ್ರಧಾನಿ ಸ್ವರ್ಗೀಯ ರಾಜೀವ್ ಗಾಂಧಿ ಅವರ ಸಂಸದೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.೧೯೮೫ ರಿಂದ ಪ್ರಧಾನ ಮಂತ್ರಿ ಸಂಸದೀಯ ಕಾರ್ಯದರ್ಶಿ, ೧೯೯೬ ರಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ, ಯುಪಿಎ ಸರ್ಕಾರದಲ್ಲಿ ಭಾರತ ಸರ್ಕಾರದ ಸಾರಿಗೆ, ರಸ್ತೆ ಮತ್ತು ಹೆದ್ದಾರಿಗಳು ಮತ್ತು ಕಾರ್ಮಿಕ ಮತ್ತು ಉದ್ಯೋಗದ ಕೇಂದ್ರ ಸಚಿವ ಸಚಿವರಾಗಿದ್ದರು. ಅವರು ಪ್ರಸ್ತುತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆಪ್ತರಲ್ಲಿ ಓರ್ವರಾಗಿ ಕಾಂಗ್ರೆಸ್ ಪಕ್ಷದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ದಿಟ್ಟ ನಾಯಕರಾಗಿದ್ದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದು ಈ ಹಿಂದೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಅವರ ಭಾರತದ ಮೊದಲ ಯುಪಿಎ ಸರ್ಕಾರದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಆಗಿ ಸೇವೆ ಸಲ್ಲಿಸಿದರು.
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ, ಎನ್‌ಆರ್‌ಐ ವ್ಯವಹಾರಗಳು, ಯುವ ಮತ್ತು ಕ್ರೀಡಾ ವ್ಯವಹಾರಗಳು ಮತ್ತು ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವರು, ವಿದೇಶಾಂಗ ಭಾರತೀಯ ವ್ಯವಹಾರಗಳ ಸಚಿವಾಲಯದ ಕ್ರೀಡಾ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಸೇರಿದಂತೆ ಹಲವಾರು ಖಾತೆಗಳ ಸಚಿವತ್ವ ಹೊಂದಿದ್ದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಕೌನ್ಸಿಲ್ ಸದಸ್ಯರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದರು. ಹೀಗೇ ಕೃಷಿ ಸಮಿತಿ ಸದಸ್ಯ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಮಾಲೋಚನಾ ಸಮಿತಿ, ೨೦೦೦-೨೦೦೪ ಕನ್ವೀನರ್, ಎಚ್‌ಐವಿ-ಏಡ್ಸ್ ಕುರಿತು ಸಂಸದೀಯ ವೇದಿಕೆ, ಯುವ ವ್ಯವಹಾರ ಇವೆಲವುಗಳ ಜೊತೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಸಾಹಿತ್ಯ, ಕಲಾತ್ಮಕ ಮತ್ತು ವೈಜ್ಞಾನಿಕ ಸಾಧನೆಗಳಲ್ಲಿ ವಿಶೇಷ ಆಸಕ್ತರಾಗಿದ್ದರು.
ಗ್ರಾಮೀಣ ವಸತಿ ಮತ್ತು ಪರಿಹಾರ ಕಾರ್ಯ; ಭತ್ತದಲ್ಲಿ ಅತಿ ಹೆಚ್ಚು ಇಳುವರಿಗಾಗಿ ಸಿಂಡಿಕೇಟ್ ಅಗ್ರಿಕಲ್ಚರಲ್ ಫೌಂಡೇಶನ್ ಪ್ರಶಸ್ತಿ ಮತ್ತು ಕೃಷಿಗಾಗಿ ಕರ್ನಾಟಕ ಸರ್ಕಾರಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದರು. ಸದಾ ಯುವ ಜನತೆಯನ್ನು ಸಂಘಟಿಸುವುದರಲ್ಲಿ ಅಪ್ರತಿಮರಾಗಿದ್ದರು. ಕ್ರೀಡೆ, ಕ್ಲಬ್‌ಗಳು, ನೆಚ್ಚಿನ ಕಾಲಕ್ಷೇಪಗಳು ಮತ್ತು ಮನರಂಜನೆಗೆ ಸದಾ ಒತ್ತು ನೀಡುತ್ತಿದ್ದ ಇವರು ಜಾಲಿ ಕ್ಲಬ್ ಉಡುಪಿ ಸ್ಥಾಪಿಸಿದ್ದರು. ಕ್ರೀಡೆ ಮತ್ತು ಆಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುತ್ತಿದ್ದರು. ಯುಎಸ್‌ಎಸ್‌ಆರ್, ಯುಗೊಸ್ಲಾವಿಯ, ಯುಎನ್‌ಸಿಟಿಎಡಿ ಇದರ ಭಾರತೀಯ ನಿಯೋಗದ ಸದಸ್ಯರಾಗಿ, ಬೆಲ್ಗೆಡ್, ೧೯೮೩ರಲ್ಲಿ ಸ್ಪೇನ್, ಆಸ್ಟ್ರೇಲಿಯಾ ಮತ್ತು ಮಧ್ಯಪ್ರಾಚ್ಯ ಭೇಟಿ ನೀಡಿದ್ದರು. ಕೌನ್ಸಿಲ್ ಆಫ್ ಇಂಡಿಯನ್ ಇನ್‌ಸ್ಟ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು ಇದರ೧೯೮೦-೮೨ ಮತ್ತು ೨೦೦೦-೨೦೦೪ ಅವಧಿಯಲ್ಲಿ ಸದಸ್ಯರಾಗಿದ್ದರು.
